₹1368 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿ ಅಗ್ರಸ್ಥಾನ ಪಡೆದ ‘ಲಾಟರಿ ಕಿಂಗ್ : ಯಾರು ಈ ಸಾಂಟಿಯಾಗೋ ಮಾರ್ಟಿನ್ ?

ನವದೆಹಲಿ: ಚುನಾವಣಾ ಆಯೋಗವು ಗುರುವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಎಸ್‌ಬಿಐ) ಚುನಾವಣಾ ಬಾಂಡ್‌ಗಳ ಕುರಿತು ಪಡೆದ ಡೇಟಾವನ್ನು ಅಪ್‌ಲೋಡ್ ಮಾಡಿದೆ. ಇದು ರಾಜಕೀಯ ಪಕ್ಷಗಳಿಗೆ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ದೇಣಿಗೆ ನೀಡಲು ಅವಕಾಶ ಮಾಡಿಕೊಟ್ಟಿತ್ತು.
ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಇದನ್ನು ವೆಬ್‌ಸೈಟಿಗೆ ಅಪ್‌ಲೋಡ್‌ ಮಾಡಲಾಗಿದೆ. ಕೊಯಮತ್ತೂರು ಮೂಲದ ಫ್ಯೂಚರ್ ಗೇಮಿಂಗ್ ಸಂಸ್ಥೆಯು ಚುನಾವಣಾ ಬಾಂಡ್‌ಗಳ ಅತಿದೊಡ್ಡ ದಾನಿಯಾಗಿದೆ ಎಂಬುದು ಈಗ ಬಹಿರಂಗವಾಗಿದೆ. ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಏಪ್ರಿಲ್ 12, 2019 ಮತ್ತು ಜನವರಿ 24, 2024 ರ ನಡುವೆ ₹ 1,368 ಕೋಟಿ ಚುನಾವಣಾ ಬಾಂಡ್‌ಗಳನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ.
1991 ರಲ್ಲಿ ಸ್ಥಾಪನೆಯಾದ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್‌ (Future Gaming and Hotel Services) ಅನ್ನು ಮೊದಲು ಮಾರ್ಟಿನ್ ಲಾಟರಿ ಏಜೆನ್ಸಿ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು. ಇದು ಭಾರತದ ‘ಲಾಟರಿ ಕಿಂಗ್’ ಎಂದು ಕರೆಯಲ್ಪಡುವ ಸ್ಯಾಂಟಿಯಾಗೊ ಮಾರ್ಟಿನ್ ಅವರ ಮಾಲೀಕತ್ವದಲ್ಲಿದೆ.

ಪ್ರಮುಖ ಸುದ್ದಿ :-   ಪೇಟಿಎಂ ಸಿಇಒ ಸ್ಥಾನಕ್ಕೆ ಭವೇಶ ಗುಪ್ತಾ ದಿಢೀರ್‌ ರಾಜೀನಾಮೆ

ಸಂಸ್ಥೆಯ ವೆಬ್‌ಸೈಟ್‌ನ ಪ್ರಕಾರ, ಸ್ಯಾಂಟಿಯಾಗೊ ಮಾರ್ಟಿನ್ ಮ್ಯಾನ್ಮಾರ್‌ನ ಯಾಂಗೋನ್‌ನಲ್ಲಿ ಕಾರ್ಮಿಕನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1988ರಲ್ಲಿ ಅವರು ಭಾರತಕ್ಕೆ ಬಂದರು 1988ರಲ್ಲಿ ತಮಿಳುನಾಡಿನಲ್ಲಿ ಲಾಟರಿ ವ್ಯಾಪಾರ ಆರಂಭಿಸಿದರು. ಬಳಿಕ ಅವರು ತಮ್ಮ ವ್ಯವಹಾರವನ್ನು ಕರ್ನಾಟಕ ಹಾಗೂ ಕೇರಳಕ್ಕೆ ವಿಸ್ತರಿಸಿದರು. ನಂತರ ಈಶಾನ್ಯ ಭಾರತದತ್ತ ತೆರಳಿದರು. ಈಶಾನ್ಯದಲ್ಲಿ ಅವರು ಸರ್ಕಾರದ ಲಾಟರಿ ಯೋಜನೆಗಳನ್ನು ನಿರ್ವಹಿಸುವ ಮೂಲಕ ವ್ಯವಹಾರ ವಿಸ್ತರಿಸಿದರು. ಕ್ರಮೇಣ ಅವರು ಭೂತಾನ್ ಮತ್ತು ನೇಪಾಳಗಳಲ್ಲಿ ಸಂಸ್ಥೆ ಆರಂಭಿಸು ಮೂಲಕ ವಿದೇಶಗಳಲ್ಲಿಯೂ ಉದ್ಯಮವನ್ನು ವಿಸ್ತರಿಸಿದರು. ನಂತರ ಅವರು ಲಾಟರಿ ಉದ್ಯಮದಿಂದ ಆಚೆ ಇತರೆ ಉದ್ಯಮಗಳತ್ತ ಗಮನ ಹರಿಸಿದರು. ನಿರ್ಮಾಣ, ರಿಯಲ್ ಎಸ್ಟೇಟ್, ಜವಳಿ ಹಾಗೂ ಆತಿಥ್ಯ ಕ್ಷೇತ್ರಗಳಿಗೂ ಕಾಲಿರಿಸಿದರು.

ಸ್ಯಾಂಟಿಯಾಗೊ ಮಾರ್ಟಿನ್ ಅವರು, ಫ್ಯೂಚರ್ ಗೇಮಿಂಗ್ ಏಷ್ಯಾ ಪೆಸಿಫಿಕ್ ಲಾಟರಿ ಅಸೋಸಿಯೇಷನ್ (APLA) ಸದಸ್ಯರಾಗಿದ್ದಾರೆ. 2001 ರಿಂದ, ಫ್ಯೂಚರ್ ಗೇಮಿಂಗ್ ವಿಶ್ವ ಲಾಟರಿ ಅಸೋಸಿಯೇಷನ್ (WLA) ಸದಸ್ಯರಾಗಿದ್ದಾರೆ. ಅವರು ಲಾಟರಿ ವಿತರಕರು, ದಾಸ್ತಾನುಗಾರರು ಮತ್ತು ಏಜೆಂಟರ ಲಾಬಿಯಾದ ಆಲ್ ಇಂಡಿಯಾ ಫೆಡರೇಶನ್ ಆಫ್ ಲಾಟರಿ ಟ್ರೇಡ್ ಮತ್ತು ಅಲೈಡ್ ಇಂಡಸ್ಟ್ರೀಸ್‌ನ ಅಧ್ಯಕ್ಷರೂ ಆಗಿದ್ದಾರೆ.
2019ರಿಂದ ಪಿಎಂಎಲ್‌ಎ ಕಾನೂನನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯವು ಇವರ ಕಂಪನಿಯ ವಿರುದ್ಧ ತನಿಖೆ ನಡೆಸುತ್ತಿದೆ. ಮೇ 2023ರಲ್ಲಿ ಕೊಯಮತ್ತೂರು ಮತ್ತು ಚೆನ್ನೈನಲ್ಲಿ ಕಂಪನಿ ಮೇಲೆ ಇ.ಡಿ.ದಾಳಿ ನಡೆಸಿತ್ತು. ಸಿಕ್ಕಿಂನ ಕಂಪನಿಯು ಕೇರಳದಲ್ಲಿ ಲಾಟರಿಗಳನ್ನು ಮಾರಾಟ ಮಾಡಿದೆ ಎಂದು ಆರೋಪಿಸಿ ಕೇಂದ್ರೀಯ ತನಿಖಾ ದಳದ ಚಾರ್ಜ್ ಶೀಟ್ ಅನ್ನು ಆಧರಿಸಿ ಇಡಿ ತನಿಖೆ ನಡೆಸಲಾಗಿದೆ.

ಪ್ರಮುಖ ಸುದ್ದಿ :-   ಮೊಬೈಲ್ ನಲ್ಲಿ ಹುಡುಗರ ಜೊತೆ ಹರಟೆ ಬೇಡ ಅಂದಿದ್ದಕ್ಕೆ ಅಣ್ಣನನ್ನೇ ಕೊಡಲಿಯಿಂದ ಹೊಡೆದು ಕೊಂದ 14 ವರ್ಷದ ಬಾಲಕಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement