ಸಂದೇಶಖಾಲಿ ಪ್ರಕರಣ : 12 ಕೋಟಿ ರೂ. ಮೌಲ್ಯದ ಷಹಜಹಾನ್ ಶೇಖ್ ಆಸ್ತಿ ಜಪ್ತಿ ಮಾಡಿದ ಇ.ಡಿ.

ಕೋಲ್ಕತ್ತಾ : ಈಗ ಅಮಾನತಾಗಿರುವ ಟಿಎಂಸಿ ನಾಯಕ ಶಹಜಹಾನ್ ಶೇಖ್ ಗೆ ಸೇರಿದ 12.78 ಕೋಟಿ ರೂ.ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಮಂಗಳವಾರ ಜಾರಿ ನಿರ್ದೇಶನಾಲಯ (ಇಡಿ) ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.
ಈ ಆಸ್ತಿಯಲ್ಲಿ ಅಪಾರ್ಟ್‌ಮೆಂಟ್, ಕೃಷಿ ಭೂಮಿ, ಮೀನುಗಾರಿಕೆಗೆ ಭೂಮಿ ಮತ್ತು ಕಟ್ಟಡದಂತಹ 14 ಸ್ಥಿರ ಆಸ್ತಿಗಳು ಸೇರಿವೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.
ಟಿಎಂಸಿ ಮಾಜಿ ಸದಸ್ಯ ಶೇಖ್ ಸಂದೇಶಖಾಲಿ ಲೈಂಗಿಕ ದೌರ್ಜನ್ಯ ಮತ್ತು ಭೂಹಗರಣ ಆರೋಪಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಆಪಾದಿತ ಪಡಿತರ ಹಗರಣ ಪ್ರಕರಣದಲ್ಲಿ ಶೇಖ್ ಮನೆ ಮೇಲೆ ದಾಳಿ ನಡೆಸಲು ಜನವರಿ 5 ರಂದು ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿಗೆ ತೆರಳಿದ್ದ ಇಡಿ ತಂಡದ ಮೇಲೆ ನೂರಾರು ಬೆಂಬಲಿಗರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಮೂವರು ಇ.ಡಿ. ಅಧಿಕಾರಿಗಳು ಗಾಯಗೊಂಡಿದ್ದರು. ನಂತರ ಷಹಜಹಾನ್ ಶೇಖ್‌ ಪರಾರಿಯಾಗಿದ್ದ. ಬಂಧನದಿಂದ ತಪ್ಪಿಸಿಕೊಂಡು 55 ದಿನಗಳ ಕಾಲ ಪರಾರಿಯಾಗಿದ್ದ ಆತನನ್ನು ಫೆಬ್ರವರಿ 29 ರಂದು ಬಂಧಿಸಲಾಗಿತ್ತು. ನಂತರ ಟಿಎಂಸಿ (TMC) ಆತನನ್ನು ಪಕ್ಷದಿಂದ ಅಮಾನತುಗೊಳಿಸಿತ್ತು.

ಪ್ರಮುಖ ಸುದ್ದಿ :-   ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲಗೆ ಜಾಮೀನು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement