ವೀಡಿಯೊ…| ವಂದೇ ಭಾರತ ರೈಲಿನಡಿ ಸಿಲುಕಿದ ಹಸು ; ಪ್ರಾಣಾಪಾಯದಿಂದ ಪಾರಾಗಿದ್ದೇ ಒಂದು ವಿಸ್ಮಯ..

ಮುಂಬೈ: ಇತ್ತೀಚೆಗಿನ ದಿನಗಳಲ್ಲಿ ದೇಶದಾದ್ಯಂತ ವೇಗವಾಗಿ ಬರುತ್ತಿರುವ ವಂದೇ ಭಾರತ ಎಕ್ಸ್‌ಪ್ರೆಸ್ ರೈಲಿಗೆ ಹಸುಗಳು ಢಿಕ್ಕಿ ಹೊಡೆದ ಘಟನೆಗಳು ವರದಿಯಾಗುತ್ತಿವೆ. ವೇಗವಾಗಿ ಬರುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಡಿಕ್ಕಿಯಾಗಿ ಹಲವು ಹಸುಗಳು ಸಾವಿಗೀಡಾಗಿವೆ. ಆದರೆ, ಈ ಅಪರೂಪದ ಘಟನೆಯಲ್ಲಿ ವಂದೇ ಭಾರತ ಎಕ್ಸ್‌ಪ್ರೆಸ್ ರೈಲಿನ ಲೋಕೋಮೋಟಿವ್ ಪೈಲಟ್ ತುರ್ತು ಬ್ರೇಕ್ ಹಾಕಿ ಅಚ್ಚರಿಯ ರೀತಿಯಲ್ಲಿ ಹಸುವಿನ ಪ್ರಾಣ ಉಳಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ವೀಡಿಯೊಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಂದೇ ಭಾರತ ರೈಲಿನ ಕೆಳಗೆ ಹಸು ಸಿಲುಕಿಕೊಂಡಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್ ರೈಲು ಹಳಿಯ ಮೇಲೆ ಹಸುವನ್ನು ಗುರುತಿಸಿ ಅದನ್ನು ರಕ್ಷಿಸಲು ತುರ್ತು ಬ್ರೇಕ್ ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ.
ಆದರೆ, ಲೊಕೊ ಪೈಲಟ್ ಬ್ರೇಕ್ ಹಾಕುವಷ್ಟರಲ್ಲಿ ಹಸುವಿನ ಅರ್ಧ ಭಾಗ ರೈಲಿನ ಕೆಳಗೆ ಸಿಲುಕಿಕೊಂಡಿತ್ತು. ರೈಲಿನ ಮುಂಭಾಗದ ಕೆಲ ಭಾಗ ಹಸುವಿನ ಬೇಲೆ ಇದ್ದಿದ್ದರಿಂದ ಅದು ನೋವಿನಿಂದ ಕೂಗುತ್ತಿತ್ತು. ನಂತರ ಚಾಲಕ ಹಸುವಿಗೆ ಅಪಾಯವಾಗದಂತೆ ರೈಲನ್ನು ಹಿಮ್ಮುಖವಾಗಿ ನಿಧಾನವಾಗಿ ಓಡಿಸಿ ಹಸುವನ್ನು ರಕ್ಷಿಸಿದ್ದಾನೆ. ನಂತರ ಹಸು ಎದ್ದು ಟ್ರ್ಯಾಕ್‌ನಿಂದ ಹೊರನಡೆದಿದೆ. ಸಕಾಲಕ್ಕೆ ಬ್ರೇಕ್ ಹಾಕಿದ್ದರಿಂದ ಹಸು ಪ್ರಾಣಾಪಾಯದಿಂದ ಪಾರಾಗಿದೆ.

ಪ್ರಮುಖ ಸುದ್ದಿ :-   ಮಾದಕ ವಸ್ತು ಪ್ರಕರಣ : ನಟ ಶ್ರೀಕಾಂತ ಬಂಧನ

ಇತ್ತೀಚಿನ ಘಟನೆಯೊಂದರಲ್ಲಿ ಕಾನ್ಪುರದಿಂದ ದೆಹಲಿ ಕಡೆಗೆ ಹೋಗುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದು ಹಸು ಸಾವಿಗೀಡಾಗಿತ್ತು. ರೈಲಿನ ಚಾಲಕ ತುರ್ತು ಬ್ರೇಕ್‌ಗಳನ್ನು ಹಾಕಿದರೂ ಹಸುವು ರೈಲಿನಡಿ ಸಿಲುಕಿಕೊಂಡಿತು ಮತ್ತು ರೈಲಿನಿಂದ ಅದರ ದೇಹ ಹೊರ ತೆಗೆಯಲು ರೈಲನ್ನು ಹತ್ತು ನಿಮಿಷಗಳ ಕಾಲ ನಿಲ್ಲಿಸಬೇಕಾಯಿತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement