ಪ್ರಧಾನಿಯವರು ಪತ್ರಿಕಾಗೋಷ್ಠಿಗಳನ್ನು ಏಕೆ ನಡೆಸುವುದಿಲ್ಲ? : ಹೆಚ್ಚು ಸಲ ಕೇಳಿದ ಪ್ರಶ್ನೆಗೆ ಕೊನೆಗೂ ಉತ್ತರಿಸಿದ ನರೇಂದ್ರ ಮೋದಿ

ನವದೆಹಲಿ:  ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಮಯಕ್ಕೆ ಹೋಲಿಸಿದರೆ ಈಗ ಏಕೆ ಪತ್ರಿಕಾಗೋಷ್ಠಿಗಳನ್ನು ನಡೆಸುವುದಿಲ್ಲ ಮತ್ತು ಏಕೆ ಪತ್ರಿಕಾ ಸಂದರ್ಶನಗಳನ್ನು ನೀಡುವುದಿಲ್ಲ ಎಂದು ಕೇಳಿದ ಪ್ರಶ್ನೆಗೆ ಪ್ರಧಾನಿ ಮೋದಿFront-lead  ಉತ್ತರಿಸಿದ್ದಾರೆ.
ಮಾಧ್ಯಮಗಳ ಸ್ವರೂಪ ಬದಲಾಗಿದೆ ಮತ್ತು ಮಾಧ್ಯಮಗಳು ಈಗ ತಟಸ್ಥ ನಿಲುವಿನ ಸಂಸ್ಥೆಯಾಗಿ ಉಳಿದಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಅವರು ತಾವು ಏಕೆ ಪತ್ರಿಕಾಗೋಷ್ಠಿಯನ್ನು ನಡೆಸುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.
ಆಜ್ ತಕ್ ಹಿಂದಿ ಸುದ್ದಿ ವಾಹಿನಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು ಪತ್ರಿಕಾ ಸಂದರ್ಶನಗಳನ್ನು ತಾನು ಎಂದಿಗೂ ನಿರಾಕರಿಸಲಿಲ್ಲ ಎಂದು ಹೇಳಿದ್ದಾರೆ. ಇಂದು ಪತ್ರಕರ್ತರು ತಮ್ಮದೇ ಆದ ಆದ್ಯತೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಮಾಧ್ಯಮವು ನಿಷ್ಪಕ್ಷವಾದ ಘಟಕವಾಗಿ ಉಳಿದಿಲ್ಲ, ಅದು ವಸ್ತುನಿಷ್ಠತೆಯನ್ನು ಕಳೆದುಕೊಂಡಿದೆ ಎಂಬಂತೆ ಕಾಣುತ್ತಿದೆ. ಆ ಹಾದಿಯಲ್ಲಿ ಹೋಗಲು ನಾನು ಬಯಸುವುದಿಲ್ಲ ಎಂದು ಮೋದಿ ಹೇಳಿದ್ದಾರೆ.”ನಾನು ಜವಾಬ್ದಾನಾಗಿರುವುದು ಸಂಸತ್ತಿಗೆ. ಸಂಸತ್ತಿಗೆ ನಾನು ಉತ್ತರಿಸಬೇಕು, ಅಲ್ಲಿ ನಾನು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧ ಎಂದು ಒತ್ತಿ ಹೇಳಿದರು.

ಈ ಮೊದಲು, ಮಾಧ್ಯಮಗಳು ಮುಖರಹಿತವಾಗಿದ್ದವು … ಮಾಧ್ಯಮದಲ್ಲಿ ಯಾರು ಬರೆಯುತ್ತಾರೆ ? ಅದರ ಸಿದ್ಧಾಂತ ಏನು? ಎಂಬ ಬಗ್ಗೆ ಮೊದಲು ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ, ಬದಲಾಗಿದೆ. ಈಗ ಮಾಧ್ಯಮಗಳು ಮೊದಲಿನಂತೆ ಪತ್ರಿಕಾ ಧರ್ಮವನ್ನು ಪಾಲಿಸುತ್ತಿಲ್ಲ. ಪ್ರತಿಯೊಬ್ಬ ಪತ್ರಕರ್ತನೂ ತನ್ನದೇ ದೃಷ್ಟಿಕೋನವನ್ನ ಪತ್ರಿಕಾ ವೃತ್ತಿಯಲ್ಲಿ ಬೆರೆಸುತ್ತಾನೆ. ಆತನ ವಿಚಾರಗಳೇ ವರದಿಯಲ್ಲಿ ಹೆಚ್ಚಾಗಿ ಕಂಡುಬರುತ್ತವೆಯೇ ಹೊರತು ಬೇರೆಯವರ ವಿಚಾರಗಳಿಗೆ ಪ್ರಾಮುಖ್ಯತೆ ಸಿಗುತ್ತಿಲ್ಲ. ನಿಷ್ಪಕ್ಷಪಾತ ಅಥವಾ ತಟಸ್ಥ ಪತ್ರಿಕೋದ್ಯಮವನ್ನು ಇಂದು ನಿರೀಕ್ಷೆ ಮಾಡುವಂತಿಲ್ಲ. ಹೀಗಾಗಿ ನಾನು ಸುದ್ದಿಗೋಷ್ಠಿಗಳಿಂದ ದೂರ ಉಳಿದಿದ್ದೇನೆ ಎಂದು ಅವರು ಹೇಳಿದ್ದಾರೆ.
ಮಾಧ್ಯಮ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕಿಂತ ಹೆಚ್ಚಾಗಿ ಜನರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವ ಉಪಕ್ರಮಗಳಲ್ಲಿ ಕೆಲಸ ಮಾಡಲು ಸಮಯ ನೀಡುವುದಕ್ಕೆ ಆದ್ಯತೆ ನೀಡುವುದಾಗಿ ಹೇಳಿದರು. ನಾನು ಪ್ರಧಾನಿಯಾದ ನಂತರ ಪ್ರಧಾನಿಯ ಕಾರ್ಯವೈಖರಿಯಲ್ಲಿ ಹೊಸತನ ತಂದಿರುವುದು ಕೂಡ ನನ್ನನ್ನು ಸುದ್ದಿಗೋಷ್ಠಿಗಳಿಂದ ವಿಮುಖನನ್ನಾಗಿ ಮಾಡಿದೆ ಎಂದರು.

ಪ್ರಮುಖ ಸುದ್ದಿ :-   ಬೆಳಗಾವಿ | ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ ; ಮೇಖಳಿಯ ಲೋಕೇಶ್ವರ ಸ್ವಾಮೀಜಿ ಬಂಧನ

ನಾನು ಪ್ರಧಾನಿಯಾಗಿ ಕೇವಲ ಉದ್ಘಾಟನೆ ಕಾರ್ಯಕ್ರಮಗಳನ್ನು ಪ್ರವಾಸಗಳನ್ನು ಮಾಡಿಕೊಂಡು ಇರಬಹುದಾಗಿತ್ತು. ಆದರೆ, ನಾನು ಹಾಗೆ ಮಾಡುತ್ತಿಲ್ಲ. ಈ ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆ, ಜನಪರ ಯೋಜನೆಗಳ ಸಮರ್ಪಕ ಅನುಷ್ಠಾನ ನನ್ನ ಜವಾಬ್ದಾರಿ. ಈ ದೇಶದ ಮೂಲೆಯಲ್ಲಿರುವ ರಾಜ್ಯದಲ್ಲಿ ಚಿಕ್ಕ ಹಳ್ಳಿಯಲ್ಲಿ ಜಾರಿಗೊಂಡಿರುವ ಯೋಜನೆಗಳಿಗೂ ನಾನು ಹೋಗುತ್ತೇನೆ. ನನಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುವುದಕ್ಕಿಂತ ಈ ತರಹದ ಕೆಲಸ ಮಾಡುವುದೇ ಹೆಚ್ಚು ಇಷ್ಟವಾಗುತ್ತದೆ ಎಂದರು.

“ನಾನು ಕಷ್ಟಪಟ್ಟು ಕೆಲಸ ಮಾಡಬೇಕು. ಬಡವರ ಮನೆಗೆ ಹೋಗಬೇಕು. ವಿಜ್ಞಾನ ಭವನದಲ್ಲಿ ರಿಬ್ಬನ್ ಕಟ್ ಮಾಡಿ ಫೋಟೋ ತೆಗೆಯಬಹುದು. ಆದರೆ ನಾನು ಹಾಗೆ ಮಾಡುವುದಿಲ್ಲ. ನಾನು ಜಾರ್ಖಂಡ್‌ನ ಸಣ್ಣ ಹಳ್ಳಿಗೂ ಯೋಜನೆ ಜಾರಿಗಾಗಿ ಹೋಗುತ್ತೇನೆ. ನಾನು ನನ್ನದೇ ಆದ ಕೆಲಸದ ಸಂಸ್ಕೃತಿಯನ್ನು ತಂದಿದ್ದೇನೆ, ಆ ಸಂಸ್ಕೃತಿ ಸರಿಯಾಗಿದೆ ಎಂದು ಭಾವಿಸಿದರೆ, ಮಾಧ್ಯಮಗಳು ಅದನ್ನು ಸರಿಯಾಗಿ ಪ್ರಸ್ತುತಪಡಿಸಬೇಕು, ಇಲ್ಲದಿದ್ದರೆ ಸರಿಯಾಗಿಲ್ಲ ಎಂದು ಹೇಳಬೇಕು ಎಂದು ಮೋದಿ ಪ್ರತಿಪಾದಿಸಿದರು.
“ಮೊದಲಿನ ಸಂವಹನವು ಏಖ ಮಾರ್ಗದ್ದಾಗಿತ್ತು. ಆದರೆ ಈಗ ಸಂವಹನವು ಎರಡು ಮಾರ್ಗದ್ದಾಗಿದೆ. ಈಗ ಸಂವಹನದ ವಿಕಸನವು ಸಾಂಪ್ರದಾಯಿಕ ಮಾಧ್ಯಮಗಳನ್ನು ಮೀರಿ ಸಾರ್ವಜನಿಕರೊಂದಿಗೆ ನೇರವಾಗಿ ಸಂವಹನ ನಡೆಸಲು ನಾಯಕರಿಗೆ ಅನುವು ಮಾಡಿಕೊಡುತ್ತದೆ. ಇಂದು ಸಾರ್ವಜನಿಕರೂ‌ ಧ್ವನಿ ಎತ್ತಬಹುದಾಗಿದೆ. ಇದಕ್ಕೆ ಉತ್ತರಿಸಬೇಕಾದ ವ್ಯಕ್ತಿ ಕೂಡ ಉತ್ತರಿಸಬಹುದು ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿಗೆ ಪೂರ್ಣ ಬಹುಮತ ; ಪೀಪಲ್ಸ್ ಪಲ್ಸ್ ಸಮೀಕ್ಷೆಯಲ್ಲಿ ಬಹಿರಂಗ....

 

5 / 5. 5

ಶೇರ್ ಮಾಡಿ :

  1. Sms

    ಉತ್ತರ ತಮ್ಮ ಬಳಿ ಇಲ್ಲ ಹಾಗಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡೋ ಶಕ್ತಿ ಬಲವಂತ ಕರುಣಿಸಲಿ ತಮಗೆ

ನಿಮ್ಮ ಕಾಮೆಂಟ್ ಬರೆಯಿರಿ

advertisement