ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ ನಾಮಪತ್ರ ಸಲ್ಲಿಕೆ ; ಆಸ್ತಿ ವಿವರ ಘೋಷಣೆ : ಪತ್ನಿಯೇ ಶ್ರೀಮಂತೆ…

ಬೆಂಗಳೂರು: ಡಾ. ಸಿಎನ್ ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ಅವರು ರಾಮನಗರದಲ್ಲಿ ನಾಮಪತ್ರ ಸಲ್ಲಿಸಿದರು. ನಗರದ ಚಾಮುಂಡೇಶ್ವರಿ ದೇವಾಲಯಕ್ಕೆ ಪತಿಯೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು,. ಅವರ ಜೊತೆ ಪತ್ನಿ ಎಚ್.ಡಿ. ಅನುಸೂಯ ಹಾಗೂ ಬೆಂಬಲಿಗರು ಇದ್ದರು.
ನಾಮಪತ್ರ ಸಲ್ಲಿಸುವುದಕ್ಕಿಂತ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ. ಅನುಸೂಯ ಅವರು,
ವೈದ್ಯಕೀಯ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಸಲ್ಲಿಸಿರುವ ಪತಿ ಡಾ. ಸಿ.ಎನ್. ಮಂಜುನಾಥ ಅವರು, ಇದೀಗ ರಾಜಕೀಯದ ಮೂಲಕ ಜನಸೇವೆಗೆ ಮುಂದಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನರು ಅವರಿಗೆ ಶಕ್ತಿ ತುಂಬಿ ಸಂಸತ್ತಿಗೆ ಕಳುಹಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿರ್ದೇಶಕರಾಗಿ ಅವರು ಅವರು ಅನನ್ಯ ಸೇವೆ ಸಲ್ಲಿಸಿದ್ದಾರೆ. ಈಗ ರಾಜಕೀಯದಲ್ಲಿ ಸೇವೆ ಸಲ್ಲಿಸಲು ಬಂದಿದ್ದಾರೆ. ಜನರು ಅವರನ್ನು ಬೆಂಬಲಿಸಿ ಮತ ನೀಡಬೇಕು ಎಂದು ಕೋರಿದರು.

ಡಾ.ಸಿ.ಎನ್‌.ಮಂಜುನಾಥ ಅವರು ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ. ದಂಪತಿ ಒಟ್ಟು 96.29 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಮಂಜುನಾಥ್ ಅವರಿಗಿಂತ ಅವರ ಪತ್ನಿ ಅನುಸೂಯ ಅವರೇ ಶ್ರೀಮಂತರಾಗಿದ್ದಾರೆ. ತಮ್ಮ ಹೆಸರಿನಲ್ಲಿ 43.63 ಕೋಟಿ ರೂ.ಗಳು ಮತ್ತು ಪತ್ನಿ ಅನುಸೂಯ ಅವರ ಆಸ್ತಿ ಮೌಲ್ಯ 52.66 ಕೋಟಿ ರೂ. ಇದೆ ಎಂದು ಮಂಜುನಾಥ ತಿಳಿಸಿದ್ದಾರೆ.
ಡಾ. ಮಂಜುನಾಥ ಅವರು 6.98 ಕೋಟಿ ರೂ. ಚರಾಸ್ಥಿ, 36.65 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಆನುಸೂಯ ಅವರು 17.36 ಕೋಟಿ ರೂ. ಚರಾಸ್ತಿ, 35.30 ಕೋಟಿ ರೂ ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಅವಿಭಕ್ತ ಕುಟುಂಬದ ಹೆಸರಿನಲ್ಲಿ 5 ಲಕ್ಷ ರೂ. ಸಾಲ ಇದೆ. ಡಾ. ಮಂಜುನಾಥ ಅವರ ಹೆಸರಿನಲ್ಲಿ 3 ಕೋಟಿ ರೂ. ಸಾಲ ಇದೆ. ಪತ್ನಿ ಅನುಸೂಯ 11 ಕೋಟಿ ರೂ. ಸಾಲ ಹೊಂದಿರುವುದಾಗಿ ಅಫಿಡೆವಿಟ್​ನಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಚಿಕಿತ್ಸೆಗೆಂದು ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶ ಸಂಸದ ಅನ್ವರುಲ್ ಅಜೀಂ ಶವವಾಗಿ ಪತ್ತೆ

ಚರ ಆಸ್ತಿ ವಿವರ
ತಮ್ಮ ಬಳಿ 1.97 ಲಕ್ಷ ರೂ ನಗದು ಹಣವಿದ್ದರೆ, ಪತ್ನಿ ಅನಸೂಯಾ ಬಳಿ 3.04 ಲಕ್ಷ ರೂ ಇದೆ. ಹಿಂದೂ ಅವಿಭಜಿತ ಕುಟುಂಬದ 4.83 ಲಕ್ಷ ರೂ ಮೊತ್ತ ಇರುವುದಾಗಿ ತಿಳಿಸಿದ್ದಾರೆ.
ಬ್ಯಾಂಕ್ ಖಾತೆಗಳು, ಪಿಪಿಎಫ್ ಖಾತೆ, ಜೀವ ವಿಮೆ, ಮುಂತಾದ ಉಳಿತಾಯ ಸೇರಿ 6.98 ಕೋಟಿ ರೂ ಚರ ಸಂಪತ್ತು ಇದೆ. ಇದರಲ್ಲಿ 45 ಲಕ್ಷ ರೂ ಮೌಲ್ಯದ ಮರ್ಸಿಡೆಸ್ ಬೆಂಜ್ ಹಾಗೂ 9.57 ಲಕ್ಷ ರೂ ಮೌಲ್ಯದ ಹುಂಡೈ ವೆರ್ನಾ ಕಾರು ಸೇರಿದೆ. 1.25 ಲಕ್ಷ ರೂ ಮೌಲ್ಯದ ವೈದ್ಯಕೀಯ ಮತ್ತು ಇತರೆ ಪುಸ್ತಕಗಳು ಇರುವುದಾಗಿ ತಿಳಿಸಿದ್ದಾರೆ.
ಸ್ಥಿರ ಆಸ್ತಿ ವಿವರ
ಡಾ. ಸಿಎನ್ ಮಂಜುನಾಥ ಅವರು ಕೃಷಿ ಹಾಗೂ ಕೃಷಿಯೇತರ ಭೂಮಿ ಸೇರಿದಂತೆ 36.65 ಕೋಟಿ ರೂ ಸ್ಥಿರ ಆಸ್ತಿ ಹೊಂದಿದ್ದಾರೆ. ಕೃಷಿ ಭೂಮಿಗಳೆಲ್ಲವೂ ತಮ್ಮ ತಂದೆ ದಿ. ನಂಜಪ್ಪ ಅವರಿಂದ ಬಂದಿದ್ದು, ಮೂರು ಜಮೀನುಗಳ ಒಟ್ಟು ಮೌಲ್ಯ 1.15 ಲಕ್ಷ ರೂ.ಗೂ ಅಧಿಕವಿದೆ. ಇನ್ನು 3.63 ಕೋಟಿ ರೂ ಮೌಲ್ಯದ ಸ್ವಯಾರ್ಜಿತ ನಿವೇಶನವಿದೆ. ವಾಣಿಜ್ಯ ಕಟ್ಟಡ, ರೈಸ್ ಮಿಲ್, ಮನೆ ಕೂಡ ಅವರು ಹಾಗೂ ಸಹೋದರರಾದ ಸಿಎನ್ ಪುಟ್ಟಸ್ವಾಮಿ ಮತ್ತು ಸಿ.ಎನ್. ಬಾಲಕೃಷ್ಣ ಅವರ ಒಡೆತನದಲ್ಲಿವೆ.
ಪತ್ನಿ ಅನಸೂಯಾ ಅವರು 1.47 ಕೋಟಿ ರೂಗೂ ಅಧಿಕ ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ. ನಿವೇಶನಗಳು, ವಾಣಿಜ್ಯ ಕಟ್ಟಡಗಳು ಮತ್ತು ಮನೆಗಳು ಸೇರಿದಂತೆ ಅವರ ಬಳಿ ಇರುವ ಒಟ್ಟು ಸ್ಥಿರ ಆಸ್ತಿ ಮೌಲ್ಯ 35.30 ಕೋಟಿ ರೂ.
ಅಲ್ಲದೆ, ಸರ್ಕಾರಕ್ಕೆ, ಆದಾಯ ತೆರಿಗೆ ಇಲಾಖೆಗೆ, ಪಾಲಿಕೆಗೆ ಆಸ್ತಿ ತೆರಿಗೆಯಲ್ಲಿ ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಎನ್‌ಡಿಎ ಅಭ್ಯರ್ಥಿ ವಿರುದ್ಧ ಸ್ಪರ್ಧೆ : ಬಿಜೆಪಿಯಿಂದ ಭೋಜಪುರಿ ನಟನ ಉಚ್ಛಾಟನೆ

ಚಿನ್ನ-ಕಾರು…
ಡಾ.ಮಂಜುನಾಥ ಬಳಿ ಒಂದು ಮರ್ಸಿಡೀಸ್ ಬೆಂಜ್ ಕಾರು, ಒಂದು ಹುಂಡೈ ವರ್ನಾ ಕಾರು ಇದೆ. ಪತ್ನಿಯ ಬಳಿ ಮಾರುತಿ ಸಿಯಾಜ್ ಕಾರು ಇದೆ. ಡಾ.ಮಂಜುನಾಥ ಹೆಸರಿನಲ್ಲಿ ಯಾವುದೇ ಚಿನ್ನಾರಣ ಇಲ್ಲ. ಆದರೆ ಪತ್ನಿ ಅನುಸೂಯ ಅವರ ಬಳಿ 5 ಕೆಜಿ ಚಿನ್ನಾಭರಣ, 1ಕೆಜಿ ಚಿನ್ನದ ಗಟ್ಟಿ ಇದೆ, 51 ಕ್ಯಾರೇಟ್ ವಜ್ರ ಇದೆ. 340 ಗ್ರಾಂ ಬೆಲೆ ಬಾಳುವ ಹರಳುಗಳು ಮತ್ತು 25 ಕೆಜಿ ಬೆಳ್ಳಿ ಸಹ ಇದೆ. ಅನುಸೂಯ ಮಂಜುನಾಥ ಹೆಸರಿನಲ್ಲಿ 4 ವಾಸದ ಮನೆಗಳು ಇದ್ದರೆ, ಡಾ.ಮಂಜುನಾಥ ಹೆಸರಿನಲ್ಲಿ ಯಾವುದೇ ಮನೆ ಇಲ್ಲ.
ಕುಟುಂಬದವರಿಗೆ ಸಾಲ
ಡಾ.ಮಂಜುನಾಥ ಅವರು ಪುತ್ರ ಸಾತ್ವಿಕ​ಗೆ 99.83 ಲಕ್ಷ ರೂ. ಪುತ್ರಿ ನಮ್ರತಾಗೆ 1.31 ಕೋಟಿ ರೂ., ಪತ್ನಿ ಅನುಸೂಯಗೆ 2.32 ಕೋಟಿ ರೂ. ಹಾಗೂ ಅನಿತಾ ಕುಮಾರಸ್ವಾಮಿಗೆ 7.50 ಲಕ್ಷ ರೂ. ಸಾಲ ನೀಡಿದ್ದಾರೆ. ಪತ್ನಿ ಅನುಸೂಯ ಸಹ ಕುಟುಂಬದವರಿಗೆ ಸಾಲ ನೀಡಿದ್ದಾರೆ. ಪುತ್ರ ಸಾತ್ವಿಕಗೆ 62.88 ಲಕ್ಷ ರೂ. ಪುತ್ರಿ ನಮ್ರತಾಗೆ 2.50 ಕೋಟಿ ರೂ., ತಾಯಿ ಚನ್ನಮ್ಮಗೆ 19.20 ಲಕ್ಷ ರೂ. ಅಣ್ಣನ ಮಕ್ಕಳಾದ ಸೂರಜಗೆ 7.50 ಲಕ್ಷ ರೂ., ಪ್ರಜ್ವಲ ರೇವಣ್ಣಗೆ 22 ಲಕ್ಷ ರೂ. ಸಾಲ ನೀಡಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement