ಮುಂಬೈ ಇಂಡಿಯನ್ಸ್ ತಂಡದಲ್ಲಿ ಎಲ್ಲವೂ ಚೆನ್ನಾಗಿದೆಯೇ? ರೋಹಿತ್ ಶರ್ಮಾ ಬದಲಿಗೆ ಫ್ರಾಂಚೈಸಿಯ ನಾಯಕರಾಗಿ ಹಾರ್ದಿಕ್ ಪಾಂಡ್ಯ ಅವರನ್ನು ನೇಮಕ ಮಾಡಲಾಗಿದ್ದು, ಅದನ್ನು ಎಲ್ಲರೂ ಉತ್ತಮ ರೀತಿಯಲ್ಲಿ ಸ್ವೀಕರಿಸಲಿಲ್ಲ ಎಂದು ವರದಿಯಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಅಭಿಯಾನದ ಮೊದಲ ಎರಡು ಪಂದ್ಯಗಳಲ್ಲಿ ಮುಂಬೈ ಸತತ ಎರಡು ಸೋಲುಗಳನ್ನು ಅನುಭವಿಸಿದ ನಂತರ, ಪರಿಸ್ಥಿತಿಯು ಹದಗೆಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವೊಂದು ಹರಿದಾಡುತ್ತಿದ್ದು, ಅದನ್ನು ನೋಡಿದ ನಂತರ ಹಾರ್ದಿಕ್ ಪಾಂಡ್ಯಾ ಮತ್ತು ಲಸಿತ್ ಮಾಲಿಂಗ ನಡುವಿನ ಸಂಬಂಧ ಹಳಸಿದೆಯೇ ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ. ವೀಡಿಯೊದಲ್ಲಿ, ಮುಂಬೈ ಇಂಡಿಯನ್ಸ್ (MI) ನಾಯಕ ಶ್ರೀಲಂಕಾದ ಲೆಜೆಂಡರಿ ಬೌಲರ್ ಆಗಿದ್ದ ಹಾಗೂ ಈಗ ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಲಿಸತ್ ಮಾಲಿಂಗ ಅವರನ್ನು ದೂರ ತಳ್ಳುತ್ತಿರುವುದನ್ನು ಕಾಣಬಹುದು.
ಪಂದ್ಯದ ಮುಕ್ತಾಯದ ನಂತರ ಲಸಿತ್ ಮಾಲಿಂಗ್ ಅವರು ಹಾರ್ದಿಕ್ ಪಾಂಡ್ಯಾ ಅವರನ್ನು ತಬ್ಬಿಕೊಳ್ಳಲು ಬಂದರು. ಆದರೆ ನಾಯಕ ಪಾಂಡ್ಯಾ ಮೂಡ್‌ನಲ್ಲಿ ಇದ್ದಂತೆ ತೋರಲಿಲ್ಲ ಮತ್ತು ಸಂಕ್ಷಿಪ್ತ ಹ್ಯಾಂಡ್‌ಶೇಕ್ ನಂತರ ಮಾಲಿಂಗ ಅವರನ್ನು ಪಕ್ಕಕ್ಕೆ ತಳ್ಳಿದರು.
ಮತ್ತೊಂದು ವೀಡಿಯೊದಲ್ಲಿ ಪೊಲಾರ್ಡ್ ಮತ್ತು ಮಾಲಿಂಗ ಕುಳಿತಿರುವುದು ಕಂಡು ಬಂದಿದೆ. ಔಟಾಗಿ ಅಲ್ಲಿಗೆ ಬಂದ ಪಾಂಡ್ಯ ಇಬ್ಬರನ್ನು ನೋಡಿ ತನಗೆ ಒಂದು ಕುರ್ಚಿ ಬೇಕು ಎನ್ನುವಂತೆ ವರ್ತಿಸುತ್ತಾರೆ. ಇದನ್ನು ನೋಡಿದ ಪೊಲಾರ್ಡ್ ತಮ್ಮ ಕುರ್ಚಿಯಿಂದ ಏಳಲು ಮುಂದಾಗುತ್ತಾರೆ. ಈ ವೇಳೆ ಪಕ್ಕದಲ್ಲೇ ಇದ್ದ ಲಸಿತ್ ಮಾಲಿಂಗ ಪೊಲಾರ್ಡ್ ರನ್ನು ತಡೆದು ತಮ್ಮ ಕುರ್ಚಿಯನ್ನು ಬಿಟ್ಟು ಅಲ್ಲಿಂದ ಹೊರ ಹೋಗುತ್ತಾರೆ. ನಂತರ ಪಾಂಡ್ಯ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಪಾಂಡ್ಯ ವರ್ತನೆಯನ್ನು ಟಿಕಿಸಿದ್ದಾರೆ. ಮುಂಬೈ ಇಂಡಿಯನ್ಸ್ ಗಾಗಿ ಇಷ್ಟೆಲ್ಲಾ ಸಾಧನೆ ಮಾಡಿದ ಇಬ್ಬರು ಹಿರಿಯ ಆಟಗಾರರ ಮುಂದೆ ಈ ತರಹದ ವರ್ತನೆ ಸರಿಯಲ್ಲ ಎಂದು ಅನೇಕರು ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು. ಟ್ರಾವಿಸ್ ಹೆಡ್ (24 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 62), ಮತ್ತು ಅಭಿಷೇಕ್ ಶರ್ಮಾ (23 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು 7 ಸಿಕ್ಸರ್‌ಗಳೊಂದಿಗೆ 63) ಅವರ ಭರ್ಜರಿ ಆಟ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ತಮ್ಮ 10 ಓವರ್‌ಗಳಲ್ಲಿ 148/2 ರನ್ ತಪುಪಲು ಕಾರಣವಾಯಿತು.
ಅಭಿಷೇಕ್ ಮತ್ತು ಏಡೆನ್ ಮಾರ್ಕ್ರಾಮ್ (28 ಎಸೆತಗಳಲ್ಲಿ 2 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 42*), ಹೆನ್ರಿಕ್ ಕ್ಲಾಸೆನ್ (34 ಎಸೆತಗಳಲ್ಲಿ 80*, ನಾಲ್ಕು ಬೌಂಡರಿ ಮತ್ತು 7 ಸಿಕ್ಸರ್‌ಗಳು) ನೆರವಿನಿಂದ ತಮ್ಮ 20 ಓವರ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 277/3 ಗೆ ತಲುಪಿತು. ಇದು ಇದುವರೆಗಿನ ಗರಿಷ್ಠ IPL ಮೊತ್ತವಾಗಿದೆ.
ಆದರೆ ಮುಂಬೈ ಇಂಡಿಯನ್ಸ್ (MI) ತಂಡವನ್ನು ಸನ್‌ರೈಸರ್ಸ್ ಹೈದರಾಬಾದ್ (SRH) ಬೌಲರ್‌ಗಳು ಉತ್ತಮವಾಗಿ ನಿಯಂತ್ರಿಸಿದರು ಮತ್ತು 20 ಓವರ್‌ಗಳಲ್ಲಿ 246/5 ಗೆ ಸೀಮಿತಗೊಳಿಸಿದ ನಂತರ ಮುಂಬೈ ಇಂಡಿಯನ್ಸ್ ವಿರುದ್ಧ 31 ರನ್‌ಗಳಿಂದ ಗೆಲುವು ಸಾಧಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ