ವಿಶ್ವದಾದ್ಯಂತ ಕೋವಿಡ್ ಲಸಿಕೆ ಹಿಂತೆಗೆದುಕೊಂಡ ಆಸ್ಟ್ರಾಜೆನೆಕಾ : ವರದಿ

ನವದೆಹಲಿ: ಬ್ರಿಟಿಷ್ ಔಷಧೀಯ ಕಂಪನಿ ಆಸ್ಟ್ರಾಜೆನೆಕಾ ತನ್ನ ಕೋವಿಡ್‌-19 ಲಸಿಕೆಯು ಅಪರೂಪದ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿದೆ ಎಂದು ವರದಿಯಾದ ಕೆಲ ದಿನಗಳ ನಂತರ ಈಗ ತನ್ನ ಕೋವಿಡ್‌-19 ಲಸಿಕೆಯನ್ನು ಜಾಗತಿಕವಾಗಿ ಹಿಂತೆಗೆದುಕೊಳ್ಳಲು ಪ್ರಾರಂಭಿಸಿದೆ. ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದ ಲಸಿಕೆಯನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು ಭಾರತದಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ತಯಾರಿಸಿದೆ.
ಲಸಿಕೆ ತಯಾರಕರು ಕೋವಿಡ್‌-19 ಲಸಿಕೆಯನ್ನು ವಾಣಿಜ್ಯ ಕಾರಣಗಳಿಂದ ವಿಶ್ವಾದ್ಯಂತ ಹಿಂತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.
ಸಾಂಕ್ರಾಮಿಕ ರೋಗಗಳ ನಂತರ ಲಸಿಕೆಯ ಬೇಡಿಕೆಯು ಕಡಿಮೆಯಾಗಿದೆ. ಜೊತೆಗೆ ಲಸಿಕೆಯ ಉತ್ಪಾದನೆ ಹಾಗೂ ಪೂರೈಕೆಯನ್ನು ಕೂಡ ನಿಲ್ಲಿಸಲಾಗಿದೆ.

ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಕೋವಿಡ್ ಲಸಿಕೆಗಳಿರುವುದರಿಂದ ತಮ್ಮ ಲಸಿಕೆ ಹಿಂಪಡೆಯುತ್ತಿರುವುದಾಗಿ ಅಸ್ಟ್ರಾಜೆನೆಕಾ ಹೇಳಿದೆ. ಮಾರ್ಚ್ 5ರಂದೇ ಲಸಿಕೆ ಹಿಂಪಡೆಯಲು ಕಂಪನಿಯು ಅರ್ಜಿ ಸಲ್ಲಿಸಿತ್ತು. ಇದೀಗ ಮೇ 7 ರಿಂದ ಜಾರಿಗೆ ಬಂದಿದೆ ಎಂದು ತಿಳಿದುಬಂದಿದೆ.
ಲಸಿಕೆಯನ್ನು ಬಳಸುತ್ತಿರುವ ಇತರ ದೇಶಗಳಲ್ಲಿ ಇದೇ ರೀತಿಯ ಹಿಂಪಡೆತಲಾಗುತ್ತದೆ ಎಂದು ಹೇಳಿದೆ.
ಕೋವಿಡ್ ಲಸಿಕೆ ಅಸ್ಟ್ರಾಜೆನೆಕಾ ಹಲವಾರು ಜನರಿಗೆ ಸಾವು ಮತ್ತು ಗಾಯಗಳಿಗೆ ಕಾರಣವಾಯಿತು ಎಂಬ ಆರೋಪದ ಮೇಲೆ ಫಾರ್ಮಾಸ್ಯುಟಿಕಲ್ ದೈತ್ಯ ಬ್ರಿಟನ್‌ನಲ್ಲಿ 100 ಮಿಲಿಯನ್ ಪೌಂಡ್ ಮೊಕದ್ದಮೆಯನ್ನು ಎದುರಿಸುತ್ತಿದೆ. ಕೋವಿಶೀಲ್ಡ್ “ಅಪರೂಪದ ಸಂದರ್ಭಗಳಲ್ಲಿ, TTS ಅಥವಾ ಥ್ರಂಬೋಸಿಸ್‌ ಜೊತೆ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್‌ಗೆ ಕಾರಣವಾಗಬಹುದು” ಎಂದು ಫೆಬ್ರವರಿಯಲ್ಲಿ ಅಸ್ಟ್ರಾಜೆನೆಕಾ ನ್ಯಾಯಾಲಯದ ದಾಖಲೆಗಳಲ್ಲಿ ಒಪ್ಪಿಕೊಂಡಿದೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್‌ ನಾಯಕ ಅಧೀರ್‌ ಹೇಳಿಕೆ ತಿರಸ್ಕರಿಸಿದ ನಂತರ ಪಶ್ಚಿಮ ಬಂಗಾಳ ಕಾಂಗ್ರೆಸ್ ಕಚೇರಿ ಮುಂದಿನ ಮಲ್ಲಿಕಾರ್ಜುನ ಖರ್ಗೆ ಪೋಸ್ಟರ್‌ಗಳಿಗೆ ಮಸಿ

ಟಿಟಿಎಸ್‌ (TTS) ಮಾನವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ರಕ್ತದ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುತ್ತದೆ ಮತ್ತು ಬ್ರಿಟನ್‌ನಲ್ಲಿ ಕನಿಷ್ಠ 81 ಸಾವುಗಳಿಗೆ ಸಂಬಂಧಿಸಿದೆ. ಆದಾಗ್ಯೂ, ಕೋವಿಶೀಲ್ಡ್ ಅನ್ನು ಹಿಂತೆಗೆದುಕೊಳ್ಳುವ ನಿರ್ಧಾರವು ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದೆ ಎಂಬುದನ್ನು ಲಸಿಕೆ ತಯಾರಕರು ನಿರಾಕರಿಸಿದ್ದಾರೆ.
ಮೂಲ ಕೋವಿಡ್ ಸ್ಟ್ರೈನ್‌ನೊಂದಿಗೆ ವ್ಯವಹರಿಸುವ ಎಲ್ಲಾ “ಮೊನೊವೆಲೆಂಟ್” ಲಸಿಕೆಗಳನ್ನು ಹಿಂತೆಗೆದುಕೊಳ್ಳಲಾಗುತ್ತದೆ ಮತ್ತು ಇದರ ಬದಲಿಗೆ ವ್ಯಾಪಕ ಶ್ರೇಣಿಯ ತಳಿಗಳನ್ನು ನಿರ್ವಹಿಸುವ ನವೀಕರಿಸಿದ ಲಸಿಕೆಗಳನ್ನು ಬದಲಾಯಿಸಲಾಗುತ್ತದೆ ಎಂದು ತಜ್ಞರು ನಿರೀಕ್ಷಿಸುತ್ತಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement