ವೀಡಿಯೊ…| ಹೆಲ್ಮೆಟ್ ಹಾಕಿಕೊಂಡು ಕೋಟಿ ಬೆಲೆ ಬಾಳುವ ʼಆಡಿʼ ಕಾರ್‌ ಓಡಿಸ್ತಾರೆ ಈ ವ್ಯಕ್ತಿ : ಕಾರಣ ಕೇಳಿದ್ರೆ….ಹೀಗೂ ಉಂಟೆ

ಝಾನ್ಸಿ: ಒಂದು ಅಸಮಾಮಾನ್ಯ ವಿದ್ಯಮಾನವೊಂದರಲ್ಲಿ ಬಹದ್ದೂರ್ ಸಿಂಗ್ ಪರಿಹಾರ ಎಂಬವರು ತಮ್ಮ ಕೋಟಿ ಬೆಲೆ ಬಾಳುವ ʼಆಡಿʼ ಕಾರಿನಲ್ಲಿ ಹೋಗುವಾಗ ಹೆಲ್ಮೆಟ್‌ ಧರಿಸುತ್ತಾರೆ…!
ಅವರು ಫಾರ್ಮುಲಾ 1 ಕಾರ್‌ ರೇಸ್‌ ಗೆ ಹೋಗುತ್ತಿಲ್ಲ. ಆದರೂ ಅವರು ಹಾಗೆ ಮಾಡಲು ಕಾರಣ ಮಾತ್ರ ವಿಚಿತ್ರವಾಗಿದೆ. ಯಾಕೆಂದರೆ ಅವರು ತಮ್ಮ ಆಡಿ ಕಾರನ್ನು ಚಲಾಯಿಸುತ್ತಿದ್ದರೂ ಕಳೆದ ಬಾರಿ ಅವರು ಹೆಲ್ಮೆಟ್‌ ಧರಿಸದೇ ಕಾರು ಓಡಿಸಿದ್ದಕ್ಕಾಗಿ ಅವರಿಗೆ ಝಾನ್ಸಿಯಲ್ಲಿ ಟ್ರಾಫಿಕ್ ಪೊಲೀಸರು ₹ 1,000 ದಂಡ ವಿಧಿಸಿದ್ದಾರೆ…!
ಎನ್‌ಡಿಟಿವಿ ವರದಿಯ ಪ್ರಕಾರ, ಝಾನ್ಸಿ ನಿವಾಸಿ ಬಹದ್ದೂರ್ ಸಿಂಗ್ ಪರಿಹಾರ ಅವರು ಇದಕ್ಕಾಗಿ ದಂಡದ ಚಲನ್ ಅನ್ನು ಸ್ವೀಕರಿಸಿದ್ದಾರೆ. ಟ್ರಕ್ಕರ್‌ಗಳ ಒಕ್ಕೂಟದ ಅಧ್ಯಕ್ಷರಾಗಿರುವ ಬಹದ್ದೂರ್ ಸಿಂಗ್ ಪರಿಹಾರ ಅವರು ಕಳೆದ ಮಾರ್ಚ್‌ನಲ್ಲಿ ದಂಡದ ಚಲನ್‌ ಸ್ವೀಕರಿಸಿದ್ದಾರೆ…!

ನಿಮ್ಮ ಕಾರಿಗೆ ದಂಡ ಹಾಕಲಾಗಿದೆ ಎಂದು ತಿಳಿಸುವ ಸಂದೇಶ ಅವರ ಮೊಬೈಲ್‌ಗೆ ಬಂದಿದೆ. ನಂತರ ಅವರು ಈ ಬಗ್ಗೆ ವಿವರಗಳನ್ನು ಪರಿಶೀಲಿಸಲು ಪರಿವಾಹನ್ ವೆಬ್‌ಸೈಟ್‌ ಗೆ ಹೋಗಿ ನೋಡಿದ್ದಾರೆ. ಅಲ್ಲಿ ಅವರಿಗೆ ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡದ ಚಲನ್ ನೀಡಲಾಗಿದೆ ಎಂದು ಗೊತ್ತಾಗಿದೆ. ಅವರು ಒಮ್ಮೆ ಕಣ್ಣು ಉಜ್ಜಿಕೊಂಡು ಮತ್ತೆ ನೋಡಿದ್ದಾರೆ. ಚಲನ್‌ನಲ್ಲಿರುವ ಫೋಟೋ ದ್ವಿಚಕ್ರ ವಾಹನವಾಗಿದ್ದರೆ, ವಾಹನದ ಕೆಟಗರಿಯನ್ನು ‘ಮೋಟಾರು ಕಾರು’ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ.
ಝಾನ್ಸಿಯ ನಂದು ಕಾಲೋನಿಯ ನಿವಾಸಿಯಾದ ಬಹದ್ದೂರ್ ಸಿಂಗ್ ಪರಿಹಾರ ಅವರು ತಕ್ಷಣವೇ ಈ ಬಗ್ಗೆ ಟ್ರಾಫಿಕ್ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದರು, ಆದರೆ ಪ್ರಸ್ತುತ ಲೋಕಸಭೆ ಚುನಾವಣೆ ಇರುವುದರಿಂದ ಅದು ಮುಗಿದ ನಂತರ ಈ ವಿಷಯವನ್ನು ಪರಿಶೀಲಿಸುವುದಾಗಿ ಅವರಿಗೆ ತಿಳಿಸಲಾಯಿತು. ಉತ್ತರ ಪ್ರದೇಶದಲ್ಲಿ ಎಲ್ಲಾ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿರುವುದರಿಂದ, ಅದು ಜೂನ್ 1 ರ ವರೆಗೂ ವಿವಿಧ ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತ್ತು ಮತ ಎಣಿಕೆ ಜೂನ್ 4 ರಂದು ನಡೆಯಲಿದೆ, ಅಂದರೆ ಅವರು ಅದರ ನಂತರ ಕನಿಷ್ಠ ಮೂರ್ನಾಲ್ಕು ದಿನ ಕಾಯಬೇಕಾಗುತ್ತದೆ.

ಹೀಗಾಗಿ ಹೆಚ್ಚಿನ ದಂಡದಿಂದ ಪಾರಾಗಲು ಅಲ್ಲಿಯವರೆಗೆ, ಕಾರ್‌ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಲು ನಿರ್ಧರಿಸಿರುವುದಾಗಿ ಪರಿಹಾರ್ ಹೇಳಿದರು.
“ಹೆಲ್ಮೆಟ್ ಧರಿಸದೆ ಕಾರು ಚಲಾಯಿಸಿದ್ದಕ್ಕೆ ನನಗೆ ದಂಡ ಹಾಕಲಾಗಿದೆ, ನಾನು ಹೆಲ್ಮೆಟ್ ಧರಿಸಿ ಕಾರು ಓಡಿಸಬೇಕೇ… ಏನು ಮಾಡಲಿ, ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸಬೇಕಾಗಿದೆ. ಯಾಕೆಂದರೆ ಚುನಾವಣೆಯ ನಂತರ ಸಮಸ್ಯೆಯನ್ನು ಪರಿಹರಿಸುವುದಾಗಿ ಸಂಚಾರಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪರಿಹಾರ ಹೇಳಿದ್ದಾರೆ.
ತಪ್ಪು ಚಲನ್ ನೀಡಿದ್ದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ, ಮತ್ತಷ್ಟು ದಂಡವನ್ನು ತಪ್ಪಿಸಿಕೊಳ್ಳಲು ಪರಿಹಾರ ಅವರು ತನ್ನ ಕಾರನ್ನು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೆಲ್ಮೆಟ್ ಧರಿಸಿ ಕಾರನ್ನು ಓಡಿಸುವುದರಿಂದ ಬಹದ್ದೂರ್ ಅವರು ರಸ್ತೆಗಳು ಮತ್ತು ಇತರ ಸ್ಥಳಗಳಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.

ಪ್ರಮುಖ ಸುದ್ದಿ :-   14 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ದಿನಾಂಕ ಬದಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement