ವಿಜಯವಾಡ : ರೋಡ್ ಶೋ ವೇಳೆ ಕಲ್ಲೆಸೆತ ; ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಗೆ ಗಾಯ

ವಿಜಯವಾಡ: ದೇಶಾದ್ಯಂತ ಲೋಕಸಭಾ ಚುನಾವಣೆಯ ಪ್ರಚಾರ ಬಿರುಸು ಪಡೆಯುತ್ತಿರುವಂತೆಯೇ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಶನಿವಾರ ಸಂಜೆ ರೋಡ್ ಶೋ ವೇಳೆಯಲ್ಲಿ ದುಷ್ಕರ್ಮಿಗಳು ಕಲ್ಲು ತೂರಿದ್ದರಿಂದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಗಾಯಗೊಂಡಿದ್ದಾರೆ.
ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಎಡಗಣ್ಣಿನ ಮೇಲ್ಬಾಗದಲ್ಲಿ ಗಾಯವಾಗಿರುವ ಫೋಟೋ, ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮೇಮಂತ ಸಿದ್ದಂ” ಬಸ್ ಯಾತ್ರೆ ವೇಳೆಯಲ್ಲಿ ಈ ಘಟನೆ ನಡೆದಿದೆ. ಮುಖ್ಯಮಂತ್ರಿ ಅವರ ಎಡಭಾಗದ ಕಣ್ಣಿನ ಮೇಲೆ ಸಣ್ಣ ಗಾಯವಾಗಿದೆ ಎಂದು ತಿಳಿದುಬಂದಿದೆ.

ವೈಎಸ್‌ಆರ್‌ಸಿಪಿ ಮುಖ್ಯಸ್ಥರು ತಮ್ಮ ‘ಮೇಮಂತ ಸಿದ್ಧಂ’ (ನಾವೆಲ್ಲರೂ ಸಿದ್ಧರಿದ್ದೇವೆ) ಚುನಾವಣಾ ಪ್ರಚಾರ ಪ್ರವಾಸದ ವೇಳೆ ಬಸ್‌ನ ಮೇಲೆ ನಿಂತಿರುವುದನ್ನು ವೀಡಿಯೊ ತೋರಿಸುತ್ತದೆ. ಅವರಿಗೆ ಕಲ್ಲು ತಾಗಿದ ನಂತರ, ಅವರ ಪಕ್ಕದಲ್ಲಿರುವ ಜನರು ಕರವಸ್ತ್ರದಿಂದ ಅವರ ಹಣೆ ಒರೆಸುವುದನ್ನು ಕಾಣಬಹುದು.
ಮುಖ್ಯಮಂತ್ರಿ ಜಗನ್ ಪಕ್ಕದಲ್ಲಿರುವ ಶಾಸಕ ವೆಲ್ಲಂಪಳ್ಳಿ ಅವರ ಎಡಗಣ್ಣಿಗೂ ಗಾಯವಾಗಿದೆ. ಘಟನೆ ನಡೆದಾಗ ಜಗನ್ ಮೋಹನ ರೆಡ್ಡಿ ಅವರು ನೆರೆದಿದ್ದ ಜನರತ್ತ ಕೈ ಬೀಸುತ್ತಿದ್ದರು. ಕೂಡಲೇ ವೈದ್ಯರು ಬಸ್‌ನಲ್ಲಿ ಪ್ರಥಮ ಚಿಕಿತ್ಸೆ ನೀಡಿ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಘೋಷಿಸಿದರು.ನಂತರ ಅವರು ಬಸ್‌ ಯಾತ್ರೆ ಮುಂದುವರಿಸಿದರು.

ಪ್ರಮುಖ ಸುದ್ದಿ :-   ಮಹಾರಾಷ್ಟ್ರ | ಗುರುವಾರ ದೇವೇಂದ್ರ ಫಡ್ನವೀಸ್‌, ಇಬ್ಬರು ಡಿಸಿಎಂಗಳ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ

https://twitter.com/i/status/1779183715337531877

ರೆಡ್ಡಿ ಅವರು ಕಡಪ ಜಿಲ್ಲೆಯ ಇಡುಪುಲುಪಾಯದಿಂದ ಶ್ರೀಕಾಕುಳಂ ಜಿಲ್ಲೆಯ ಇಚ್ಚಾಪುರದವರೆಗೆ 21 ದಿನಗಳ ಚುನಾವಣಾ ಪ್ರಚಾರದ ಬಸ್ ಯಾತ್ರೆ ಕೈಗೊಂಡಿದ್ದಾರೆ.
ಈ ಘಟನೆ ಹಿಂದೆ ವಿಪಕ್ಷ ಟಿಡಿಪಿ ಪಕ್ಷದ ಕೈವಾಡವಿದೆ ಎಂದು ವೈಎಸ್ ಆರ್ ಪಿ ನಾಯಕರು ಆರೋಪಿಸಿದ್ದಾರೆ.
ಆಂಧ್ರಪ್ರದೇಶದ 175 ಸದಸ್ಯ ಬಲದ ವಿಧಾನಸಭೆ ಮತ್ತು 25 ಲೋಕಸಭೆ ಸ್ಥಾನಗಳಿಗೆ ಮೇ 13 ರಂದು ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement