ಜಾತ್ರಾ ಮಹೋತ್ಸವದ ವೇಳೆ ರಥದ ಚಕ್ರದಡಿ ಸಿಲುಕಿ ಇಬ್ಬರು ಸಾವು

ಗದಗ: ಜಿಲ್ಲೆಯ ರೋಣದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾರೀ ಅವಘಡ ಸಂಭವಿಸಿದ್ದು, ರಥೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ.
ರೋಣ ಪಟ್ಟಣದ ರಾಜ ಬೀದಿಯಲ್ಲಿ ರಥೋತ್ಸವ ಸಾಗುತ್ತಿದ್ದ ವೇಳೆ ನೂಕು ನುಗ್ಗಲು ಉಂಟಾಗಿ ಏಕಾ ಏಕಿ ಚಕ್ರದಡಿ ಸಿಲುಕಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಯದೇ ಭಕ್ತರು ರಥವನ್ನು ಎಳೆದಿದ್ದಾರೆ. ಹಾಗಾಗಿ ಇಬ್ಬರು ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬ ಭಕ್ತನ ಬೆನ್ನಿನ ಮೇಲೆ ರಥ ಹರಿದರೆ, ಮತ್ತೊಬ್ಬನ ತಲೆ ಮೇಲೆ ರಥ ಹರಿದಿದ್ದು, ಮುಖ ಅಪ್ಪಚ್ಚಿಯಾಗಿ ಗುರುತು ಸಿಗದಂತಾಗಿದೆ.ಮೃತರನ್ನು ರೋಣದ ಕೆವಿಜಿ ಬ್ಯಾಂಕ್‌ನಲ್ಲಿ ಪಿಗ್ಮಿ ಕಲೆಕ್ಟರ್ ಆಗಿದ್ದ ಮಲ್ಲನಗೌಡ ಲಿಂಗನಗೌಡರ (52) ಎಂದು ಗುರುತಿಸಲಾಗಿದ್ದು, ಚಕ್ರದ ಅಡಿಗೆ ಮುಖ ಸಿಲುಕಿ ನಜ್ಜುಗುಜ್ಜಾಗಿದ್ದರಿಂದ ಮತ್ತೊಬ್ಬನ ಗುರುತು ಪತ್ತೆಯಾಗಬೇಕಿದೆ.
ಶನಿವಾರ ಸಂಜೆ ರಥೋತ್ಸವ ಆರಂಭವಾದಾಗ ಭಕ್ತರು ರಥದ ಮೇಲೆ ಒಣಗಿದ ಖರ್ಜೂರ, ಬಾಳೆಹಣ್ಣು ಎಸೆದರು. ರಥದ ಮೇಲೆ ಎಸೆದ ನಂತರ ಅವುಗಳನ್ನು ತೆಗೆದುಕೊಳ್ಳಲು ನೂಕು-ನುಗ್ಗಲು ಉಂಟಾಗಿದ್ದರಿಂದ ಮೂವರು ರಥದ ಚಕ್ರಕ್ಕೆ ಸಿಲುಕಿದ್ದಾರೆ. ಒಬ್ಬನನ್ನು ತಕ್ಷಣವೇ ಸ್ಥಳದಲ್ಲಿದ್ದವರು ಎಳೆದು ರಕ್ಷಿಸಿದ್ದಾರೆ. ಆದರೆ, ಇಬ್ಬರು ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಈ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಅತ್ಯಾಚಾರ ಪ್ರಕರಣ: ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಕೋರುವಂತೆ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement