ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ಬೆಂಗಳೂರು, ತೀರ್ಥಹಳ್ಳಿ, ಚೆನ್ನೈ ಸೇರಿದಂತೆ ಅನೇಕ ಕಡೆ ಎನ್‌ಐಎ ದಾಳಿ

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಬೆಂಗಳೂರು, ತೀರ್ಥಹಳ್ಳಿ ಹಾಗೂ ಚೆನ್ನೈನ ಅನೇಕ ಭಾಗಗಳಲ್ಲಿ ದಾಳಿ ನಡೆಸಿದೆ.
ಎನ್‌ಐಎ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ತೀರ್ಥಹಳ್ಳಿ ಪಟ್ಟಣದ ಐದಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಆರೋಪಿ ತೀರ್ಥಹಳ್ಳಿ ಮೂಲದವನು ಎಂದು ಹೇಳಲಾಗಿದೆ. ಹೀಗಾಗಿ ತೀರ್ಥಹಳ್ಳಿಯ. ಸೊಪ್ಪುಗುಡ್ಡೆ, ಇಂದಿರಾನಗರ ಹಾಗೂ ಬೆಟ್ಟಮಕ್ಕಿ ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿದೆ. ಬೆಳ್ಳಂಬೆಳಿಗ್ಗೆ ಸುಮಾರು 5 ವಾಹನಗಳಲ್ಲಿ ಆಗಮಿಸಿರುವ 15ಕ್ಕೂ ಹೆಚ್ಚು ಅಧಿಕಾರಿಗಳು ಕೆಲವು ಶಂಕಿತರ ಮನೆಗಳಲ್ಲಿ ಶೋಧ ನಡೆಸಿದ್ದಾರೆ.
ಎನ್‌ಐಎ ಅಧಿಕಾರಿಗಳು ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು,ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಪುರಾವೆಗಳಿದ್ದರೆ ಅವರನ್ನು ಬಂಧಿಸಬಹುದು.

ಚೆನ್ನೈನಲ್ಲಿ ಹಲವು ಸ್ಥಳಗಳ ಮೇಲೆ ದಸಹ ದಾಳಿ ನಡೆಸಲಾಗಿದೆ. ಮಾರ್ಚ್ 1 ರ ಸ್ಫೋಟದ ಇಬ್ಬರು ಶಂಕಿತರು ಚೆನ್ನೈನಲ್ಲಿ ತಂಗಿದ್ದಾರೆ ಎಂಬ ಗುಪ್ತಚರ ಮಾಹಿತಿಯ ನಂತರ ಈ ದಾಳಿಗಳನ್ನು ನಡೆಸಲಾಗಿದೆ. ಈಗಾಗಲೇ ಪ್ರಮುಖ ಶಂಕಿತನನ್ನು ಗುರುತಿಸಿರುವ ಕೇಂದ್ರೀಯ ಭಯೋತ್ಪಾದನಾ ನಿಗ್ರಹ ತನಿಖಾ ಸಂಸ್ಥೆ ಇನ್ನೂ ಆತನನ್ನು ಪತ್ತೆ ಹಚ್ಚಿಲ್ಲ. ಟೋಪಿ ಮತ್ತು ಮಾಸ್ಕ್‌ ಧರಿಸಿದ ಪ್ರಮುಖ ಆರೋಪಿ ಚೆನ್ನೈನಲ್ಲಿ ಇದ್ದ ಎಂದು ಹೇಳಲಾಗಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಹತ್ತು ಮಂದಿ ಗಾಯಗೊಂಡಿದ್ದರು.
ಪ್ರಮುಖ ಆರೋಪಿಯನ್ನು ಗುರುತಿಸಲು ಸಂಸ್ಥೆಯು 1,000 ಸಿಸಿಟಿವಿ ಕ್ಯಾಮೆರಾಗಳನ್ನು ವಿಶ್ಲೇಷಿಸಿದೆ. ಎನ್‌ಐಎ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟ ಪ್ರಮುಖ ಆರೋಪಿಯ ಮಾಹಿತಿಗಾಗಿ 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದೆ ಮತ್ತು ಶಂಕಿತನ ಸಿಸಿಟಿವಿ ಚಿತ್ರಗಳು ಮತ್ತು ವೀಡಿಯೊಗಳನ್ನು ಸಹ ಬಿಡುಗಡೆ ಮಾಡಿದೆ.

ಪ್ರಮುಖ ಸುದ್ದಿ :-   ವಿಪರೀತ ಮಳೆ : ದಕ್ಷಿಣ ಕನ್ನಡ ಜಿಲ್ಲೆಯ 5 ತಾಲೂಕುಗಳ ಶಾಲೆ-ಪಿಯು ಕಾಲೇಜುಗಳಿಗೆ ಜುಲೈ 19ಕ್ಕೆ ರಜೆ ಘೋಷಣೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement