ಲೋಕಸಭೆ ಚುನಾವಣೆ: ಬಿಜೆಪಿಯ ನಾಲ್ಕನೇ ಪಟ್ಟಿ ಬಿಡುಗಡೆ : ನಟಿ ರಾಧಿಕಾ ಶರತಕುಮಾರಗೆ ಟಿಕೆಟ್‌

ನವದೆಹಲಿ: ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಶುಕ್ರವಾರ ತನ್ನ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ಏಪ್ರಿಲ್ 19 ರಂದು ಮೊದಲ ಹಂತದ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿರುವ ತಮಿಳುನಾಡು ಮತ್ತು ಪುದುಚೇರಿಯ ಸಂಸದೀಯ ಕ್ಷೇತ್ರಗಳ ಅಭ್ಯರ್ಥಿಗಳನ್ನು ಒಳಗೊಂಡಿದೆ.
ಖ್ಯಾತ ನಟಿ ಹಾಗೂ ರಾಜಕಾರಣಿ ರಾಧಿಕಾ ಶರತಕುಮಾರ ಅವರಿಗೆ ತಮಿಳುನಾಡಿನ ವಿರುಧನಗರ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ರಾಧಿಕಾ ಶರತಕುಮಾರ್ (Raadhika Sarathkumar) ನಟ ಆರ್. ಶರತಕುಮಾರ ಅವರ ಪತ್ನಿ. ಶರತಕುಮಾರ ಅವರು ಮಾರ್ಚ್ 12 ರಂದು ತಮ್ಮ ಅಖಿಲ ಭಾರತೀಯ ಸಮತುವ ಮಕ್ಕಳ ಕಚ್ಚಿ (ಎಐಎಸ್‌ಎಂಕೆ) ಅನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು. ಅಭ್ಯರ್ಥಿಗಳ ಪಟ್ಟಿಯಲ್ಲಿ 2017 ರಲ್ಲಿ ಬಿಜೆಪಿಗೆ ಸೇರಿದ್ದ ಎಐಎಡಿಎಂಕೆಯ ಮಾಜಿ ಪ್ರಮುಖ ಸದಸ್ಯೆ ಪಿ. ಕಾರ್ತ್ಯಾಯಿನಿ ಕಾಣಿಸಿಕೊಂಡಿದ್ದಾರೆ. ಕಾರ್ತ್ಯಾಯಿನಿ ತಮಿಳುನಾಡಿನ ಚಿದಂಬರಂ (SC) ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಅಭ್ಯರ್ಥಿಗಳ ಪಟ್ಟಿ…
ಬಿಜೆಪಿ 4ನೇ ಅಭ್ಯರ್ಥಿಗಳ ಪಟ್ಟಿ-ತಮಿಳುನಾಡು
ಪೊನ್ ವಿ. ಬಾಲಗಣಪತಿ – ತಿರುವಳ್ಳೂರು
ಆರ್‌.ಸಿ. ಪಾಲ ಕನಕರಾಜ- ಚೆನ್ನೈ ಉತ್ತರ
ಎ ಅಶ್ವತ್ಥಾಮನ್- ತಿರುವಣ್ಣಾಮಲೈ
ಕೆ.ಪಿ.ರಾಮಲಿಂಗಂ- ನಾಮಕ್ಕಲ್
ಎ.ಪಿ. ಮುರುಗಾನಂದಂ- ತಿರುಪ್ಪೂರು
ಕೆ.ವಸಂತರಾಜನ್- ಪೊಲ್ಲಾಚಿ
ವಿ.ವಿ. ಸೆಂಥಿಲನಾಥನ್- ಕರೂರ್
ಪಿ ಕಾರ್ತಿಯಾಯಿನಿ-ಚಿದಂಬರಂ (SC)
ಎಸ್‌ಜಿಎಂ ರಮೇಶ- ನಾಗಪಟ್ಟಣಂ
ಎಂ ಮುರುಗಾನಂದಂ- ತಂಜಾವೂರು
ದೇವನಾಥನ್ ಯಾದವ- ಶಿವಗಂಗಾ
ರಾಮ ಶ್ರೀನಿವಾಸನ್- ಮಧುರೈ
ರಾಧಿಕಾ ಶರತಕುಮಾರ- ವಿರುಧುನಗರ
ಬಿ ಜಾನ್ ಪಾಂಡಿಯನ್- ತೆಂಕಶಿ (SC)
ನಮಸ್ಶಿವಾಯಂ- ಪುದುಚೇರಿ
ಬಿಜೆಪಿ ಗುರುವಾರ ತಮಿಳುನಾಡಿಗೆ ಒಂಬತ್ತು ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ತೆಲಂಗಾಣದ ಮಾಜಿ ರಾಜ್ಯಪಾಲೆ ಮತ್ತು ಪಕ್ಷದ ನಾಯಕಿ ತಮಿಳಿಸೈ ಸೌಂದರಾಜನ್ ಅವರನ್ನು ಚೆನ್ನೈ ದಕ್ಷಿಣದಿಂದ ಮತ್ತು ಅಣ್ಣಾಮಲೈ ಕೊಯಮತ್ತೂರಿನಿಂದ ಕಣಕ್ಕಿಳಿಸಿದೆ.

ಪ್ರಮುಖ ಸುದ್ದಿ :-   ಈತ ವಿಶ್ವದ ಶ್ರೀಮಂತ ಭಿಕ್ಷುಕ ; ಮುಂಬೈನಲ್ಲಿ 2 ಬಿಎಚ್​ಕೆ ಮನೆ ಇರುವ ಮಿಲಿಯನೇರ್ : ಈತನ ಒಟ್ಟು ಆಸ್ತಿ ಎಷ್ಟು ಗೊತ್ತೆ..?

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement