ಲೋಕಸಭೆ ಚುನಾವಣೆ : ಬಿಜೆಪಿಯಿಂದ 11 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ನಟ ಸನ್ನಿ ದಿಯೋಲಗೆ ಟಿಕೆಟ್‌ ನಿರಾಕರಣೆ

ನವದೆಹಲಿ: ಒಡಿಶಾ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದ 11 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಜೆಪಿ ಶನಿವಾರ ಬಿಡುಗಡೆ ಮಾಡಿದೆ. ಇತ್ತೀಚಿನ ಪಟ್ಟಿಯಲ್ಲಿ, ಬಿಜೆಪಿ ಪಕ್ಷವು ಒಡಿಶಾದಿಂದ ಮೂವರು, ಪಂಜಾಬ್‌ನಿಂದ ಆರು ಮತ್ತು ಪಶ್ಚಿಮ ಬಂಗಾಳದಿಂದ ಇಬ್ಬರು ಅಭ್ಯರ್ಥಿಗಳನ್ನು ಘೋಷಿಸಿದೆ.
ಪಟ್ಟಿಯಲ್ಲಿ, ನಟ ಮತ್ತು ಹಾಲಿ ಗುರುದಾಸಪುರ ಸಂಸದ ಸನ್ನಿ ಡಿಯೋಲ್ ಬದಲಿಗೆ ದಿನೇಶ್ ಸಿಂಗ್ ‘ಬಬ್ಬು’ ಮತ್ತು ದೆಹಲಿ ಸಂಸದ ಹನ್ಸ್ ರಾಜ್ ಹನ್ಸ್ ಅವರಿಗೆ ಪಂಜಾಬ್‌ನ ಫರೀದ್‌ಕೋಟ್‌ನಿಂದ ಸ್ಪರ್ಧಿಸಲು ಟಿಕೆಟ್‌ ನೀಡಲಾಗಿದೆ.
ಈ ಹಿಂದೆ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ), ಮತ್ತು ಬಿಜು ಜನತಾ ದಳ (ಬಿಜೆಡಿ) ಜೊತೆ ಸಂಬಂಧ ಹೊಂದಿದ್ದ ನಾಯಕರ ಮೇಲೂ ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ.
ಇತ್ತೀಚೆಗಷ್ಟೇ ಬಿಜೆಡಿ ತೊರೆದು ಬಿಜೆಪಿ ಸೇರಿದ್ದ ಭರ್ತೃಹರಿ ಮಹತಾಬ್ ಅವರನ್ನು ಒಡಿಶಾದ ಕಟಕ್‌ನಿಂದ ಪಕ್ಷ ಕಣಕ್ಕಿಳಿಸಿದೆ. ಅದೇ ರೀತಿ, ಬಂಡಾಯ ಕಾಂಗ್ರೆಸ್ ನಾಯಕರಾದ ಪ್ರಣೀತ್ ಕೌರ್ ಮತ್ತು ರವನೀತ್ ಸಿಂಗ್ ಬಿಟ್ಟು ಕ್ರಮವಾಗಿ ಪಟಿಯಾಲ ಮತ್ತು ಲುಧಿಯಾನದಿಂದ ಕಣಕ್ಕಿಳಿದಿದ್ದಾರೆ.

ಪ್ರಮುಖ ಸುದ್ದಿ :-   ಪೇಟಿಎಂ ಸಿಇಒ ಸ್ಥಾನಕ್ಕೆ ಭವೇಶ ಗುಪ್ತಾ ದಿಢೀರ್‌ ರಾಜೀನಾಮೆ

ಎಎಪಿ ಮಾಜಿ ನಾಯಕ ಮತ್ತು ಜಲಂಧರದ ಹಾಲಿ ಸಂಸದ ಸುಶೀಲಕುಮಾರ ರಿಂಕು ಅವರು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ ಅವರು ಇತ್ತೀಚಿಗಷ್ಟೇ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮೂರು ಬಾರಿ ಕಾಂಗ್ರೆಸ್ ಸಂಸದರಾಗಿರುವ ರವನೀತ್ ಸಿಂಗ್ ಬಿಟ್ಟು ಪಂಜಾಬ್ ಮಾಜಿ ಸಿಎಂ ದಿವಂಗತ ಬಿಯಾಂತ್ ಸಿಂಗ್ ಅವರ ಮೊಮ್ಮಗ.
ಒಡಿಶಾದ ಜಾಜ್‌ಪುರದಿಂದ ರವೀಂದ್ರ ನಾರಾಯಣ್ ಬೆಹೆರಾ ಮತ್ತು ಕಂಧಮಾಲ್‌ನಿಂದ ಸುಕಾಂತ್ ಕುಮಾರ್ ಪಾಣಿಗ್ರಾಹಿ ಅವರನ್ನು ಪಕ್ಷವು ಕಣಕ್ಕಿಳಿಸಿದೆ. ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದ ಮಾಜಿ ರಾಜತಾಂತ್ರಿಕ ತರಂಜಿತ್ ಸಿಂಗ್ ಸಂಧು ಅಮೃತಸರದಿಂದ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಝರ್‌ಗ್ರಾಮ್‌ನಿಂದ ಪ್ರಣತ್ ತುಡು ಮತ್ತು ಬಿರ್ಭೂಮ್‌ನಿಂದ ದೇಬಶಿಶ್ ಧರ್ ಅವರನ್ನು ಕಣಕ್ಕಿಳಿಸಿದೆ.

ಒಡಿಶಾ ಬಿಜೆಪಿ ಅಭ್ಯರ್ಥಿಗಳು
ಜಾಜ್ಪುರ (SC)-ಡಾ ರವೀಂದ್ರ ನಾರಾಯಣ ಬೆಹೆರಾ
ಕಂಧಮಾಲ-ಸುಕಾಂತಕುಮಾರ ಪಾಣಿಗ್ರಾಹಿ
ಕಟಕ್‌-ಭರ್ತೃಹರಿ ಮಹತಾಬ್
ಪಂಜಾಬ್ ಅಭ್ಯರ್ಥಿಗಳು
ಗುರುದಾಸಪುರ-ದಿನೇಶ್ ಸಿಂಗ್ ಬಬ್ಬು
ಅಮೃತಸರ-ತರಂಜಿತ್ ಸಿಂಗ್ ಸಂಧು
ಜಲಂಧರ- ಸುಶೀಲಕುಮಾರ ರಿಂಕು (SC)
ಲೂಧಿಯಾನ-ರವನೀತ್ ಸಿಂಗ್ ಬಿಟ್ಟು
ಫರೀದ್‌ಕೋಟ್‌-ಹನ್ಸ್ ರಾಜ್ ಹನ್ಸ್ (SC)
ಪಟಿಯಾಲ- ಪ್ರಣೀತ್ ಕೌರ್
ಪಶ್ಚಿಮ ಬಂಗಾಳ ಅಭ್ಯರ್ಥಿಗಳು
ಜಾರ್ಗ್ರಾಮ್ (ST)-ಡಾ.ಪ್ರಣತ್ ತುಡು
ಬಿರ್ಭೂಮ್‌-ದೇಬಶಿಶ್ ಧರ್

ಪ್ರಮುಖ ಸುದ್ದಿ :-   ಉಗ್ರರ ದಾಳಿಯಲ್ಲಿ ಓರ್ವ ವಾಯುಪಡೆ ಸಿಬ್ಬಂದಿ ಹುತಾತ್ಮ, 5 ಮಂದಿಗೆ ಗಾಯ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement