ತಮಿಳುನಾಡು: ಬಿಜೆಪಿ ಸೇರಿದ ನಟ ರಜನಿಕಾಂತ ಅಭಿಮಾನಿಗಳು

ಚೆನ್ನೈ: ಲೋಕಸಭಾ ಚುನಾವಣಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ತಮಿಳುನಾಡಲ್ಲಿ ಬಿಜೆಪಿ ಪಕ್ಷವನ್ನು ಬಲವರ್ಧನೆ ಮಾಡುತ್ತಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ ಅಭಿಮಾನಿ ಸಂಘದ ಸದಸ್ಯರು ಬಿಜೆಪಿ(BJP)ಗೆ ಸೇರ್ಪಡೆಯಾಗಿದ್ದಾರೆ. ಚೆನ್ನೈನಲ್ಲಿ ಸೋಮವಾರ ಅಣ್ಣಾಮಲೈ ನೇತೃತ್ವದಲ್ಲಿ ರಜನಿ ಅಭಿಮಾನಿ ಸಂಘದ (Rajini fans club) ಸದಸ್ಯರು ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಅಣ್ಣಾಮಲೈ ಮತ್ತು ಬಿಜೆಪಿ ಹಿರಿಯ ನಾಯಕ ಎಚ್ ರಾಜಾ ಶಾಲು ಹೊದಿಸಿ ಅವರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡರು.
ಬಿಜೆಪಿಯ ಕೋರ್ ಕಮಿಟಿ ಸಭೆಗೆ ಮುನ್ನ ಈ ಕಾರ್ಯಕ್ರಮ ನಡೆದಿದ್ದು, ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಮೈತ್ರಿ ಸಂಬಂಧಿತ ವಿಷಯಗಳನ್ನು ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ..
ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಎಐಎಎಂಡಿಕೆ ಹೊರತಾದ ಮೈತ್ರಿಕೂಟವನ್ನು ರೂಪಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಮಾಜಿ ಕೇಂದ್ರ ಸಚಿವ ಜಿ.ಕೆ. ವಾಸನ್ ಅವರ ತಮಿಳು ಮಾಣಿಲ ಕಾಂಗ್ರೆಸ್ ಹಾಗೂ ನಟ ಶರತ್‌ ಕುಮಾರ ಅವರ ಪಕ್ಷ ಈಗಾಗಲೇ ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಸೇರ್ಪಡೆಯಾಗಿದೆ.

ಪ್ರಮುಖ ಸುದ್ದಿ :-   ಪವಿತ್ರಾ ಜಯರಾಮ ಸಾವಿನ ಬೆನ್ನಲ್ಲೇ ಗೆಳೆಯ-ಕಿರುತೆರೆ ನಟ ಚಂದು ಆತ್ಮಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement