ಗರ್ಭದಲ್ಲಿರುವ ಮಗು ಗಂಡೋ ಹೆಣ್ಣೋ ತಿಳಿದುಕೊಳ್ಳಲು ಹೆಂಡತಿಯ ಹೊಟ್ಟೆಯನ್ನೇ ಕತ್ತರಿಸಿದ ಗಂಡನಿಗೆ ಜೀವಾವಧಿ ಶಿಕ್ಷೆ

ಉತ್ತರ ಪ್ರದೇಶದ ಬದೌನ್‌ನಲ್ಲಿ ತನ್ನ ಗರ್ಭಿಣಿ ಹೆಂಡತಿಗೆ ಗಂಡು ಅಥವಾ ಹೆಣ್ಣು ಮಗುವಿಗೆ ಜನ್ಮ ನೀಡಲಿದ್ದಾಳೆಯೇ ಎಂದು ಪರೀಕ್ಷಿಸಲು ಕುಡಗೋಲು ಬಳಸಿ ಹೊಟ್ಟೆಯನ್ನು ಕತ್ತರಿಸಿದ ವ್ಯಕ್ತಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಬದೌನ್‌ನ ಸಿವಿಲ್ ಲೈನ್ಸ್‌ನ ನಿವಾಸಿ ಪನ್ನಾ ಲಾಲ ಎಂಬಾತ ಸೆಪ್ಟೆಂಬರ್ 2020 ರಲ್ಲಿ ತನ್ನ ಪತ್ನಿ ಅನಿತಾ ಮೇಲೆ ಹಲ್ಲೆ ನಡೆಸಿದ್ದ.
ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿದ್ದು, ಐದು ಹೆಣ್ಣು ಮಕ್ಕಳಿದ್ದರು. ಆದರೆ, ಪನ್ನಾ ಲಾಲ್ ಅವರಿಗೆ ಗಂಡು ಮಗು ಬೇಕೆಂದು ಅವರು ಪದೇಪದೇ ಜಗಳವಾಡುತ್ತಿದ್ದರು. ದಂಪತಿ ಜಗಳದ ಬಗ್ಗೆ ಅನಿತಾ ಕುಟುಂಬಕ್ಕೆ ತಿಳಿದಿತ್ತು ಮತ್ತು ಜಗಳವನ್ನು ನಿಲ್ಲಿಸಲು ಪನ್ನಾ ಲಾಲ್‌ಗೆ ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ ಆತ ಗಂಡು ಮಗು ಬೇಕೆಂದು ಅನಿತಾಗೆ ವಿಚ್ಛೇದನ ನೀಡಿ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗುವುದಾಗಿ ಬೆದರಿಕೆ ಹಾಕಿದ್ದ.

ಘಟನೆ ನಡೆದ ದಿನದಂದು ದಂಪತಿ ಗರ್ಭದಲ್ಲಿರುವ ಮಗುವಿನ ಲಿಂಗದ ಬಗ್ಗೆ ಮತ್ತೆ ಜಗಳವಾಡಿದ್ದಾರೆ. ಜಗಳದ ವೇಳೆ ಕುಪಿತಗೊಂಡ ಪನ್ನಾ ಲಾಲ್ ಪತ್ನಿ ಅನಿತಾ ಗರ್ಭದಲ್ಲಿ ಗಂಡು ಅಥವಾ ಹೆಣ್ಣು ಮಗುವಿದೆಯೇ ಎಂದು ಪರೀಕ್ಷಿಸಲು ಅನಿತಾ ಅವರ ಹೊಟ್ಟೆಯನ್ನು ಕತ್ತರಿಸುವುದಾಗಿ ಕುಡುಗೋಲಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ ಬಳಿಕ ಆಕೆ ಆತನಿಂದ ಓಡಿಹೋಗಲು ಯತ್ನಿಸಿದ್ದಾಳೆ. ಆದರೂ ಬಿಡದೆ ಆತ ಅವಳನ್ನು ಹಿಡಿದು ಕುಡುಗೋಲಿನಿಂದ ಪತ್ನಿಯ ಹೊಟ್ಟೆಯನ್ನು ಕತ್ತರಿಸಿದ್ದಾನೆ. ಆಗೆ ಅವಳು ಎಂಟು ತಿಂಗಳ ಗರ್ಭಿಣಿಯಾಗಿದ್ದಳು. ಕುಡುಗೋಲಿನಿಂದ ಹೊಟ್ಟೆ ಕತ್ತರಿಸಿದ ನಂತರ ಆಕೆಯ ಕರುಳು ಹೊಟ್ಟೆಯಿಂದ ನೇತಾಡುತ್ತಿತ್ತು ಎಂದು ಅನಿತಾ ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಮುಖ ಸುದ್ದಿ :-   ಹ್ಯಾರಿಯರ್ ಕಾರು, ನಕಲಿ ಎನ್‌ಎಸ್‌ಜಿ ಕಮಾಂಡೋಗಳು ! ಸೇನೆಯ ಬ್ರಿಗೇಡಿಯರ್ ಸೋಗಿನಲ್ಲಿ ಓಡಾಡುತ್ತಿದ್ದ ಯುವಕ ಬಲೆಗೆ ಬಿದ್ದಿದ್ದೇ ರೋಚಕ

ಅವಳು ಬೀದಿಗೆ ಓಡಿಹೋಗಿ ಕಿರುಚಿದ್ದಾಳೆ. ಹತ್ತಿರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅವಳ ಸಹೋದರ ಹಾಗೂ ಇತರರು ಅವಳ ಕಿರುಚಾಟವನ್ನು ಕೇಳಿ ಓಡಿ ಬಂದಿದ್ದಾರೆ. ಅಷ್ಟರಲ್ಲಿ ಪನ್ನಾ ಲಾಲ್ ಸ್ಥಳದಿಂದ ಪರಾರಿಯಾಗಿದ್ದಾನೆ.
ತಕ್ಷಣವೇ ಅನಿತಾಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆಕೆ ಬದುಕುಳಿದಳು, ಆದರೆ ಆಕೆಯ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ. ‌ ಅದು ಗಂಡು ಮಗುವಾಗಿತ್ತು.
ನಂತರ ಪನ್ನಾಲಾಲ ತನ್ನ ಪತ್ನಿ ಹೊಟ್ಟೆ ಕತ್ತರಿಸಿದ್ದಕ್ಕೆ ಕಥೆ ಕಟ್ಟಿದ್ದ. ಅನಿತಾ ಹಾಗೂ ಸಹೋದರರಿಗೆ ಆಸ್ತಿ ಜಗಳವಿದ್ದ ಕಾರಣ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ತಾನೇ ಹಾಗೆ ಮಾಡಿಕೊಂಡಿದ್ದಾಳೆ ಎಂದು ಪನ್ನಾ ಲಾಲ ನ್ಯಾಯಾಲಯದಲ್ಲಿ ವಾದಿಸಿದ್ದ. ಆದರೆ ನ್ಯಾಯಾಲಯ ಆತನ ವಾದವನ್ನು ಒಪ್ಪದೆ ಆತನು ಮಾಡಿದ ಕೃತ್ಯಕ್ಕೆ ಜೀವಾವಧಿ ಶಿಕ್ಷೆ ವಿಧಿಸಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement