ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣ ಎನ್‌ಐಎಗೆ ವರ್ಗಾವಣೆ

ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ (MHA) ಸೋಮವಾರ ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಹಸ್ತಾಂತರಿಸಿದೆ ಸೋಮವಾರ ಮಧ್ಯಾಹ್ನ ಎನ್‌ಐಎ ಅಧಿಕಾರಿಗಳು ಎಫ್‌ಐಆರ್‌ ದಾಖಲಿಸಿದ್ದಾರೆ
ರಾಮೇಶ್ವರಂ ಕೆಫೆಯ ಬ್ರೂಕ್‌ಫೀಲ್ಡ್ ಔಟ್‌ಲೆಟ್‌ನಲ್ಲಿ ಶುಕ್ರವಾರ (ಮಾರ್ಚ್ 1) ಸಂಭವಿಸಿದ ಕಡಿಮೆ ತೀವ್ರತೆಯ ಸ್ಫೋಟದಲ್ಲಿ ಕನಿಷ್ಠ 10 ಜನರು ಗಾಯಗೊಂಡಿದ್ದಾರೆ. ಕೆಫೆಯಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

ಮಾರ್ಚ್ 1 ರಂದು ಮಧ್ಯಾಹ್ನ 1 ಗಂಟೆಗೆ ಸ್ಫೋಟ ಸಂಭವಿಸಿದ್ದು, ಸಂಕಿತ ಕೆಫೆಯೊಳಗೆ ಚೀಲ ಸ್ಫೋಟಕ ತುಂಬಿದ ಚೀಲ ಇಟ್ಟು ಹೋಗಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ಸ್ಫೋಟವನ್ನು ನಡೆಸಲು ಟೈಮರ್ ಹೊಂದಿರುವ ಐಇಡಿ ಸಾಧನವನ್ನು ಬಳಸಲಾಗಿದೆ ಎಂದು ಪೊಲೀಸ್ ತನಿಖೆಯು ಇದುವರೆಗೆ ಸೂಚಿಸಿದೆ. ಆದರೆ ಉಗ್ರರ ಕರಿನೆರಳು ಕಂಡುಬಂದ ಬಳಿಕ ಕೇಂದ್ರ ಅಪರಾಧ ವಿಭಾಗ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಗೊಂಡಿತ್ತು. ಆದರೆ ಈ ಸ್ಫೋಟ ಪ್ರಕರಣದಲ್ಲಿ ಉಗ್ರರ ಕರಿನೆರಳು ಕಂಡುಬಂದ ಬಳಿಕ ಕೇಂದ್ರ ಅಪರಾಧ ವಿಭಾಗ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಗೊಂಡಿತ್ತು. ಗೃಹ ಸಚಿವಾಲಯ ಇದೀಗ ಪ್ರಕರಣದ ಗಂಭೀರತೆ ಪರಿಗಣಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ಹಸ್ತಾಂತರಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಗ್ಯಾರಂಟಿಗಳ ಹೆಸರಲ್ಲಿ ಕರ್ನಾಟಕದಲ್ಲಿ ಲೂಟಿ ಹೊಡಿತಿದ್ದಾರೆ.. ಮಹಾರಾಷ್ಟ್ರದಲ್ಲಿ ಈ ಘೋಷಣೆ ಮಾಡ್ಬೇಡಿ ; ನಿರ್ಮಲಾ ಸೀತಾರಾಮನ್ ಎದುರು ಹೈಡ್ರಾಮಾ..!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement