ವಿವಾದಕ್ಕೆ ಕಾರಣವಾದ ಕಂಗನಾ ರಣಾವತ್ ಕುರಿತ ಕಾಂಗ್ರೆಸ್ ನಾಯಕಿ ಇನ್ಸ್ಟಾಗ್ರಾಮ್ ಪೋಸ್ಟ್

ನವದೆಹಲಿ: ನಟಿ ಕಂಗನಾ ರಣಾವತ್ ಅವರ ಚುನಾವಣಾ ಪ್ರಚಾರದ ಕುರಿತು ಕಾಂಗ್ರೆಸ್ ನಾಯಕರೊಬ್ಬರು ಅವಹೇಳನಕಾರಿ ಪೋಸ್ಟ್ ಮಾಡಿದ್ದು ಹೊಸ ವಿವಾದಕ್ಕೆ ಕಾರಣವಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗವು ರಾಜಕಾರಣಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.
ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರಿನಾಟೆ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಕಂಗನಾ ರಣಾವತ್ ಅವರ ಫೋಟೋದೊಂದಿಗೆ ಪೋಸ್ಟ್ ರಾಷ್ಟ್ರೀಯ ಚುನಾವಣೆಗೆ ವಾರಗಳ ಮೊದಲು ಬಂದಿದೆ. ರಣಾವತ್‌ ಅವರು ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಸುಪ್ರಿಯಾ ಅವರ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ರಣಾವತ್‌ ಫೋಟೊ ಸಮೇತ ಮಾಡಿದ್ದ ಆಕ್ಷೇಪಾರ್ಹ ಪೋಸ್ಟ್‌ ಅನ್ನು ಈಗ ಅಳಿಸಿ ಹಾಕಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ಪ್ರಕರಣ ಸಂಬಂಧ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
ಶ್ರೀನಾಟೆ ಅವರ ಟೀಕೆಗಳಿಗೆ ಕಂಗನಾ ರಣಾವತ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ., ತಾನು “ರಜ್ಜೋದಲ್ಲಿ ವೇಶ್ಯೆ ಪಾತ್ರದಿಂದ ಹಿಡಿದು ತಲೈವಿಯ ಕ್ರಾಂತಿಕಾರಿ ನಾಯಕಿ ವರೆಗೆ” ವಿಭಿನ್ನ ಮಹಿಳಾ ಪಾತ್ರಗಳನ್ನು ನಿರ್ವಹಿಸಿದ್ದಾಗಿ ಹೇಳಿದ್ದಾರೆ.
ಪ್ರಿಯ ಸುಪ್ರಿಯಾ ಜೀ, ನನ್ನ ವೃತ್ತಿಜೀವನದ ಕಳೆದ 20 ವರ್ಷಗಳಲ್ಲಿ ಕಲಾವಿದೆಯಾಗಿ ನಾನು ಎಲ್ಲಾ ರೀತಿಯ ಪಾತ್ರವನ್ನು ನಿರ್ವಹಿಸಿದ್ದೇನೆ. ರಾಣಿಯ ನಿಷ್ಕಪಟ ಹುಡುಗಿಯಿಂದ ಢಾಕಡ್‌ನ ಮೋಹಕ ಗೂಢಚಾರಿಣಿ ವರೆಗೆ, ಮಣಿಕರ್ಣಿಕಾದ ದೇವತೆಯಿಂದ ಚಂದ್ರಮುಖಿಯಲ್ಲಿ ರಾಕ್ಷಸಿ ವರೆಗೆ, ತಲೈವಿಯ ಕ್ರಾಂತಿಕಾರಿ ನಾಯಕಿಯಿಂದ ರಜ್ಜೋದಲ್ಲಿ ವೇಶ್ಯೆ ಪಾತ್ರದ ವರೆಗೆ ಕಾಣಿಸಿಕೊಂಡಿದ್ದೇನೆ’ ಎಂದು ರಣಾವತ್‌ ಪೋಸ್ಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಮತದಾನದ ವೇಳೆ ಮತಗಟ್ಟೆಯಲ್ಲಿನ ವಿವಿಪ್ಯಾಟ್‌ ಯಂತ್ರವನ್ನು ನೆಲಕ್ಕೆ ಅಪ್ಪಳಿಸಿ ಧ್ವಂಸ ಮಾಡಿದ ಶಾಸಕ...!

ಸುಪ್ರಿಯಾ ಶ್ರೀನಾಟೆ ಅವರು ಈ ಕುರಿತು ಹೇಳಿಕೆ ನೀಡಿದ್ದು,, ‘ಈ ಪೋಸ್ಟ್ ಅವಹೇಳಕಾರಿಯಾಗಿದೆ ಎಂದು ತಿಳಿದ ತಕ್ಷಣ ನಾನು ಆ ಪೋಸ್ಟ್ ಅನ್ನು ಅಳಿಸಿದ್ದೇನೆ. ಯಾರೋ ಕಿಡಿಗೇಡಿಗಳು ನನ್ನ ಹೆಸರಿನಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆ ತೆರೆದು ಕಂಗನಾ ಅವರ ಬಗ್ಗೆ ‘ಆಕ್ಷೇಪಾರ್ಹ ಪೋಸ್ಟ್’ ಅನ್ನು ಹಂಚಿಕೊಂಡಿದ್ದಾರೆ. ಯಾರು ಈ ಕೃತ್ಯ ಎಸಗಿದ್ದಾರೆ ಎಂಬುದನ್ನು ತಿಳಿಯಲು ಮುಂದಾಗಿದ್ದೇನೆ. ಜತೆಗೆ, ನಕಲಿ ಖಾತೆ ಕುರಿತು ವರದಿ ಮಾಡಿದ್ದೇನೆ’ ಎಂದು ಸುಪ್ರಿಯಾ ಹೇಳಿಕೊಂಡಿದ್ದಾರೆ.
“ಹಲವು ಜನರು ನನ್ನ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಿಗೆ ಪ್ರವೇಶ ಹೊಂದಿದ್ದಾರೆ. ಅವರಲ್ಲಿ ಯಾರೋ ಅತ್ಯಂತ ಅನುಚಿತ ಪೋಸ್ಟ್ ಮಾಡಿದ್ದಾರೆ. ನನಗೆ ತಿಳಿದ ತಕ್ಷಣ ನಾನು ಆ ಪೋಸ್ಟ್ ಅನ್ನು ಅಳಿಸಿದ್ದೇನೆ. ನನ್ನನ್ನು ತಿಳಿದಿರುವ ಎಲ್ಲರಿಗೂ ನಾನು ಎಂದಿಗೂ ಯಾವುದೇ ಮಹಿಳೆಯ ಬಗ್ಗೆ ಅಸಭ್ಯ ಕಾಮೆಂಟ್‌ ಮಾಡಲಾರೆ ಎಂದು ಚೆನ್ನಾಗಿ ತಿಳಿದಿದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದ ಅಮೆರಿಕದ ರಾಜಕೀಯ ವಿಜ್ಞಾನಿ; ಅವರ ಪ್ರಕಾರ ಬಿಜೆಪಿ ಗೆಲ್ಲುವ ಸ್ಥಾನಗಳೆಷ್ಟು ಗೊತ್ತೆ..?

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement