ಯು ಪಿ ಎಸ್ ಸಿ ಫಲಿತಾಂಶ ಪ್ರಕಟ: ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್, ಟಾಪ್‌-20 ರ‍್ಯಾಂಕ್ ಪಡೆದವರ ಪಟ್ಟಿ

ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ಕೇಂದ್ರ ಲೋಕಸೇವಾ ಆಯೋಗ (UPSC ) ನಡೆಸಿದ್ದ 2023ನೇ ಸಾಲಿನ ಅಂತಿಮ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಐಐಟಿ ಕಾನ್ಪುರ ಇಂಜಿನಿಯರ್ ಆದಿತ್ಯ ಶ್ರೀವಾಸ್ತವ ಅವರು ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ಅನಿವೇಶ್ ಪ್ರಧಾನ ದ್ವಿತೀಯ ಹಾಗೂ ಡೋಣೂರು ಅನನ್ಯಾ ರೆಡ್ಡಿ ತೃತೀಯ ಸ್ಥಾನಗಳಿಸಿದ್ದಾರೆ. ಅಂತಿಮ ಫಲಿತಾಂಶವನ್ನು https://upsc.gov.in/ ವೆಬ್​ಸೈಟ್​ ನಲ್ಲಿ ಪ್ರಕಟಿಸಲಾಗಿದೆ. (ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ನೋಡಲು.  UPSC Result  ಇಲ್ಲಿ ಕ್ಲಿಕ್‌ ಮಾಡಬಹುದು)
ಆಯೋಗವು ಅರ್ಹ ಅಭ್ಯರ್ಥಿಗಳ ಅಖಿಲ ಭಾರತ ಶ್ರೇಣಿ, ಹೆಸರುಗಳು ಮತ್ತು ರೋಲ್ ಸಂಖ್ಯೆಗಳನ್ನು ಉಲ್ಲೇಖಿಸಿದೆ. UPSC CSE ಫಲಿತಾಂಶ 2023 ಶಿಫಾರಸು ಉದ್ದೇಶಗಳಿಗಾಗಿ 1016 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ 240 ಅಭ್ಯರ್ಥಿಗಳ ಕ್ರೋಢೀಕೃತ ಮೀಸಲು ಪಟ್ಟಿಯನ್ನು ನಿರ್ವಹಿಸಿದೆ. ಆಯೋಗವು ಅಭ್ಯರ್ಥಿಗಳ ವರ್ಗವಾರು ವಿಭಜನೆಯನ್ನು ಪ್ರಕಟಿಸಿದೆ. ಕೆಲವು ಔಪಚಾರಿಕತೆಗಳು ಬಾಕಿಯಿರುವುದರಿಂದ ಆಯೋಗವು 355 ಅಭ್ಯರ್ಥಿಗಳ ಫಲಿತಾಂಶವನ್ನು ತಾತ್ಕಾಲಿಕವಾಗಿ ಇರಿಸಿದೆ.
ಒಟ್ಟು 1016 ಅಭ್ಯರ್ಥಿಗಳು ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅವರನ್ನು ಕೇಂದ್ರ ಸರ್ಕಾರದ ವಿವಿಧ ಸೇವೆಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಲೋಕಸೇವ ಆಯೋಗ ತಿಳಿಸಿದೆ.

ಪ್ರಮುಖ ಸುದ್ದಿ :-   ಬಿಜೆಪಿಯ ಭರ್ತೃಹರಿ ಮಹತಾಬ್ ಲೋಕಸಭೆಯ ಹಂಗಾಮಿ ಸ್ಪೀಕರ್

ಟಾಪ್ 20 ರ್ಯಾಂಕ್‌ ಪಡೆದ ಅಭ್ಯರ್ಥಿಗಳ ಪಟ್ಟಿ
1 ಆದಿತ್ಯ ಶ್ರೀವಾಸ್ತವ
2 ಅನಿಮೇಶ್ ಪ್ರಧಾನ
3 ಡೋಣೂರು ಅನನ್ಯಾ ರೆಡ್ಡಿ
4 ಪಿ ಕೆ ಸಿದ್ಧಾರ್ಥ ರಾಮಕುಮಾರ
5 ರುಹಾನಿ
6 ಸೃಷ್ಟಿ ದಬಾಸ್‌
7 ಅನ್ಮೋಲ್ ರಾಥೋಡ
8 ಆಶಿಶ್ ಕುಮಾರ
9 ನೌಶೀನ್
10 ಐಶ್ವರ್ಯಂ ಪ್ರಜಾಪತಿ
11 ಕುಶ ಮೋಟ್ವಾನಿ
12 ಅನಿಕೇತ ಶಾಂಡಿಲ್ಯ
13 ಮೇಧಾ ಆನಂದ
14 ಶೌರ್ಯ ಅರೋರಾ
15 ಕುನಾಲ್ ರಸ್ತೋಗಿ
16 ಅಯಾನ್ ಜೈನ್
17 ಸ್ವಾತಿ ಶರ್ಮಾ
18 ವಾರ್ದಾ ಖಾನ್
19 ಶಿವಂ ಕುಮಾರ
20 ಆಕಾಶ ವರ್ಮಾ
ಸಾಮಾನ್ಯ ವರ್ಗ – 347, ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲ್ಯೂಎಸ್​) – 115, ಹಿಂದುಳಿದ ವರ್ಗ – 303, ಪರಿಶಿಷ್ಟ ಜಾತಿ – 165, ಪರಿಶಿಷ್ಟ ಪಂಗಡದ ಕೋಟಾದಲ್ಲಿ 86 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಇದರಲ್ಲಿ ಐಎಎಸ್​ ಹುದ್ದೆಗಳಿಗೆ 180, ಎಎಫ್​ಎಸ್​ ಹುದ್ದೆಗಳಿಗೆ – 37, ಐಪಿಎಸ್​ ಹುದ್ದೆಗಳಿಗೆ 200 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement