ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

ಮುಂಬೈ : ನಟ ಸಲ್ಮಾನ್ ಖಾನ್ ಅವರ ಮನೆ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣದಲ್ಲಿ ಇಬ್ಬರು ಶಸ್ತ್ರಾಸ್ತ್ರ ಪೂರೈಕೆದಾರರಲ್ಲಿ ಒಬ್ಬ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏಪ್ರಿಲ್ 26 ರಂದು ಪಂಜಾಬ್‌ನಿಂದ ಬಂಧಿತನಾಗಿದ್ದ 32 ವರ್ಷದ ಅನುಜ್ ಥಾಪನ್ ಎಂಬ ಆರೋಪಿ ಬುಧವಾರ ಬೆಳಿಗ್ಗೆ 11 ಗಂಟೆಗೆ ಪೊಲೀಸ್ ಲಾಕ್‌ಅಪ್‌ಗೆ ಹೊಂದಿಕೊಂಡಿರುವ ಶೌಚಾಲಯಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ಬೆಳಗಿನ ವಾಡಿಕೆಯ ಪರಿಶೀಲನೆಗೆ ತೆರೆದಾಗ, ಅವರಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಅನುಜ್ ಪತ್ತೆಯಾಗಿದ್ದಾನೆ, ನಂತರ ತುರ್ತು ಚಿಕಿತ್ಸೆಗಾಗಿ ಆತನನ್ನು ಜಿಟಿ ಆಸ್ಪತ್ರೆಗೆ ಒಯ್ಯಲಾಯಿತು, ಆದರೆ ಅಲ್ಲಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ ಎಂದು ಹೇಳಲಾಗಿದೆ.
ಆತ ಮತ್ತು ಇನ್ನೊಬ್ಬ ಆರೋಪಿ ಸೋನು ಸುಭಾಷ್ ಚಂದರ್ ಎಂಬಾತನನ್ನು ಏಪ್ರಿಲ್ 14 ರಂದು ಸಲ್ಮಾನ್‌ ಖಾನ್‌ ಅವರ ಮುಂಬೈನ ಮನೆಯ ಹೊರಗೆ ಗುಂಡಿನ ದಾಳಿಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ನೀಡಿದ್ದರು ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು.

ಅನುಜ್ ಥಾಪನ್ ಆತ್ಮಹತ್ಯೆಗೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಲ್ಮಾನ್‌ ಖಾನ್‌ ಮನೆ ಮೇಲೆ ಗುಂಡು ಹಾರಿಸಿದ ವಿಕ್ಕಿ ಗುಪ್ತಾ ಮತ್ತು ಸಾಗರ ಪಾಲ್ ಎಂಬ ಇನ್ನಿಬ್ಬರು ಕೂಡ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಎಲ್ಲಾ ನಾಲ್ವರು ಆರೋಪಿಗಳು ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಜೊತೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ, ಭಯೋತ್ಪಾದನಾ ವಿರೋಧಿ ಸಂಸ್ಥೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಕಾರ ಅವರ ಮುಖ್ಯ ಚಟುವಟಿಕೆಗಳು ಅಪಹರಣ, ಕೊಲೆ, ಸುಲಿಗೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ. ಮತ್ತು ಮಾದಕ ವಸ್ತುಗಳ ಅಕ್ರಮ ಸಾಗಣೆ ಮತ್ತು ಅಕ್ರಮ ಮದ್ಯ ಸಾಗಾಣಿಕೆಯಾಗಿದೆ.

ಪ್ರಮುಖ ಸುದ್ದಿ :-   ಎನ್‌ಡಿಎ ಅಭ್ಯರ್ಥಿ ವಿರುದ್ಧ ಸ್ಪರ್ಧೆ : ಬಿಜೆಪಿಯಿಂದ ಭೋಜಪುರಿ ನಟನ ಉಚ್ಛಾಟನೆ

ಮುಂಬೈ ಕ್ರೈಂ ಬ್ರಾಂಚ್ ಕಳೆದ ತಿಂಗಳು ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಸಹೋದರ ಅನ್ಮೋಲ್ ಬಿಷ್ಣೋಯ್ ವಿರುದ್ಧ ಬಲವಾದ ಪುರಾವೆಗಳನ್ನು ಕಂಡುಕೊಂಡಿದೆ ಎಂದು ಹೇಳಿದೆ, ನಂತರ ಕ್ರೈಂ ಬ್ರಾಂಚ್ ಇಬ್ಬರನ್ನೂ ಪ್ರಕರಣದಲ್ಲಿ ಮೋಸ್ಟ್ ವಾಂಟೆಡ್ ಶಂಕಿತರು ಎಂದು ಘೋಷಿಸಿತು.
ನವೆಂಬರ್ 2022 ರಿಂದ, ಲಾರೆನ್ಸ್ ಬಿಷ್ಣೋಯ್ ಮತ್ತು ಇನ್ನೊಬ್ಬ ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್ ಜೀವ ಬೆದರಿಕೆ ಹಾಕಿದ ನಂತರ ಸಲ್ಮಾನ್ ಖಾನ್ ಅವರ ಭದ್ರತಾ ಮಟ್ಟವನ್ನು ವೈ-ಪ್ಲಸ್‌ಗೆ ಏರಿಸಲಾಗಿದೆ ಹಾಗೂ ವೈಯಕ್ತಿಕ ಬಂದೂಕನ್ನು ಸಾಗಿಸಲು ಅನುಮತಿಸಲಾಗಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement