ಲೋಕಸಭಾ ಚುನಾವಣೆ ಘೋಷಣೆ : 7 ಹಂತಗಳಲ್ಲಿ ಮತದಾನ ; ಜೂನ್‌ 4ಕ್ಕೆ ಫಲಿತಾಂಶ

ನವದೆಹಲಿ: ಲೋಕಸಭೆಗೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ದೇಶದಾದ್ಯಂತ 543 ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್‌ 19ರಿಂದ ಜೂನ್‌ 1ರವರೆಗೆ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ದೆ. ಚುನಾವಣಾ ಮಾದರಿ ನೀತಿ ಸಂಹಿತೆ (Model Code of Conduct) ಕೂಡ ಇಂದಿನಿಂದಲೇ ಜಾರಿಗೆ ಬರಲಿದೆ. ದೇಶದಲ್ಲಿ ಸುಮಾರು 97 ಕೋಟಿ ಮತದಾರರಿದ್ದಾರೆ. 49.7 ಕೋಟಿ ಪುರುಷ ಮತದಾರರು, 47.1 ಕೋಟಿ ಮಹಿಳಾ ಮತದಾರರು ಇದ್ದಾರೆ. 1.8 ಕೋಟಿ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ.
ಈ ಚುನಾವಣೆ ಪ್ರಕ್ರಿಯೆಯಲ್ಲಿ 1.5 ಕೋಟಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ ಎಂದು ರಾಜೀವ್‌ ಕುಮಾರ್‌ ಮಾಹಿತಿ ನೀಡಿದರು.
ಲೋಕಸಭೆಯ ಏಳು ಹಂತಗಳಲ್ಲಿ. ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ. ಮಾರ್ಚ್ 20ರಂದು ಅಧಿಸೂಚನೆ ಹೊರಬೀಳಲಿದೆ. ಏಪ್ರಿಲ್ 19ರಂದು ಮೊದಲ ಹಂತದ ಮತದಾನ, ಏಪ್ರಿಲ್ 26 ರಂದು ಎರಡನೇ ಹಂತದ ಮತದಾನ, ಚುನಾವಣೆ ಮೇ 7 ರಂದು ಮೂರನೇ ಹಂತದ ಮತದಾನ, ಮೇ 13 ರಂದು ನಾಲ್ಕನೇ ಹಂತದ ಮತದಾನ,
ಮೇ 20 ರಂದು ಐದನೇ ಹಂತದ ಮತದಾನ, ಮೇ 25 ರಂದು ಆರನೇ ಹಂತದ ಮತದಾನ ಹಾಗೂ ಜೂನ್ 1 ರಂದು ಏಳನೇ ಹಂತದ ಮತದಾನ ನಡೆಯಲಿದೆ.

ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏಪ್ರಿಲ್ 26ರಂದು ಹಾಗೂ ಮೇ 7ರಂದು ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ. ಇದೇ ವೇಳೆ ನಾಲ್ಕು ರಾಜ್ಯಗಳಾದ ಸಿಕ್ಕಿಂ, ಒಡಿಶಾ, ಅರುಣಾಚಲ ಪ್ರದೇಶ, ಆಂಧ್ರ ಪ್ರದೇಶ ವಿಧಾನಸಭೆಗಳಿಗೆ ಚುನಾವಣೆಯನ್ನು ಚುನಾವಣಾ ಆಯೋಗ ಘೋಷಿಸಿದೆ.
ದೇಶಾದ್ಯಂತ 96.8 ಕೋಟಿ ಮತದಾರರು ನೋಂದಾಯಿಸಿಕೊಂಡಿದ್ದು, ಲೋಕಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದು, 10.5 ಕೋಟಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವಕುಮಾರ ಮಾಹಿತಿ ನೀಡಿದರು. 49.7 ಕೋಟಿ ಮತದಾರರು ಪುರುಷರಿದ್ದರೆ, 47.1 ಕೋಟಿ ಮತದಾರರು ಮಹಿಳೆಯರಾಗಿದ್ದಾರೆ. 1.8 ಕೋಟಿ ಮತದಾರರು ಇದೇ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದಾರೆ. ಚುನಾವಣೆಗಾಗಿ 55 ಲಕ್ಷಕ್ಕೂ ಅಧಿಕ ಇವಿಎಂಗಳನ್ನು ಬಳಸಲಾಗುತ್ತಿದೆ.

ಪ್ರಮುಖ ಸುದ್ದಿ :-   ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಮುಂಬೈ 26/11 ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ವಾದಿಸಿದ್ದ ಉಜ್ವಲ್ ನಿಕಮ್ ಕಣಕ್ಕಿಳಿಸಿದ ಬಿಜೆಪಿ

ಕರ್ನಾಟಕದಲ್ಲಿ ಏಪ್ರಿಲ್ 26, ಮೇ 7ರಂದು ಮತದಾನ
ಕರ್ನಾಟಕದಲ್ಲಿ ಏಪ್ರಿಲ್ 26ರಂದು ಹಾಗೂ ಮೇ 7ರಂದು ಮತದಾನ ನಡೆಯಲಿದೆ. ಚಿತ್ರದುರ್ಗ ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಏಪ್ರಿಲ್ 26ರಂದು ನಡೆಯಲಿದೆ.
ಬೆಳಗಾವಿ, ಬಳ್ಳಾರಿ, ಚಿಕ್ಕೋಡಿ, ಹಾವೇರಿ-ಗದಗ, ಕಲಬುರಗಿ, ಬೀದರ, ಹುಬ್ಬಳಿ – ಧಾರವಾಡ, ಕೊಪ್ಪಳ, ರಾಯಚೂರು, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ಬಾಗಲಕೋಟೆ,
ವಿಜಯಪುರ ಕ್ಷೇತ್ರಗಳಲ್ಲಿ ಮೇ 7ರಂದು ನಡೆಯಲಿದೆ.

ಮೊದಲ ಹಂತದ ಚುನಾವಣೆ 
ಗೆಜೆಟ್ ಅಧಿಸೂಚನೆ- ಮಾರ್ಚ್ 20
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ- ಮಾರ್ಚ್ 27
ನಾಮಪತ್ರಗಳ ಪರಿಶೀಲನೆ- ಮಾರ್ಚ್ 28 (ಬಿಹಾರದಲ್ಲಿ ಮಾರ್ಚ್ 30)
ನಾಮಪತ್ರಗಳ ವಾಪಸ್- ಮಾರ್ಚ್ 30 (ಬಿಹಾರದಲ್ಲಿ ಏಪ್ರಿಲ್ 2)
ಮತದಾನ- ಏಪ್ರಿಲ್ 19

ಎರಡನೇ ಹಂತದ ಚುನಾವಣೆ
ಗೆಜೆಟ್ ಅಧಿಸೂಚನೆ- ಮಾರ್ಚ್ 28
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ- ಏಪ್ರಿಲ್ 4
ನಾಮಪತ್ರಗಳ ಪರಿಶೀಲನೆ- ಏಪ್ರಿಲ್ 5
ನಾಮಪತ್ರಗಳ ವಾಪಸ್- ಏಪ್ರಿಲ್ 8
ಮತದಾನ- ಏಪ್ರಿಲ್ 26

ಪ್ರಮುಖ ಸುದ್ದಿ :-   ದಕ್ಷಿಣ ಭಾರತದಲ್ಲಿ ತೀವ್ರ ನೀರಿನ ಬಿಕ್ಕಟ್ಟು : 42 ಜಲಾಶಯದಲ್ಲಿ ಕೇವಲ 17%ರಷ್ಟು ನೀರಿನ ಸಂಗ್ರಹ ಮಾತ್ರ ಬಾಕಿ

ಮೂರನೇ ಹಂತದ ಚುನಾವಣೆ
ಗೆಜೆಟ್ ಅಧಿಸೂಚನೆ- ಏಪ್ರಿಲ್ 12
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ- ಏಪ್ರಿಲ್ 19
ನಾಮಪತ್ರಗಳ ಪರಿಶೀಲನೆ- ಏಪ್ರಿಲ್ 20
ನಾಮಪತ್ರಗಳ ವಾಪಸ್- ಏಪ್ರಿಲ್ 22
ಮತದಾನ- ಮೇ 7

ನಾಲ್ಕನೇ ಹಂತದ ಚುನಾವಣೆ
ಗೆಜೆಟ್ ಅಧಿಸೂಚನೆ- ಏಪ್ರಿಲ್ 18
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ- ಏಪ್ರಿಲ್ 25
ನಾಮಪತ್ರಗಳ ಪರಿಶೀಲನೆ- ಏಪ್ರಿಲ್ 26
ನಾಮಪತ್ರಗಳ ವಾಪಸ್- ಏಪ್ರಿಲ್ 29
ಮತದಾನ- ಮೇ 13

ಐದನೇ ಹಂತದ ಚುನಾವಣೆ
ಗೆಜೆಟ್ ಅಧಿಸೂಚನೆ- ಏಪ್ರಿಲ್ 26
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ- ಮೇ 3
ನಾಮಪತ್ರಗಳ ಪರಿಶೀಲನೆ- ಮೇ 4
ನಾಮಪತ್ರಗಳ ವಾಪಸ್- ಮೇ 6
ಮತದಾನ- ಮೇ 20

ಆರನೇ ಹಂತದ ಚುನಾವಣೆ
ಗೆಜೆಟ್ ಅಧಿಸೂಚನೆ- ಏಪ್ರಿಲ್ 29
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ- ಮೇ 6
ನಾಮಪತ್ರಗಳ ಪರಿಶೀಲನೆ- ಮೇ 7
ನಾಮಪತ್ರಗಳ ವಾಪಸ್- ಮೇ 9
ಮತದಾನ- ಮೇ 25

ಏಳನೇ ಹಂತದ ಚುನಾವಣೆ
ಗೆಜೆಟ್ ಅಧಿಸೂಚನೆ- ಮೇ 7
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ- ಮೇ 14
ನಾಮಪತ್ರಗಳ ಪರಿಶೀಲನೆ- ಮೇ 15
ನಾಮಪತ್ರಗಳ ವಾಪಸ್- ಮೇ 17
ಮತದಾನ- ಜೂನ್ 1

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement