ವೀಡಿಯೊ..| ಪತಿಯ ಜೊತೆ ಪ್ರಿಯಕರನೂ ಮನೆಯಲ್ಲೇ ಇರಬೇಕೆಂದು ಹಠ ಹಿಡಿದು ಹೈ ಟೆನ್ಶನ್‌ ವಿದ್ಯುತ್ ಕಂಬ ಏರಿದ ಮಹಿಳೆ ; ಆದರೆ…

ಲಕ್ನೋ : ಮೂರು ಮಕ್ಕಳ ತಾಯಿಯೊಬ್ಬಳು ಪತಿಯ ಜೊತೆ ತನ್ನ ಪ್ರಿಯಕರನೂ ತನ್ನ ಜೊತೆಗೇ ಇರಬೇಕೆಂದು ಹಠ ಹಿಡಿದು ರಂಪಾಟ ಮಾಡಿ ಹೈ-ವೋಲ್ಟೆಜ್ ಇರುವ ವಿದ್ಯುತ್ ಕಂಬವನ್ನು ಏರಿ ಆತ್ಮಹತ್ಯೆಗೆ ಯತ್ನಿಸಿದ ವಿಲಕ್ಷಣ ಘಟನೆ ನಡೆದಿರುವುದು ವರದಿಯಾಗಿದೆ.
ಈ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಗೋರಖಪುರದಲ್ಲಿ ನಡೆದಿದ್ದು, ಬುಧವಾರ ತನ್ನ ಅಕ್ರಮ ಸಂಬಂಧದ ಬಗ್ಗೆ ಪತಿಗೆ ತಿಳಿದ ನಂತರ ಮಹಿಳೆ ವಿದ್ಯುತ್ ಹೈವೋಲ್ಟೇಜ್ ಕಂಬದ ಮೇಲೆ ಹತ್ತಿ ಹೈಡ್ರಾಮಾ ಮಾಡಿದ್ದಾಳೆ. ಗೋರಖಪುರದ ಪಿಪ್ರೈಚ್‌ ಎಂಬಲ್ಲಿ ನಡೆದ ಈ ಘಟನೆಯ ವೀಡಿಯೊ ತುಣುಕೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ.
34 ವರ್ಷದ ಮಹಿಳೆಯು ಕೂಲಿ ಕೆಲಸ ಮಾಡುವ ರಾಮ ಗೋವಿಂದ ಎಂಬವರನ್ನು ವಿವಾಹವಾಗಿದ್ದಾರೆ. ದಂಪತಿಗೆ ಮೂವರು ಮಕ್ಕಳಿದ್ದಾರೆ.

ಆಕೆ ತನ್ನ ಗಂಡನ ಬೆನ್ನ ಹಿಂದೆಯೇ ಏಳು ವರ್ಷಗಳಿಂದ ಪಕ್ಕದ ಗ್ರಾಮದ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಆದರೆ ಬುಧವಾರ ಈ ವಿಚಾರ ತಿಳಿದ ರಾಮ ಗೋವಿಂದ ಪತ್ನಿಯೊಂದಿಗೆ ಜಗಳವಾಡಿದ್ದಾನೆ.
ಆಗ ಮಹಿಳೆ ತನ್ನ ಪ್ರಿಯಕರನನ್ನು ತನ್ನ ಮನೆಯಲ್ಲಿಯೇ ಇರಿಸಿಕೊಳ್ಳಬೇಕು ಮತ್ತು ಆತನಿಗೆ ಆರ್ಥಿಕ ಸಹಾಯ ಮಾಡಬೇಕು ಎಂದು ಪಟ್ಟು ಹಿಡಿದಳು. ರಾಮ ಗೋವಿಂದ ಇದಕ್ಕೆ ಒಪ್ಪದಿದ್ದಾಗ ಮನೆಯಿಂದ ಹೊರಬಂದ ಈಕೆ ಹೈ-ಟೆನ್ಷನ್ ತಂತಿಗಳಿದ್ದ ವಿದ್ಯುತ್ ಕಂಬವನ್ನು ಏರಿದ್ದಾಳೆ.

ಪ್ರಮುಖ ಸುದ್ದಿ :-   ಬಿಜೆಪಿಯ ಭರ್ತೃಹರಿ ಮಹತಾಬ್ ಲೋಕಸಭೆಯ ಹಂಗಾಮಿ ಸ್ಪೀಕರ್

ಸೇರಿದ ಜನರು ಕೆಳಗಿಳಿಯುವಂತೆ ಎಷ್ಟೇ ಮನವಿ ಮಾಡಿದರೂ ಆಕೆ ಕೆಳಗಿಳಿಯಲು ಒಪ್ಪಲಿಲ್ಲ. ಆಕೆ ತನ್ನ ಬೇಡಿಕೆಗಳು ಈಡೇರುವ ವರೆಗೂ ಕೆಳಗಿಳಿಯುವುದಿಲ್ಲ ಎಂದು ಹಠ ಹಿಡಿದಿದ್ದಳು. ವಿಷಯ ಗೊತ್ತಾದ ನಂತರ ಮಧ್ಯಪ್ರವೇಶಿಸಿದ ಸ್ಥಳೀಯ ಅಧಿಕಾರಿಗಳು ಪೊಲೀಸ್ ಹಾಗೂ ವಿದ್ಯುತ್ ಇಲಾಖೆಯಿಂದ ತಂಡಗಳನ್ನು ಸ್ಥಳಕ್ಕೆ ಕಳುಹಿಸಿದರು. ಪ್ರದೇಶಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಯಿತು. ನಂತರ, ಅಧಿಕಾರಿಗಳು ಗಂಟೆಗಳ ತಾಳ್ಮೆಯ ಮಾತುಕತೆಯ ನಂತರ ಮಹಿಳೆ ಅಂತಿಮವಾಗಿ ಕೆಳಗೆ ಇಳಿದಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಉತ್ತರ ಪ್ರದೇಶದ ಮಹಿಳೆಯೊಬ್ಬರು ತನ್ನ ಗೆಳೆಯನನ್ನು ಮದುವೆಯಾಗುವಂತೆ ಒತ್ತಾಯಿಸಿ ಮೊಬೈಲ್ ಟವರ್ ಏರಿದ್ದರು. ತನ್ನ ಬಾಯ್‌ಫ್ರೆಂಡ್ ತನಗೆ ಮೋಸ ಮಾಡಿದ್ದಾನೆ. ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಲು ನಿರಾಕರಿಸುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದರು. ಉತ್ತರ ಪ್ರದೇಶ ಮಹಾರಾಜ್‌ ಗಂಜ್ ಜಿಲ್ಲೆಯ ಭಿತೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸೆಮ್ರಾ ರಾಜಾ ಟೋಲ್ ಪ್ಲಾಜಾ ಬಳಿ ಈ ಘಟನೆ ನಡೆದಿತ್ತು.

ಪ್ರಮುಖ ಸುದ್ದಿ :-   ತಮಿಳುನಾಡು ಸಾರಾಯಿ ದುರಂತ: ಅಕ್ರಮ ಮದ್ಯ ಸೇವಿಸಿ 33 ಮಂದಿ ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement