ಕೊಟ್ಟ ಮಾತಿನಂತೆ ಬಾಗಲಕೋಟೆ ಹುಡುಗಿಗೆ ಪತ್ರ ಬರೆದ ಪ್ರಧಾನಿ ಮೋದಿ

ಬಾಗಲಕೋಟೆ : ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿ ಹೀರಾಬೆನ್‌ ಭಾವಚಿತ್ರ ಬಿಡಿಸಿ ಉಡುಗೊರೆ ನೀಡಿದ್ದ ಬಾಗಲಕೋಟೆ  ಯುವತಿ ಕೊಟ್ಟ ಮಾತಿನಂತೆ ಪ್ರಧಾನಿ ಮೋದಿ ಅವರು ಪತ್ರ ಬರೆದಿದ್ದಾರೆ.
ಕಳೆದ ತಿಂಗಳು ಏಪ್ರಿಲ್ 29 ರಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಪ್ರಧಾನಿ ಮೋದಿಗೆ ಕಾರ್ಯಕ್ರಮಕ್ಕೆ ಬಂದಿದ್ದ ನಾಗರತ್ನ ಮೇಟಿ ಎಂಬ ಯುವತಿ ತಾನು ಬಿಡಿಸಿದ ಚಿತ್ರ ಹಿಡಿದು ವೇದಿಕೆ ಮುಂಭಾಗದಲ್ಲಿ ನಿಂತಿದ್ದಳು. ತಾನು ಬಿಡಿಸಿದ ಪೇಂಟಿಂಗ್‌ ಅನ್ನು ಅಲ್ಲಿಂದಲೇ ಪ್ರಧಾನಿ ಮೋದಿಗೆ ತೋರಿಸಿದ್ದಳು. ತಾಯಿಯ ಫೋಟೋ ನೋಡಿದ ಮೋದಿ, ಎಸ್ ಪಿಜಿ ಸಿಬ್ಬಂದಿಗೆ ಹೇಳಿ ಅದನ್ನು ತರಿಸಿಕೊಂಡಿದ್ದರು. ಅದರಲ್ಲಿ ನಿನ್ನ ಹೆಸರು, ವಿಳಾಸ ಬರೆದುಕೊಡು ನಾನು ಪತ್ರ ಕಳಿಸುತ್ತೇನೆ ಎಂದು ತಿಳಿಸಿದ್ದ ಪ್ರಧಾನಿ ಮೋದಿ ಈಗ ಯುವತಿಗೆ ಕೊಟ್ಟ ಮಾತಿನಂತೆ ಮೇ5ರಂದು ಪತ್ರ ಬರೆದು ಪೋಸ್ಟ್ ಮೂಲಕ ಕಳುಹಿಸಿದ್ದು, ಈ ಚಿತ್ರ ಬಿಡಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.

ಪತ್ರದಲ್ಲೇನಿದೆ?
ಇಂತಹ ಸುಂದರವಾದ ಭಾವಚಿತ್ರ ಉಡುಗೊರೆಯಾಗಿ ನೀಡಿದ್ದಕ್ಕೆ ನಾನು ನಿಮಗೆ ಧನ್ಯವಾದ ತಿಳಿಸುತ್ತೇನೆ. ಈ ಕಲಾತ್ಮಕ ಚಿತ್ರವು ಮಾನವನ ಭಾವನೆಗಳ ಪ್ರಾಮುಖ್ಯತೆಯನ್ನ ತೋರಿಸುತ್ತದೆ. ನಿಮ್ಮ ವರ್ಣಚಿತ್ರ ರೋಮಾಂಚಕ ಪ್ರದರ್ಶನವು ಯುವಶಕ್ತಿಯ ಸಾರವನ್ನು ಒಳಗೊಂಡಿರುತ್ತದೆ. ಹೊಸ ಭಾರತವನ್ನು ರೂಪಿಸುವ ಮತ್ತು ನಮ್ಮ ಯುವಕರಿಗೆ ಭರವಸೆಯ ಭವಿಷ್ಯವನ್ನು ಭದ್ರಪಡಿಸುವ ನನ್ನ ಬದ್ಧತೆಯನ್ನು ಪ್ರೇರೇಪಿಸುತ್ತದೆ. ನಿಮ್ಮ ಸೃಜನಶೀಲ ಪ್ರತಿಭೆ ಮತ್ತು ಕೌಶಲ್ಯಗಳನ್ನು ನಿಮ್ಮ ಕೆಲಸಕ್ಕೆ ಅನ್ವಯಿಸುವಲ್ಲಿ ನೀವು ನಿರಂತರವಾಗಿರಿ. ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಕೆಗಳೊಂದಿಗೆ. ಇಂತಿ, ನಿಮ್ಮ ನರೇಂದ್ರ ಮೋದಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖ ಸುದ್ದಿ :-   ಮೈಸೂರು: ಮಲಗಿದ್ದ ಸ್ಥಿತಿಯಲ್ಲೇ ಒಂದೇ ಕುಟುಂಬದ ನಾಲ್ವರು ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement