ಶಿರಸಿ: ಟಿ ಎಸ್‌ ಎಸ್‌ ಸಂಸ್ಥೆ ಆಡಳಿತ ಮಂಡಳಿ ರದ್ದು; ವಿಶೇಷ ಆಡಳಿತಾಧಿಕಾರಿ ನೇಮಕ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಟಿ ಎಸ್ ಎಸ್ ಸಹಕಾರಿ ಸಂಸ್ಥೆಗೆ ಸಹಕಾರ ಇಲಾಖೆಯು ವಿಶೇಷ ಆಡಳಿತಾಧಿಕಾರಿ ನೇಮಕ ಮಾಡಿದೆ. ಹಾಗೂ ಸಂಸ್ಥೆಯ ಹಾಲಿ ಆಡಳಿತ ಮಂಡಳಿಯನ್ನು ರದ್ದುಪಡಿಸಲಾಗಿದೆ.
ಕಳೆದ ಬಾರಿ ಈ ಆಡಳಿತ ಮಂಡಳಿಯ ಚುನಾವಣೆಯ ಸಂದರ್ಭದಲ್ಲಿ ಲೋಕದೋಷಗಳಾಗಿವೆ ಎಂದು ಸಂಸ್ಥೆಯ ಇಬ್ಬರು ಸದಸ್ಯರು ಸಹಕಾರ ಸಂಘಗಳ ಉಪನಿಬಂಧಕ ಕೋರ್ಟಿನಲ್ಲಿ ದೂರು ದಾಖಲಿಸಿದ್ದರು.

ಉಪನಿಬಂಧಕರ ಕೋರ್ಟ್ ಈ ದೂರಿನ ವಿಚಾರಣೆ ನಡೆಸಿದ ನಂತರ ಟಿಎಸ್‌ಎಸ್‌ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ತೀರ್ಪು ನೀಡಿದೆ. ಹಾಗೂ ಹಾಲಿ ಆಡಳಿತ ಮಂಡಳಿಯ ಅಧಿಕಾರವನ್ನು ಮೊಟಕುಗೊಳಿಸಿ ಮುಂದಿನ ಆದೇಶದ ವರೆಗೆ ವಿಶೇಷ ಆಡಳಿತಾಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಹಾಲಿ ಆಡಳಿತ ಮಂಡಳಿಯನ್ನು ರದ್ದುಪಡಿಸಿ ಸಂಸ್ಥೆಗೆ ಆಡಳಿತ ಅಧಿಕಾರಿ ನೇಮಕ ಮಾಡಿ ಆದೇಶಿಸಿದೆ. ಇನ್ನು ಆರು ತಿಂಗಳ ಒಳಗೆ ಹೊಸದಾಗಿ ಸಂಸ್ಥೆ ಆಡಳಿತ ಮಂಡಳಿ ಗೆ ಹೊಸದಾಗಿ ಚುನಾವಣೆ ನಡೆಸಬೇಕೆಂದು ಆಡಳಿತಾಧಿಕಾರಿ ಗೆ ಸೂಚಿಸಲಾಗಿದೆ.
ಕಾರವಾರದ ಸಹಕಾರಿ ಸಂಘಗಳ ಉಪನಿಬಂಧಕರ ಆದೇಶದಂತೆ ಶಿರಸಿಯ ಶಿಕ್ಷಣಾಧಿಕಾರಿ ಎಮ್.ಎಚ್.ನಾಯ್ಕ ಅವರು ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದು, ಅವರು ಶುಕ್ರವಾರ ಸಂಜೆ ಅಧಿಕಾರ ವಹಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಕನ್ನಡದ ಲೇಖಕಿ ಬಾನು ಮುಷ್ತಾಕ್‌ಗೆ ಪ್ರತಿಷ್ಠಿತ ಬೂಕರ್‌ ಪ್ರಶಸ್ತಿ ಘೋಷಣೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement