ಲೋಕಸಭೆ ಚುನಾವಣೆ | 27 ಸದಸ್ಯರ ಪ್ರಣಾಳಿಕೆ ಸಮಿತಿ ಪ್ರಕಟಿಸಿದ ಬಿಜೆಪಿ ;ರಾಜನಾಥ ಸಿಂಗ್ ಚೇರ್ಮನ್‌ : ಪಟ್ಟಿ ಇಲ್ಲಿದೆ

ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಲೋಕಸಭೆ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರಾಗಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಮಿತಿಯ ಸಂಚಾಲಕರಾಗಿದ್ದಾರೆ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಹ ಸಂಚಾಲಕರಾಗಿರುತ್ತಾರೆ. ಅಲ್ಲದೆ, ಪ್ರಣಾಳಿಕೆ ಸಮಿತಿಗೆ 24 ಮಂದಿಯನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಅರ್ಜುನ ಮುಂಡಾ, ಭೂಪೇಂದ್ರ ಯಾದವ, ಅರ್ಜುನರಾಮ ಮೇಘವಾಲ್, ಕಿರಣ್ ರಿಜಿಜು, ಅಶ್ವಿನಿ ವೈಷ್ಣವ್, ಧರ್ಮೇಂದ್ರ ಪ್ರಧಾನ, ಭೂಪೇಂದ್ರ ಪಟೇಲ್, ಹಿಮಂತ ವಿಶ್ವ ಶರ್ಮ, ವಿಷ್ಣುದೇವ ಸಾಯಿ, ಮೋಹನ ಯಾದವ್, ಶಿವರಾಜ ಸಿಂಗ್ ಚೌಹಾಣ, ವಸುಂಧರಾ ರಾಜೇ , ಸ್ಮೃತಿ ಇರಾನಿ, ಜುಯಲ್ ಓರಂ, ರವಿಶಂಕರ, ಸುರಸೀಲ್ ಮೋದಿ ಕೇಶವ ಪ್ರಸಾದ ಮೌರ್ಯ, ರಾಜೀವ ಚಂದ್ರಶೇಖರ, ವಿನೋದ ತಾವ್ಡೆ, ರಾಧಾಮೋಹನ್ ದಾಸ್ ಅಗರ್ವಾಲ್, ಮಂಜಿಂದರ್ ಸಿಂಗ್ ಸಿರ್ಸಾ, ಒಪಿ ಧನಕರ್, ಅನಿಲ ಆಂಟೋನಿ, ತಾರಿಕ್ ಮನ್ಸೂರ್ ಈ ಸಮಿತಿಯ ಸದಸ್ಯರಾಗಿದ್ದಾರೆ.
ಬಿಜೆಪಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾ ಉಸ್ತುವಾರಿಗಳು, ಸಹ-ಪ್ರಭಾರಿಗಳ ನೇಮಕ

ಇದಕ್ಕೂ ಮೊದಲು ಮಾರ್ಚ್ 28 ರಂದು ಬಿಜೆಪಿ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾ ಉಸ್ತುವಾರಿ ಮತ್ತು ಸಹ-ಪ್ರಭಾರಿಗಳನ್ನು ನೇಮಿಸಿತು.
ಕ್ಯಾಪ್ಟನ್ ಅಭಿಮನ್ಯು-ಅಸ್ಸಾಂ
ನಿತಿನ್ ನವೀನ- ಛತ್ತೀಸ್‌ಗಢ
ಒಪಿ ಧನಕರ- ದೆಹಲಿ
ದಿನೇಶ ಶರ್ಮಾ- ಮಹಾರಾಷ್ಟ್ರ,
ಎಂ. ಚುಬಾ ಆವೊ- ಮೇಘಾಲಯ
ಅಜೀತ ಘೋಪ್‌ಚಾಡೆ- ಮಣಿಪುರ
ದೇವೇಶಕುಮಾರ- ಮಿಜೋರಾಂ
ನಳಿನ್ ಕೊಹ್ಲಿ- ನಾಗಾಲ್ಯಾಂಡ್
ಅಭಯ ಪಾಟೀಲ- ತೆಲಂಗಾಣಕ್ಕೆ
ಅವಿನಾಶ್ ರೈ ಖನ್ನಾ-ತ್ರಿಪುರಾ

ಪ್ರಮುಖ ಸುದ್ದಿ :-   ಬಿಜೆಪಿಯ ಭರ್ತೃಹರಿ ಮಹತಾಬ್ ಲೋಕಸಭೆಯ ಹಂಗಾಮಿ ಸ್ಪೀಕರ್

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement