ನವದೆಹಲಿ : ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ 57 ಅಭ್ಯರ್ಥಿಗಳ ತನ್ನ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. 57 ಅಭ್ಯರ್ಥಿಗಳ ಪಟ್ಟಿಯು ಕರ್ನಾಟಕ, ತೆಲಂಗಾಣ, ಪಶ್ಚಿಮ ಬಂಗಾಳ, ರಾಜಸ್ಥಾನ, ಮಹಾರಾಷ್ಟ್ರ, ಅರುಣಾಚಲ ಪ್ರದೇಶ ಮತ್ತು ಗುಜರಾತ್‌ನ ಕ್ಷೇತ್ರಗಳನ್ನು ಒಳಗೊಂಡಿದೆ. ಪುದುಚೇರಿಯಲ್ಲಿ ಹಾಲಿ ಸಂಸದ ವಿ ವೈತಿಲಿಂಗಂ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಪಶ್ಚಿಮ ಬಂಗಾಳದ ಬರ್ಹಮ್‌ಪುರ ಕ್ಷೇತ್ರದಿಂದ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ ರಂಜನ್ ಚೌಧರಿ ಅವರನ್ನು ಕಣಕ್ಕಿಳಿಸಿದೆ. ಕರ್ನಾಟಕದಿಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಮತ್ತು ಸೊಲ್ಲಾಪುರದಿಂದ ಮಾಜಿ ಕೇಂದ್ರ ಸಚಿವ ಸುಶೀಲಕುಮಾರ ಶಿಂಧೆ ಅವರ ಪುತ್ರಿ ಪ್ರಣಿತಿ ಶಿಂಧೆ ಅವರು ಅಭ್ಯರ್ಥಿಗಳಲ್ಲಿ ಸೇರಿದ್ದಾರೆ.
ಬೆಂಗಳೂರು ಉತ್ತರದಿಂದ ಮಾಜಿ ರಾಜ್ಯಸಭಾ ಸದಸ್ಯ ಎಂ.ವಿ. ರಾಜೀವ ಗೌಡ ಮತ್ತು ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಮಿತ್ ಚಾವ್ಡಾ ಗುಜರಾತ್‌ನ ಆನಂದ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ರಾಜಸ್ಥಾನದ ಸಿಕರ್ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)ಗೆ ಬಿಟ್ಟುಕೊಟ್ಟಿದೆ.
ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ನಬಮ್ ತುಕಿ ಅರುಣಾಚಲ ಪಶ್ಚಿಮದಿಂದ ಕಣಕ್ಕಿಳಿಯಲಿದ್ದಾರೆ. ಗುಜರಾತ್ ಗಾಂಧಿನಗರದಿಂದ ಸೋನಾಲ್ ಪಟೇಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ. ದಾಹೋದ್ (ಎಸ್‌ಟಿ) ನಿಂದ ಪ್ರಭಾಬೆನ್ ತಾವಿಯಾದ್ ಮತ್ತು ಸೂರತ್‌ನಿಂದ ನಿಲೇಶ ಕುಂಬಾನಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಸರಿಸಿದೆ.
ಕರ್ನಾಟಕದಲ್ಲಿ ಚಿಕ್ಕೋಡಿಯಿಂದ ಪ್ರಿಯಾಂಕಾ ಜಾರಕಿಹೊಳಿ, ಧಾರವಾಡದಿಂದ ವಿನೋದ ಅಸೂಟಿ, ಬೆಂಗಳೂರು ದಕ್ಷಿಣದಿಂದ ಸೌಮ್ಯಾ ರೆಡ್ಡಿ ಮತ್ತು ಬೆಂಗಳೂರು ಸೆಂಟ್ರಲ್‌ನಿಂದ ಮನ್ಸೂರ್ ಅಲಿ ಖಾನ್ ಸೇರಿದಂತೆ ಇತರರನ್ನು ಕಣಕ್ಕಿಳಿಸಿದೆ.
ಪಶ್ಚಿಮ ಬಂಗಾಳದ ಮಲ್ದಹಾ ದಕ್ಷಿಣದಿಂದ ಅಬು ಹಸೇಂ ಖಾನ್ ಚೌಧರಿ ಅವರ ಪುತ್ರ ಇಶಾ ಖಾನ್ ಚೌಧರಿ ಅವರನ್ನು ಕಣಕ್ಕಿಳಿಸಿದೆ. ಅಬು ಹಸೇಮ್ ಖಾನ್ ಚೌಧರಿ ಈ ಸ್ಥಾನದಿಂದ ಹಾಲಿ ಸಂಸದರಾಗಿದ್ದಾರೆ. ಇದರೊಂದಿಗೆ ಪಕ್ಷವು ಒಟ್ಟು 138 ಅಭ್ಯರ್ಥಿಗಳನ್ನು ಘೋಷಿಸಿದೆ.
ಕಾಂಗ್ರೆಸ್ 57 ಅಭ್ಯರ್ಥಿಗಳ ಮೂರನೇ ಪಟ್ಟಿ…
ಅರುಣಾಚಲ ಪ್ರದೇಶ:
ಅರುಣಾಚಲ ಪಶ್ಚಿಮ – ನಬಮ್ ತುಕಿ
ಅರುಣಾಚಲ ಪೂರ್ವ – ಬೋಸಿರಾಂ ಸಿರಾಮ್
ಗುಜರಾತ್:
ಪಟಾನ್ – ಚಂದನಜಿ ಠಾಕೋರ್
ಸಬರಕಾಂತ – ಡಾ. ತುಷಾರ್ ಚೌಧರಿ
ಗಾಂಧಿನಗರ – ಸೋನಾಲ್ ಪಟೇಲ್
ಜಾಮ್‌ನಗರ – ಜೆ.ಪಿ. ಮಾರ್ವಿಯಾ
ಅಮ್ರೇಲಿ – ಜೆನ್ನಿಬೆನ್ ಥುಮರ್
ಆನಂದ್ – ಅಮಿತ ಭಾಯ್ ಚಾವ್ಡಾ
ಖೇಡಾ – ಕಲುಸಿನ್ಹ ದಾಭಿ
ಪಂಚಮಹಲ್ – ಗುಲಾಬ್ ಸಿನ್ಹ ಚೌಹಾಣ
ದಾಹೋದ್ (ST) – ಪ್ರಭಾಬೆನ್ ತಾವಿಯಾದ್
ಛೋಟಾ ಉದಯಪುರ (ST) – ಸುಖರಾಂ ಭಾಯ್ ರಥ್ವಾ
ಸೂರತ್ – ನೀಲೇಶ್ ಕುಂಬಾಣಿ
ಕರ್ನಾಟಕ:
ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ
ಬೆಳಗಾವಿ – ಮೃಣಾಲ ಹೆಬ್ಬಾಳ್ಕರ್
ಬಾಗಲಕೋಟ – ಸಂಯುಕ್ತಾ ಎಸ್. ಪಾಟೀಲ
ಕಲಬುರ್ಗಿ (ಎಸ್‌ಸಿ) – ರಾಧಾಕೃಷ್ಣ ದೊಡ್ಡಮನಿ
ರಾಯಚೂರು (ಎಸ್‌ಟಿ) – ಜಿ. ಕುಮಾರ ನಾಯ್ಕ್
ಬೀದರ – ಸಾಗರ ಖಂಡ್ರೆ
ಕೊಪ್ಪಳ – ಕೆ.ರಾಜಶೇಖರ ಹಿಟ್ನಾಳ
ಧಾರವಾಡ – ವಿನೋದ ಅಸೂಟಿ
ಉತ್ತರ ಕನ್ನಡ – ಡಾ.ಅಂಜಲಿ ನಿಂಬಾಳ್ಕರ
ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ
ಉಡುಪಿ-ಚಿಕ್ಕಮಗಳೂರು – ಡಾ ಜಯಪ್ರಕಾಶ ಹೆಗ್ಡೆ
ದಕ್ಷಿಣ ಕನ್ನಡ – ಪದ್ಮರಾಜ
ಚಿತ್ರದುರ್ಗ (ಎಸ್‌ಸಿ)- ಬಿ.ಎನ್.ಚಂದ್ರಪ್ಪ
ಮೈಸೂರು – ಎಂ.ಲಕ್ಷ್ಮಣ
ಬೆಂಗಳೂರು ಉತ್ತರ – ಪ್ರೊ.ಎಂ.ವಿ.ರಾಜೇಗೌಡ
ಬೆಂಗಳೂರು ಸೆಂಟ್ರಲ್ – ಮನ್ಸೂರ್ ಅಲಿ ಖಾನ್
ಬೆಂಗಳೂರು ದಕ್ಷಿಣ – ಸೌಮ್ಯ ರೆಡ್ಡಿ
ಮಹಾರಾಷ್ಟ್ರ:
ನಂದೂರ್ಬಾರ್ (ಎಸ್‌ಟಿ) – ಅಡ್ವ ಗೋವಾಲ್ ಕೆ ಪದವಿ
ಅಮರಾವತಿ (ಎಸ್‌ಸಿ) – ಬಲವಂತ ಬಸವಂತ ವಾಂಖೆಡೆ
ನಾಂದೇಡ್ – ವಸಂತರಾವ್ ಬಲವಂತರಾವ್ ಚವಾಣ
ಪುಣೆ – ರವೀಂದ್ರ ಹೇಮರಾಜ ಧಾಂಗೇಕರ್
ಲಾತೂರ್ (ಎಸ್‌ಸಿ) – ಡಾ ಶಿವಾಜಿರಾವ್ ಕಲ್ಗೆ
ಸೊಲ್ಲಾಪುರ (ಎಸ್‌ಸಿ) – ಪ್ರಣಿತಿ ಸುಶೀಲಕುಮಾರ ಶಿಂಧೆ
ಕೊಲ್ಲಾಪುರ – ಶಾಹು ಶಹಾಜಿ ಛತ್ರಪತಿ
ರಾಜಸ್ಥಾನ:
ಗಂಗಾನಗರ (ಎಸ್‌ಸಿ) – ಕುಲದೀಪ್ ಇಂದೋರಾ
ಜೈಪುರ – ಸುನಿಲ ಶರ್ಮಾ
ಪಾಲಿ – ಸಂಗೀತಾ ಬೇನಿವಾಲ್
ಬಾರ್ಮರ್ – ಉಮೇದಾ ರಾಮ ಬೇನಿವಾಲ್
ಜಲಾವರ್-ಬರನ್ – ಊರ್ಮಿಳಾ ಜೈನ್
ತೆಲಂಗಾಣ:
ಪೆದ್ದಪಲ್ಲೆ (SC) – ಗದ್ದಂ ವಂಶಿ ಕೃಷ್ಣ
ಮಲ್ಕಾಜಗಿರಿ – ಸುನಿತಾ ಮಹೇಂದರ್ ರೆಡ್ಡಿ
ಸಿಕಂದರಾಬಾದ್ – ದಾನಂ ನಾಗೇಂದರ
ಚೆವೆಲ್ಲಾ – ಡಾ. ಗದ್ದಂ ರಜಿತ್ ರೆಡ್ಡಿ
ನಾಗರಕರ್ನೂಲ್ (SC) – ಡಾ ಮಲ್ಲು ರವಿ
ಪಶ್ಚಿಮ ಬಂಗಾಳ:
ರಾಯ್ಗಂಜ್ – ಅಲಿ ಇಮ್ರಾನ್ ರಾಮ್ಜ್ (ವಿಕ್ಟರ್)
ಮಲ್ದಹಾ ಉತ್ತರ – ಮೊಸ್ತಕ್ ಆಲಂ
ಮಲ್ದಹಾ ದಕ್ಷಿಣ – ಇಶಾ ಖಾನ್ ಚೌಧರಿ
ಜಂಗಿಪುರ್ – ಎಂಡಿ ಮುರ್ತೋಜಾ ಹೊಸೈನ್ (ಬೋಕುಲ್)
ಬಹರಂಪುರ್ – ಅಧೀರ್ ರಂಜನ್ ಚೌಧರಿ
ಕೋಲ್ಕತ್ತಾ ಉತ್ತರ – ಪ್ರದೀಪ ಭಟ್ಟಾಚಾರ್ಯ
ಪುರುಲಿಯಾ – ನೇಪಾಳ ಮಹತೋ
ಬಿರ್ಭುಮ್ – ಮಿಲ್ಟನ್ ರಶೀದ್
ಪುದುಚೇರಿ:
ಪುದುಚೇರಿ – ವೆ ವೈತಿಲಿಂಗಂ
ನಿಮ್ಮ ಕಾಮೆಂಟ್ ಬರೆಯಿರಿ