ರಾಯಗಢ: ಶಿವಸೇನೆ ಉಪನಾಯಕಿ ಸುಷ್ಮಾ ಅಂಧಾರೆಯನ್ನು ಕರೆದುಕೊಂಡು ಬರಲು ಹೊರಟಿದ್ದ ಖಾಸಗಿ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಹಠಾತ್ ಅಪಘಾತಕ್ಕೀಡಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಅಂಧಾರೆ ಹಂಚಿಕೊಂಡ ವೀಡಿಯೊ ದೃಶ್ಯಾವಳಿ ಪ್ರಕಾರ, ಹೆಲಿಕಾಪ್ಟರ್ ಅಪರಿಚಿತ ಸ್ಥಳದಲ್ಲಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುತ್ತಿದೆ ಮತ್ತು ಇದ್ದಕ್ಕಿದ್ದಂತೆ ಅದು ತಿರುಗಲು ಪ್ರಾರಂಭಿಸಿದೆ. ನಂತರ ಸಮತೋಲನವನ್ನು ಕಳೆದುಕೊಂಡು ತೆರೆದ ಮೈದಾನದಲ್ಲಿ ಧೂಳಿನ ಮೋಡ ಎಬ್ಬಿಸಿ ದೊಡ್ಡ ಶಬ್ದದೊಂದಿಗೆ ಅಪ್ಪಳಿಸಿದೆ.
ಹೆಲಿಕಾಪ್ಟರ್‌ನ ಪೈಲಟ್ ಅದೃಷ್ಟವಶಾತ್ ಹೆಲಿಕಾಪ್ಟರ್‌ನಿಂದ ಜಿಗಿದು ಪಾರಾಗಿದ್ದಾರೆ, ಆದರೆ ರಾಯಗಢದ ಮಹಾಡ್ ಪಟ್ಟಣದಲ್ಲಿ ಸಂಭವಿಸಿದ ಅಪಘಾತದಲ್ಲಿ ಹೆಲಿಕಾಪ್ಟರ್ ಹಾನಿಗೊಳಗಾಯಿತು. ಘಟನೆಯ ತನಿಖೆಗಾಗಿ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಅದೇ ಹೆಲಿಕಾಪ್ಟರ್‌ನಿಂದ ಹಾರಲು ನಿಗದಿಯಾಗಿದ್ದ ಅಂಧರೆ — ಜಿಲ್ಲೆಯ ವಿವಿಧ ಭಾಗಗಳಲ್ಲಿ ತನ್ನ ನಿಗದಿತ ಚುನಾವಣಾ ಸಭೆಗಳಿಗಾಗಿ ಕಾರಿನಲ್ಲಿ ತೆರಳಿದರು.
ನಿಮ್ಮ ಕಾಮೆಂಟ್ ಬರೆಯಿರಿ