ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

ಮುಂಬೈ: ಲೋಕಸಭೆ ಚುನಾವಣೆಗೆ ಮುನ್ನ ಗುರುವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಸಮ್ಮುಖದಲ್ಲಿ ಬಾಲಿವುಡ್‌ ಜನಪ್ರಿಯ ನಟ ಗೋವಿಂದ ಅವರು ಶಿವಸೇನೆ (ಶಿಂಧೆ ಬಣ) ಸೇರಿದ್ದಾರೆ. ಹಿಂದಿನ ದಿನ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದ ಗೋವಿಂದ ಅವರು ಇಂದು, ಗುರುವಾರ (ಮಾರ್ಚ್‌ ೨೮) ಬಾಳಾಸಾಹೇಬ ಭವನದಲ್ಲಿ ಶಿವಸೇನೆಗೆ ಸೇರಿದರು.
ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಮುಂಬೈ ವಾಯವ್ಯ ಲೋಕಸಭಾ ಕ್ಷೇತ್ರದಿಂದ ಗೋವಿನ ಅವರನ್ನು ಕಣಕ್ಕಿಳಿಸಬಹುದಾಗಿದೆ.
ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ಅಭ್ಯರ್ಥಿ ಅಮೋಲ್ ಕೀರ್ತಿಕರ್ ಅವರನ್ನು ಎದುರಲಿದ್ದಾರೆ ಎನ್ನಲಾಗಿದೆ.
2010 ರಿಂದ 2024 ರವರೆಗೆ ‘ವನವಾಸ್’ ಇತ್ತು. ನಾನು ಶಿವಸೇನೆಗೆ ಸೇರುತ್ತಿದ್ದೇನೆ ಮತ್ತು ಇದು ದೇವರ ಆಶೀರ್ವಾದ. ನಾನು ಮತ್ತೆ ರಾಜಕೀಯಕ್ಕೆ ಬರುವುದಿಲ್ಲ ಎಂದು ಭಾವಿಸಿದ್ದೆ ಎಂದು ಗೋವಿಂದ ಹೇಳಿದರು.
ನಂತರ ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರೊಂದಿಗೆ ನನ್ನ ಪೋಷಕರು ಉತ್ತಮ ಸಂಬಂಧವನ್ನು ಹೊಂದಿದ್ದರು ಎಂದು ನಟ ಗೋವಿಂದ ಹೇಳಿದರು.ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಯಾವ ಮಟ್ಟದ ಪ್ರಗತಿಯನ್ನು ಕಂಡಿದ್ದೇವೆಯೋ ಅದೇ ಮಟ್ಟದ ಪ್ರಗತಿಯನ್ನು ಕಳೆದ 2 ವರ್ಷಗಳಲ್ಲಿ ಇಲ್ಲಿ (ಮಹಾರಾಷ್ಟ್ರದಲ್ಲಿ) ಕಂಡಿದ್ದೇವೆ. ನಾವು ರಾಜ್ಯದ ಸುಂದರೀಕರಣ ಮತ್ತು ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆಯತ್ತ ಗಮನಹರಿಸುತ್ತೇವೆ… ”ಎಂದು ಶಿವಸೇನೆಯ ಶಿಂಧೆ ಬಣಕ್ಕೆ ಸೇರಿದ ನಂತರ ಗೋವಿಂದ ಹೇಳಿದರು.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

‘ಗೋವಿಂದ ಅವರು ಸರ್ಕಾರ ಮತ್ತು ಚಲನಚಿತ್ರೋದ್ಯಮದ ನಡುವಿನ ಕೊಂಡಿಯಾಗಲಿದ್ದಾರೆ…
ಸಿನಿಮಾ ಇಂಡಸ್ಟ್ರಿಗೆ ಏನಾದರೂ ಮಾಡಬೇಕೆಂದು ಗೋವಿಂದ ಹೇಳಿದ್ದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದ್ದಾರೆ. ಅವರು ಸರ್ಕಾರ ಮತ್ತು ಚಿತ್ರರಂಗದ ನಡುವೆ ಕೊಂಡಿಯಾಗಲಿದ್ದಾರೆ ಎಂದು ಅವರು ಹೇಳಿದರು.
ರಾಜ್ಯಸಭಾ ಸಂಸದ ಮಿಲಿಂದ್ ದಿಯೋರಾ ಮಾತನಾಡಿ, “ನಾನು ಗೋವಿಂದನನ್ನು ಸುಮಾರು 25 ವರ್ಷಗಳಿಂದ ಬಲ್ಲೆ. 2004ರಲ್ಲಿ ನಾವಿಬ್ಬರೂ ಒಟ್ಟಾಗಿ ಚುನಾವಣೆ ಎದುರಿಸಿದ್ದೆವು. ನನ್ನ ತಂದೆ ಅವರನ್ನು ಕಾಂಗ್ರೆಸ್‌ಗೆ ಕರೆತಂದಿದ್ದರು… ಅವರು ಶುದ್ಧ ಹೃದಯದ ವ್ಯಕ್ತಿ, ಮತ್ತು ಅವರು ಸೃಜನಶೀಲ ಉದ್ಯಮ ಮತ್ತು ದೇಶದ ಸಾಂಸ್ಕೃತಿಕ ರಾಜಧಾನಿ ಮುಂಬೈಯನ್ನು ಪ್ರತಿನಿಧಿಸಲು ಬಯಸುತ್ತಾರೆ ಎಂದು ಅವರು ಹೇಳಿದರು.
ಗೋವಿಂದ ಅವರ ರಾಜಕೀಯ ಜೀವನ
ಗೋವಿಂದ ಅವರು 2004 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು ಮತ್ತು ಮುಂಬೈ ಉತ್ತರದಿಂದ ಬಿಜೆಪಿಯ ರಾಮ ನಾಯ್ಕ ಅವರನ್ನು ಸೋಲಿಸಿ ಲೋಕಸಭೆಗೆ ಆಯ್ಕೆಯಾದರು. ಲೋಕಸಭಾ ಸಂಸದರಾಗಿ ಸೇವೆ ಸಲ್ಲಿಸುತ್ತಲೇ ಸಿನಿಮಾ ವೃತ್ತಿಯನ್ನು ಮುಂದುವರಿಸಿದರು. ಆದಾಗ್ಯೂ, ಜನವರಿ 2008 ರಲ್ಲಿ, ಅವರು ರಾಜಕೀಯವನ್ನು ತೊರೆದು ತಮ್ಮ ನಟನಾ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಲು ನಿರ್ಧರಿಸಿದರು.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement