ಪತ್ನಿ, ಇಬ್ಬರು ಪುಟ್ಟ ಮಕ್ಕಳನ್ನು ಕೊಂದು ಶವಗಳ ಜೊತೆ 3 ದಿನ ಕಳೆದ ವ್ಯಕ್ತಿ…!

ಲಕ್ನೋ : ಉತ್ತರ ಪ್ರದೇಶದ ಲಕ್ನೋದಲ್ಲಿ 32 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಕೊಂದು, ಅವರ ಶವಗಳ ಜೊತೆಯೇ ಮೂರು ರಾತ್ರಿಗಳನ್ನು ಕಳೆದ ಆಘಾತಕಾರಿ ಘಟನೆ ನಡೆದಿರುವುದು ವರದಿಯಾಗಿದೆ. ಮೃತದೇಹಗಳು ಕೊಳೆತು ವಾಸನೆ ಬರುವವರೆಗೂ ಆತ ಅವುಗಳ ಜೊತೆಯೇ ಕಳೆದಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಪತ್ನಿ ಜ್ಯೋತಿ (30) ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯೊಂದಿಗೆ ರಾಮ ಲಗಾನ್ ಎಂಬ ವ್ಯಕ್ತಿ ಮಕ್ಕಳ ಕಣ್ಣೆದುರೇ ಆಕೆಯ ಕುತ್ತಿಗೆಗೆ ದುಪ್ಪಟ್ಟಾ ಬಿಗಿದು ಕೊಲೆ ಮಾಡಿದ್ದ. ಈ ಕೃತ್ಯಕ್ಕೆ ಪ್ರತ್ಯಕ್ಷ ಸಾಕ್ಷಿಗಳಾಗಿದ್ದ ತನ್ನ 6 ವರ್ಷದ ಮಗಳು ಪಾಯಲ್ ಮತ್ತು 3 ವರ್ಷದ ಮಗ ಆನಂದ ಎಂಬವರು ಇದನ್ನು ಪೊಲೀಸರ ಮುಂದೆ ಹೇಳಿಬಿಡಬಹುದು ಎಂಬ ಭಯದಿಂದ ಅವರನ್ನೂ ಸಹ ಸಾಯಿಸಿದ್ದಾನೆ.

“ರಾಮ್ ಲಗಾನ್‌ಗೆ ಏಳು ವರ್ಷಗಳ ಹಿಂದೆ ಮದುವೆಯಾಗಿತ್ತು. ತನ್ನ ಹೆಂಡತಿಗೆ ಅಕ್ರಮ ಸಂಬಂಧ ಇದೆ ಎಂಬ ಬಗ್ಗೆ ಆತ ಸಂಶಯ ಪಡುತ್ತಿದ್ದ. ಹೀಗಾಗಿ ಪತ್ನಿ ಯಾರ ಜೊತೆಯೇ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಕದ್ದು ಕೇಳಿಸಿಕೊಳ್ಳುತ್ತಿದ್ದ. ಈ ವಿಚಾರವಾಗಿ ಅವರಿಬ್ಬರ ನಡುವೆ ಹಲವು ಬಾರಿ ಜಗಳ ನಡೆದಿದ್ದವು. ಮಾರ್ಚ್ 28ರ ರಾತ್ರಿ ಕೂಡ ಅವರ ಮಧ್ಯೆ ಜಗಳ ನಡೆದಿತ್ತು. ನಂತರ ಆತ ಹೆಂಡತಿ ಮತ್ತು ಮಕ್ಕಳನ್ನು ಕೊಂದಿದ್ದಾನೆ” ಎಂದು ಉಪ ಪೊಲೀಸ್ ಆಯುಕ್ತ ಟಿಎಸ್ ಸಿಂಗ್ ತಿಳಿಸಿದ್ದಾರೆ.
ಕೊಲೆಯ ನಂತರ ಆರೋಪಿ ಅದೇ ಕೊಠಡಿಯಲ್ಲಿ ಮಲಗಿದ್ದ. ತನ್ನ ಪಕ್ಕದಲ್ಲಿಯೇ ಹೆಂಡತಿ ಮತ್ತು ಮಕ್ಕಳ ಮೃತದೇಹಗಳಿದ್ದರೂ ಅದರಿಂದ ಆತ ವಿಚಲಿತನಾಗಿರಲಿಲ್ಲ. ಮರುದಿನ ಬೆಳಿಗ್ಗೆ ಎದ್ದು ಹೊರಹೋದರೆ ರಾತ್ರಿ ಮತ್ತೆ ಮನೆಗೆ ವಾಪಸಾಗಿದ್ದ.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

ಎರಡ್ಮೂರು ದಿನಗಳ ನಂತರ ಮನೆಯಿಂದ ಏನೋ ಕೆಟ್ಟ ವಾಸನೆ ಬರುತ್ತಿದೆ ಎಂದು ಮನೆ ಮಾಲೀಕ ಗಮನಿಸುವವರೆಗೂ ಆತ ಹೀಗೆಯೇ ಮುಂದುವರಿಸಿದ್ದ. ವಾಸನೆ ಬಂದ ನಂತರ ಮನೆಯ ಮಾಲೀಕ ಪರಿಶೀಲನೆಗೆ ಮುಂದಾಗಿದ್ದಾನೆ. ರಾಮ ಲಗಾನ್‌ ತನ್ನ ಮನೆ ಬಾಗಿಲಿಗೆ ಬೀಗ ಹಾಕಿರಲಿಲ್ಲ. ಹೀಗಾಗಿ ಮನೆ ಮಾಲೀಕ ಒಳಗೆ ಪ್ರವೇಶಿಸಿದರು ಮನೆಯೊಳಗೆ. ಒಳಗೆ ಕೊಳೆತು ನಾರುವ ಸ್ಥಿತಿಗೆ ತಲುಪಿದ್ದ ಮೂರು ಶವಗಳನ್ನು ಕಂಡು ಅವರು ಗಾಬರಿಯಾದರು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಇದರಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಜನಜಂಗುಳಿ ಇರುವ ಪ್ರದೇಶವಾಗಿರುವುದರಿಂದ ರಾಮ ಲಗಾನಗೆ ಈ ಶವಗಳನ್ನು ಹೊರಗೆ ಕೊಂಡೊಯ್ಯುವುದು ಸಾಧ್ಯವಾಗಿರಲಿಲ್ಲ. ಹೋಳಿ ಆಚರಿಸಲು ಸಂಬಂಧಿಕರ ಮನೆಗೆ ತನ್ನ ಕುಟುಂಬ ತೆರಳಿದೆ ಎಂದು ಆತ ಪಕ್ಕದ ಮನೆಯವರಿಗೆ ಹೇಳಿದ್ದ. ಆತನನ್ನು ಪೊಲೀಸರು ಬಂಧಿಸಿದ್ದು, ತನ್ನ ಕೃತ್ಯವನ್ನು ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement