ಬೆಳಗಾವಿ : ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಶ್ರೀ ರಾಮರಾಜ್ಯ ಸರ್ವಸಿದ್ದಿ ಶಕ್ತಿ ಪೀಠದ ಪೀಠಾಧಿಪತಿ ಶ್ರೀ ಲೋಕನಾಥ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಅರಳಿದ ಗಿಡದಲ್ಲಿ ಮೊಗ್ಗಿನ ಸಂಖ್ಯೆಗಳು ಮತ್ತಷ್ಟು ಹೆಚ್ಚಾಗಲಿವೆ ಎಂದು ಭವಿಷ್ಯ ನುಡಿದಿದ್ದು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಳೆದ ಬಾರಿಗಿಂತ 10 ಸ್ಥಾನಗಳನ್ನು ಹೆಚ್ಚಾಗಿ ಗೆಲ್ಲಲಿದೆ ಎಂದು ಅವರು ಹೇಳಿದ್ದಾರೆ ಎಂದು ಅರ್ಥೈಸಲಾಗಿದೆ. ಕರ್ನಾಟಕ ರಾಜಕಾರಣದ ಬಗ್ಗೆಯೂ ಭವಿಷ್ಯ ನುಡಿದಿರುವ ಅವರು, ದೊರೆಯ ಸಿಂಹಾಸನಕ್ಕೆ ತೊಂದರೆ ಉಂಟಾಗಬಹುದು ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಗಂಡಾಂತರ ಎದುರಾಗಬಹುದು ಎಂಬ ಮುನ್ಸೂಚನೆ ರವಾನಿಸಿದ್ದಾರೆ.
ಶ್ರೀ ರಾಮರಾಜ್ಯ ಸರ್ವಸಿದ್ದಿ ಶಕ್ತಿ ಪೀಠವು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಮೇಖಳಿ ಗ್ರಾಮಲ್ಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ