ಲೋಕಸಭೆ ಚುನಾವಣೆ : ಎನ್‌ ಡಿಎ ಮೈತ್ರಿಕೂಟ 400 ಸ್ಥಾನಗಳ ಗಡಿ ದಾಟಲಿದೆ ಎಂದು ಭವಿಷ್ಯ ನುಡಿದ ನ್ಯೂಸ್‌ 18 ಒಪಿನಿಯನ್‌ ಪೋಲ್‌

ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್‌ಡಿಎ) ಮುಂಬರುವ ಲೋಕಸಭೆ ಚುನಾವಣೆಯಲ್ಲಿ “400 ಸ್ಥಾನಗಳನ್ನು ಗೆಲ್ಲುವ ಹಾದಿಯಲ್ಲಿದೆ ಎಂದು ನೆಟ್‌ವರ್ಕ್ 18ರ ಮೆಗಾ ಒಪಿನಿಯನ್ ಪೋಲ್ ತಿಳಿಸಿದೆ.
543 ಸದಸ್ಯ ಬಲದ ಲೋಕಸಭೆಯಲ್ಲಿ ಎನ್‌ಡಿಎ 411 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಅಂದಾಜಿಸಿದ್ದು, ಬಿಜೆಪಿ ಏಕಾಂಗಿಯಾಗಿ 350 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.
ಜನತಾ ದಳ (ಯುನೈಟೆಡ್) ಮತ್ತು ತೆಲುಗು ದೇಶಂ ಪಕ್ಷ ಸೇರಿದಂತೆ ಉಳಿದ ಎನ್‌ಡಿಎ ಘಟಕಗಳು ಒಟ್ಟು 61 ಸ್ಥಾನಗಳನ್ನು ಗೆಲ್ಲಲಿವೆ ಎಂದು ಅದು ಹೇಳಿದೆ.

ಬಿಜೆಪಿ ನೇತೃತ್ವದ ಎನ್‌ಡಿಎಯು ಹಿಂದಿ ಹೃದಯಭಾಗವನ್ನು (ಉತ್ತರ ಪ್ರದೇಶದಲ್ಲಿ 77, ಮಧ್ಯಪ್ರದೇಶದಲ್ಲಿ 28, ಛತ್ತೀಸ್‌ಗಢದಲ್ಲಿ 10, ಬಿಹಾರದಲ್ಲಿ 38 ಮತ್ತು ಜಾರ್ಖಂಡ್‌ನಲ್ಲಿ 12) ಮತ್ತು ಕರ್ನಾಟಕದಲ್ಲಿ (25) ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಇದು ಒಡಿಶಾ (13), ಪಶ್ಚಿಮ ಬಂಗಾಳ (25), ತೆಲಂಗಾಣ (8), ಮತ್ತು ಆಂಧ್ರಪ್ರದೇಶ (18) ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಯಿದೆ. ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಆಡಳಿತಾರೂಢ ಮೈತ್ರಿಕೂಟವು ಎಲ್ಲ 26 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ತಮಿಳುನಾಡು (5) ಮತ್ತು ಕೇರಳದಲ್ಲಿ (2) ಸ್ಥಾನಗಳನ್ನು ಎನ್‌ಡಿಎ ಗೆಲ್ಲಬಹುದು ಎಂದು ಸರ್ವೆ ಹೇಳಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವೀಡಿಯೊ ಪ್ರಕರಣ : ತನಿಖೆಗೆ ಎಡಿಜಿಪಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ಎಸ್ಐಟಿ ರಚನೆ

ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್‌ ಒಟ್ಟು 105 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಅಂದಾಜಿಸಿದೆ. ಕಾಂಗ್ರೆಸ್ 49 ಸ್ಥಾನಗಳನ್ನು ಗೆಲ್ಲಬಹುದು ಎಂದು ಅದು ಹೇಳಿದೆ. ಎಐಎಡಿಎಂಕೆ, ಬಿಎಸ್‌ಪಿ, ಬಿಆರ್‌ಎಸ್, ಬಿಜೆಡಿ, ವೈಎಸ್‌ಆರ್‌ಸಿಪಿ ಸೇರಿದಂತೆ ‘ಇತರರು’ ಒಟ್ಟಾಗಿ ಸುಮಾರು 27 ಸ್ಥಾನಗಳನ್ನು ಗಳಿಸಬಹುದು ಎಂದು ಸಂಶೋಧನೆಗಳು ತಿಳಿಸಿವೆ.
ಒಟ್ಟಾರೆ ಚಲಾವಣೆಯಾಗುವ ಮತಗಳಲ್ಲಿ ಅರ್ಧದಷ್ಟು ಮತಗಳನ್ನು ಎನ್‌ಡಿಎ ಗಳಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಫೆಬ್ರವರಿ 12 ರಿಂದ ಮಾರ್ಚ್ 1ರ ವರೆಗಿನ ಸಮೀಕ್ಷೆಯನ್ನು ಭಾರತದ 21 ಪ್ರಮುಖ ರಾಜ್ಯಗಳಲ್ಲಿ ನಡೆಸಲಾಗಿದೆ.
21 ರಾಜ್ಯಗಳ ಎಲ್ಲಾ ಲೋಕಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು 518 ಲೋಕಸಭಾ ಕ್ಷೇತ್ರಗಳನ್ನು ಸಮೀಕ್ಷೆಯಲ್ಲಿ ಒಳಪಡಿಸಲಾಗಿದೆ. ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳನ್ನು ಆಯ್ಕೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಐದು ಮತಗಟ್ಟೆಗಳನ್ನು ಆಯ್ಕೆ ಮಾಡಲಾಗಿದೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement