ನೂತನ ಚುನಾವಣಾ ಆಯುಕ್ತರಾಗಿ ಜ್ಞಾನೇಶಕುಮಾರ, ಸುಖಬೀರ್ ಸಿಂಗ್‌ ಸಂಧು ನೇಮಕ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಗುರುವಾರ (ಮಾರ್ಚ್ 14) ಜ್ಞಾನೇಶಕುಮಾರ ಮತ್ತು ಸುಖಬೀರ್ ಸಿಂಗ್‌ ಸಂಧು ಅವರನ್ನು ಭಾರತದ ಚುನಾವಣಾ ಆಯೋಗದ ನೂತನ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಸಮಿತಿಯ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಗೃಹ ಸಚಿವಾಲಯದ ಕಾಶ್ಮೀರ ವಿಭಾಗದ ಮಾಜಿ ಮುಖ್ಯಸ್ಥರಾಗಿ, ಕೇರಳ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿ ಜ್ಞಾನೇಶಕುಮಾರ ಅವರು ಆರ್ಟಿಕಲ್ 370 ರದ್ದತಿಯ ಮೇಲ್ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಬ್ಬರು ಹೊಸ ಚುನಾವಣಾ ಆಯುಕ್ತರ ನೇಮಕದ ಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸಹ ಉಪಸ್ಥಿತರಿದ್ದರು.
ಮಾರ್ಚ್ 8 ರಂದು ಅರುಣ ಗೋಯೆಲ್ ಅವರ ರಾಜೀನಾಮೆ ನೀಡಿದ್ದರು ಮತ್ತು ಫೆಬ್ರವರಿ 14 ರಂದು ಅನುಪ ಚಂದ್ರ ಪಾಂಡೆ ಅವರ ನಿವೃತ್ತಿಯಿಂದ ಮತ್ತೊಂದು ಸ್ಥಾನ ತೆರವಾಗಿತ್ತು. ಹೀಗಾಗಿ ಮೂವರು ಸದಸ್ಯರ ಚುನಾವಣಾ ಚುನಾವಣಾ ಪ್ರಾಧಿಕಾರದ ಏಕೈಕ ಸದಸ್ಯರಾಗಿ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವಕುಮಾರ ಮಾತ್ರ ಉಳಿದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯಲ್ಲಿ ಕೇಂದ್ರ ಸಚಿವರು ಮತ್ತು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ ರಂಜನ್ ಚೌಧರಿ ಇದ್ದಾರೆ.
ಕಾತಿಯ

ಪ್ರಮುಖ ಸುದ್ದಿ :-   ಶಾಕಿಂಗ್‌ ವೀಡಿಯೊ..| ಆಸ್ಪತ್ರೆ ಆವರಣದಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ದಂಪತಿ ಮೇಲೆ ಮರ ಬಿದ್ದು ಪತಿ ಸಾವು, ಪತ್ನಿಗೆ ಗಾಯ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement