ಲೋಕಸಭೆ ಚುನಾವಣೆ : ತಮಿಳುನಾಡಿನಲ್ಲಿ ನಟ ಶರತ್ ಕುಮಾರ ನೇತೃತ್ವದ ಎಐಎಸ್‌ಎಂಕೆ-ಬಿಜೆಪಿ ಮೈತ್ರಿ

ಚೆನ್ನೈ : ಖ್ಯಾತ ನಟ ಆರ್ ಶರತ್ ಕುಮಾರ ನೇತೃತ್ವದ ಅಖಿಲ ಭಾರತ ಸಮತುವ ಮಕ್ಕಳ್ ಕಚ್ಚಿ (ಎಐಎಸ್‌ಎಂಕೆ) ಪಕ್ಷವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಗೆ ಬೆಂಬಲ ನೀಡುವುದಾಗಿ ಘೋಷಿಸಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾತುಕತೆಯನ್ನು ಪೂರ್ಣಗೊಳಿಸಲಾಗಿದೆ ಮತ್ತು ತಮಿಳುನಾಡಿನಲ್ಲಿ ಬಿಜೆಪಿಯೊಂದಿಗೆ ‘ಜಂಟಿಯಾಗಿ’ ಕೆಲಸ ಮಾಡಲು ನಿರ್ಧರಿಸಲಾಗಿದೆ ಎಂದು ಪಕ್ಷ ಹೇಳಿದೆ.
ಈ ಹಿಂದೆ ಎಐಎಸ್‌ಎಂಕೆ ಪಕ್ಷವು ಎಐಎಡಿಎಂಕೆ ಮೈತ್ರಿಕೂಟದಲ್ಲಿತ್ತು. ಬಿಜೆಪಿಯೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದು ಅಖಿಲ ಭಾರತ ಸಮತುವ ಮಕ್ಕಳ ಕಚ್ಚಿ (ಎಐಎಸ್‌ಎಂಕೆ) ತಿಳಿಸಿದೆ.

ಕೇಂದ್ರ ಸಚಿವ ಎಲ್ ಮುರುಗನ್, ರಾಷ್ಟ್ರೀಯ ಕಾರ್ಯದರ್ಶಿ ಎಚ್. ರಾಜಾ ಮತ್ತು ಪಕ್ಷದ ತಮಿಳುನಾಡು ಉಸ್ತುವಾರಿ ಅರವಿಂದ ಮೆನನ್ ಅವರ ಬಿಜೆಪಿ ನಿಯೋಗವು ಮಂಗಳವಾರ ಅವರನ್ನು ಭೇಟಿ ಮಾಡಿದೆ ಎಂದು ಶರತಕುಮಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಲೋಕಸಭೆ ಚುನಾವಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿರ್ಧರಿಸಲು ತಮ್ಮ ಪಕ್ಷವು ಈಗಾಗಲೇ ಅವರಿಗೆ ಅಧಿಕಾರ ನೀಡಿದೆ ಎಂದು ಅವರು ಹೇಳಿದರು.
ಸಮೃದ್ಧ ಭಾರತ, ಮತ್ತೊಮ್ಮೆ ಉತ್ತಮ ಆಡಳಿತ (ಕೇಂದ್ರದಲ್ಲಿ) ಮತ್ತು ಏಕತೆಯನ್ನು ಎತ್ತಿಹಿಡಿಯಲು ಮತ್ತು ಮೂರನೇ ಬಾರಿಗೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲು, ನಾನು ಬಿಜೆಪಿಯೊಂದಿಗೆ ಜಂಟಿಯಾಗಿ ಕೆಲಸ ಮಾಡಲು ನಿರ್ಧರಿಸಿದ್ದೇನೆ” ಎಂದು ಅವರು ಹೇಳಿದರು.
ಈ ಸಂಬಂಧ ಹೆಚ್ಚಿನ ವಿವರಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದಕ್ಕೂ ಮುನ್ನ ಜಿ.ಕೆ. ವಾಸನ್ ನೇತೃತ್ವದ ತಮಿಳು ಮಾಣಿಲ ಕಾಂಗ್ರೆಸ್ ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿತ್ತು.

ಪ್ರಮುಖ ಸುದ್ದಿ :-   ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲಗೆ ಜಾಮೀನು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement