ವಿಟ್ಲ: ವೃದ್ಧ ದಂಪತಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಚರ್ಚ್ ಪಾದ್ರಿ ವಜಾ

 ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಮನೆಲಾ ಚರ್ಚ್‌ ವ್ಯಾಪ್ತಿಯಲ್ಲಿ ವೃದ್ಧ ದಂಪತಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಚರ್ಚ್ ಪಾದ್ರಿಯನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತ ಆದೇಶ ಹೊರಡಿಸಿದೆ.
ಘಟನೆಯ ಆರೋಪಿಯಾಗಿರುವ ಮನೆಲಾ ಚರ್ಚ್ ಧರ್ಮಗುರು ಫಾ. ನೆಲ್ಸನ್ ಓಲಿವೆರಾ ಅವರ ಚರ್ಚಿನ ಧಾರ್ಮಿಕ ಕರ್ತವ್ಯಗಳಿಗೆ ಬೇರೋಬ್ಬ ಧರ್ಮಗುರುವನ್ನು ನೇಮಕ ಮಾಡಲಾಗಿದೆ ಎಂದು ಅದು ತಿಳಿಸಿದೆ.

ಜಾರ್ಜ್ ಮಾಂತೇರಿಯೋ (79) ಮತ್ತು ಪತ್ನಿ ಫಿಲೋಮಿನಾ (72) ಹಲ್ಲೆಗೊಳಗಾದ ವೃದ್ಧ ದಂಪತಿ. ಪೆರಿಯಲ್ತಡ್ಕ ಕ್ರಿಸ್ತ‌ ಕಿಂಗ್ ಪೆರಿಶ್‌ನ ಧರ್ಮಗುರು ನೆಲ್ಸನ್ ಒಲಿವೇರಾ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮನೆ ಶುದ್ಧಗೊಳಿಸಲು ವೃದ್ಧ ದಂಪತಿಯ ಮನೆಗೆ ಧರ್ಮಗುರು ಭೇಟಿ ನೀಡಿದ್ದರು. ಈ ವೇಳೆ ಚರ್ಚ್‌ಗೆ ದೇಣಿಗೆ ನೀಡದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕ್ರೈಸ್ತ ಫಾದರ್‌, ವೃದ್ಧನನ್ನು ಎಳೆದಾಡಿ ಹೊಡೆದಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ ಆಡಳಿತ ಹಲ್ಲೆ ಬಗ್ಗೆ ಕಾನೂನಿನಡಿ ಪ್ರಕರಣ ದಾಖಲಾಗಿದ್ದು ದೇಶದ ಕಾನೂನಿನಂತೆ ಒಂದು ಕಡೆ ತನಿಖೆ ನಡೆಸುತ್ತಿದ್ದರೆ ಧರ್ಮ ಪ್ರಾಂತ ಕೂಡ ತನ್ನ ಆಂತರಿಕ ತನಿಖೆಯನ್ನು ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

ಪ್ರಮುಖ ಸುದ್ದಿ :-   ನಾಗಮಂಗಲ‌ ಗಲಭೆ : ಆರ್ ಅಶೋಕ, ಶೋಭಾ ಕರಂದ್ಲಾಜೆ ವಿರುದ್ಧ ಎಫ್‌ ಐ ಆರ್‌

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement