ದಿನದ ಕೆಲಸ ಅಂದೇ ಮುಗಿಸಲು ಒತ್ತಡ ಹಾಕಿದ್ದಕ್ಕೆ ಸಹೋದ್ಯೋಗಿಗಳಿಂದಲೇ ಆಡಿಟರ್ ಗೆ ಥಳಿಸಲು ಸುಪಾರಿ ; ಥಳಿತದ ವೀಡಿಯೊ ವೈರಲ್ ಬಳಿಕ ಐವರ ಬಂಧನ

ಬೆಂಗಳೂರು : ಖಾಸಗಿ ಸಂಸ್ಥೆಯೊಂದರಲ್ಲಿ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬೆಂಗಳೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತ ಐವರಲ್ಲಿ ಇಬ್ಬರು ಆಡಿಟರ್ ಅವರ ಸಹೋದ್ಯೋಗಿಗಳಾಗಿದ್ದಾರೆ. ಈ ಇಬ್ಬರು ಆಡಿಟರ್ ಅವರನ್ನು ಥಳಿಸಲು ಗೂಂಡಾಗಳನ್ನು ನೇಮಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆ ದಿನದ ಕೆಲಸಗಳನ್ನು ಅಂದೇ ಮುಗಿಸಿ, ಬಾಕಿ ಇಡಬೇಡಿ ಎಂದು ಸದಾ ಒತ್ತಡ ಹಾಕುತ್ತಿದ್ದ ಆಡಿಟರ್ ಮೇಲೆ ಹಲ್ಲೆ ನಡೆಸಲು ಸಹೋದ್ಯೋಗಿಗಳೇ ಸುಪಾರಿ ಕೊಟ್ಟಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾದ ವೀಡಿಯೊದಲ್ಲಿ ಆರೋಪಿಗಳು ಕಲ್ಯಾಣನಗರ ಬಳಿಯ ರಿಂಗ್ ರೋಡ್‌ನಲ್ಲಿ ಆಡಿಟರ್ ಸುರೇಶ ಅವರಿಗೆ ಕಬ್ಬಿಣದ ರಾಡ್‌ನಿಂದ ಥಳಿಸಿದ್ದಾರೆ.

ಪೊಲೀಸರ ಪ್ರಕಾರ, ಸುರೇಶ ಬೆಂಗಳೂರಿನ ಹಾಲಿನ ಉತ್ಪನ್ನ ಕಂಪನಿಯಲ್ಲಿ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಬಂಧಿಸಿದವರಲ್ಲಿ ಉಮಾಶಂಕರ ಮತ್ತು ವಿನೇಶ ಎಂಬವರು ಕೂಡ ಅದೇ ಕಂಪನಿಯಲ್ಲಿ ಆತನೊಂದಿಗೆ ಕೆಲಸ ಮಾಡುತ್ತಿದ್ದರು. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಸುರೇಶ ತಮ್ಮ ಮೇಲೆ ಒತ್ತಡ ಹೇರಿದ್ದಕ್ಕಾಗಿ ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಆ ದಿನದ ಕೆಲಸಗಳನ್ನು ಅಂದೇ ಮುಗಿಸಬೇಕು, ಬಾಕಿ ಇಡಬೇಡಿ ಎಂದು ಒತ್ತಡ ಹಾಕುತ್ತಿದ್ದ ಆಡಿಟರ್ ಮೇಲೆ ಹಲ್ಲೆ ನಡೆಸಲು ಸಹೋದ್ಯೋಗಿಗಳೇ ಸುಪಾರಿ ಕೊಟ್ಟಿರುವುದಾಗಿ ಹೇಳಿದ್ದಾರೆ. ಆಡಿಟರ್ ಸುರೇಶ ಒಂದು ವರ್ಷದ ಹಿಂದೆ ಕಂಪನಿಗೆ ಸೇರಿದ್ದು, ಕಟ್ಟುನಿಟ್ಟಿನ ಅಧಿಕಾರಿಯಾಗಿದ್ದರು. ಅವರು ಎಲ್ಲಾ ನೌಕರರು ಕೂಡಲೇ ಸ್ಟಾಕ್ ಬ್ಯಾಲೆನ್ಸ್ ಅನ್ನು ಅಂದೇ ಕ್ಲಿಯರ್‌ ಮಾಡಬೇಕೆಂದು ಹೇಳುತ್ತಿದ್ದರು.

ಪ್ರಮುಖ ಸುದ್ದಿ :-   ಅಂಜಲಿ ಹತ್ಯೆ ಪ್ರಕರಣ : ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಸಹೋದರಿ

ಈ ಆರೋಪಿಗಳು ಸ್ಟಾಕ್‌ ಬ್ಯಾಲೆನ್ಸ್‌ ಅನ್ನು ಕ್ಲಿಯರ್‌ ಮಾಡುವುದನ್ನು ವಿಳಂಬ ಮಾಡಿದ ಕಾರಣ ಸುರೇಶ ಅವರು ಇದನ್ನು ಕಂಪನಿಯ ಹಿರಿಯ ಗಮನಕ್ಕೆ ತಂದ ನಂತರ ಉಮಾಶಂಕಶ ಮತ್ತು ವಿನೇಶ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಸಿಟ್ಟಿಗೆದ್ದ ಉಮಾಶಂಕರ ಮಾಜಿ ನೌಕರನನ್ನು ಸಂಪರ್ಕಿಸಿದ ನಂತರ ಆತನನ್ನು ಆತ ಇನ್ನೊಬ್ಬ ಆರೋಪಿ ಸಂದೀಪಗೆ ಪರಿಚಯಿಸಿದ್ದಾನೆ.
ಉಮಾಶಂಕರ ನಿರ್ದೇಶನದ ಮೇರೆಗೆ ಸಂದೀಪ ಕೆಆರ್ ಪುರಂನಿಂದ ಕೆಲವು ಗೂಂಡಾಗಳನ್ನು ನೇಮಿಸಿಕೊಂಡಿದ್ದ. ಅವರು ಸುರೇಶನನ್ನು ಹಿಂಬಾಲಿಸಿ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವೀಡಿಯೊ ವೈರಲ್ ಆದ ನಂತರ ಹೆಣ್ಣೂರು ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಪ್ರಮುಖ ಸುದ್ದಿ :-   ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement