ಕಾಂಗ್ರೆಸ್ಸಿಗೆ ಮತ್ತೊಂದು ಆಘಾತ : ಲೋಕಸಭೆಯ ಮಾಜಿ ಸ್ಪೀಕರ್ ಶಿವರಾಜ ಪಾಟೀಲ ಸೊಸೆ ಡಾ.ಅರ್ಚನಾ ಪಾಟೀಲ ಬಿಜೆಪಿಗೆ ಸೇರ್ಪಡೆ

ಮುಂಬೈ: ಲೋಕಸಭೆಯ ಮಾಜಿ ಸ್ಪೀಕರ್ ಮತ್ತು ಕಾಂಗ್ರೆಸ್ ವರಿಷ್ಠ ಶಿವರಾಜ ಪಾಟೀಲ ಅವರ ಸೊಸೆ, ಡಾ. ಅರ್ಚನಾ ಪಾಟೀಲ ಚಾಕುರ್ಕರ್ ಅವರು ಶನಿವಾರ (ಮಾರ್ಚ್ 30) ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದರು. ದೇಶದಲ್ಲಿ ಏಪ್ರಿಲ್ 19 ರಂದು ಪ್ರಾರಂಭವಾಗುವ ಲೋಕಸಭೆ ಚುನಾವಣೆಗೆ ಕೆಲವು ದಿನಗಳ ಮೊದಲು ಈ ಬೆಳವಣಿಗೆ ನಡೆದಿದೆ. ಅವರು ಶುಕ್ರವಾರ ದಕ್ಷಿಣ ಮುಂಬೈನಲ್ಲಿರುವ ಅವರ ಅಧಿಕೃತ ನಿವಾಸ ‘ಸಾಗರ’ ದಲ್ಲಿ ಫಡ್ನವಿಸ್ ಅವರನ್ನು ಭೇಟಿಯಾಗಿದ್ದರು.
ಶಿವರಾಜ ಪಾಟೀಲ ಅವರ ಆಪ್ತ ಸಹಾಯಕ ಮಾಜಿ ರಾಜ್ಯ ಸಚಿವ ಬಸವರಾಜ ಮುರುಮ್ಕರ ಅವರೊಂದಿಗೆ ಸೋಮವಾರ ಬಿಜೆಪಿ ಸೇರಲು ಯೋಜಿಸಿದ್ದೆ ಎಂದು ಅರ್ಚನಾ ಪಾಟೀಲ್ ಚಾಕುರ್ಕರ್ ಈ ಹಿಂದೆ ಹೇಳಿದ್ದರು ಆದರೆ ತಮ್ಮ ಮಗಳ ಮದುವೆಯ ಕಾರಣ ಯೋಜನೆಯನ್ನು ಮುಂದೂಡಿದ್ದರು.

ಅವರು ಉದಗೀರ್‌ನಲ್ಲಿರುವ ಲೈಫ್‌ಕೇರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿದ್ದಾರೆ ಮತ್ತು ಅವರ ಪತಿ ಶೈಲೇಶ ಪಾಟೀಲ ಚಂದೂರ್ಕರ ಕಾಂಗ್ರೆಸ್‌ನ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ.
ಶಿವರಾಜ ಪಾಟೀಲ ಅವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ 2004 ಮತ್ತು 2008 ರ ನಡುವೆ ಕೇಂದ್ರ ಗೃಹ ಸಚಿವರಾಗಿದ್ದರು. ಅರ್ಚನಾ ಪಾಟೀಲ ಅವರನ್ನು ಬಿಜೆಪಿಗೆ ಸ್ವಾಗತಿಸಿರುವ ಫಡ್ನವೀಸ, ಅವರ ಸೇರ್ಪಡೆ ಪಕ್ಷವನ್ನು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.
ಶಿವರಾಜ್ ಪಾಟೀಲ ತುಂಬಾ ಪವರ್ ಫುಲ್ ಲೀಡರ್, ಇಂದು ಅವರ ಕುಟುಂಬದಿಂದ ಅರ್ಚನಾ ಪಾಟೀಲ್ ನಮ್ಮ ಪಕ್ಷಕ್ಕೆ ಬರುತ್ತಿರುವುದು ದೊಡ್ಡ ವಿಷಯ. ಶಿವರಾಜ ಪಾಟೀಲ ಅವರದ್ದು ದೊಡ್ಡ ಪರಂಪರೆ. ಅರ್ಚನಾ ಆ ಪರಂಪರೆಯಿಂದ ಬಂದಿದ್ದಾರೆ. ಇದರಿಂದ ಪಕ್ಷ ಬಲಗೊಳ್ಳುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸದಿಂದ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿ ; ಪತ್ನಿಗೆ ಥಳಿಸಿ ಪರಾರಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement