ಲೋಕಸಭೆ ಚುನಾವಣೆ 2024 : ಸಟ್ಟಾ ಬಜಾರ್ ಬೆಟ್ಟಿಂಗ್‌ ಭವಿಷ್ಯ ; ಸೀಟು ಗೆಲ್ಲುವ ಲೆಕ್ಕಾಚಾರದಲ್ಲಿ ಬಿಜೆಪಿ ಮುಂದೆ ; ಆದರೆ….

ನವದೆಹಲಿ : ದೇಶದ ಏಳನೇ ಹಂತದ ಲೋಕಸಭಾ ಚುನಾವಣೆಗಿಂತ ಮೊದಲು ದೇಶದ ಅನಧಿಕೃತ ಎಕ್ಸಿಟ್‌ ಪೋಲ್‌ ಎನಿಸಿಕೊಂಡಿರುವ ಸಟ್ಟಾ ಬಜಾರದಲ್ಲಿ ಹೊಸ ಲೆಕ್ಕಾಚಾರಗಳು ಹೊರಬಿದ್ದಿದೆ. ದೇಶದಲ್ಲಿ 6 ಹಂತದ ಮತದಾನ ಮುಕ್ತಾಯವಾಗಿದ್ದು, ಜೂನ್‌ 1ರಂದು ಏಳನೇ ಹಂತದ ಮತದಾನ ನಡೆಯಲಿದೆ. 6ನೇ ಹಂತದ ಚುನಾವಣೆ ಮುಗಿದ ಬಳಿಕ ಸಟ್ಟಾ ಬಜಾರ್‌ ಬಿಜೆಪಿ 290 ಸೀಟ್‌ ಗೆಲ್ಲಬಹುದು ಎಂದು ಅಂದಾಜು ಮಾಡಿದೆ. ಹಾಗೆಂದು ಕಾಂಗ್ರೆಸ್ ಪಕ್ಷದ ಗೆಲುವಿನ ಸಂಖ್ಯೆಯಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಗೆಲ್ಲುವ ಸಂಖ್ಯೆಯಲ್ಲಿ ಏರಿಕೆ ಕಾಣಬಹುದು ಎಂದು ಅದು ತಿಳಿಸಿದೆ.
3ನೇ ಹಂತದ ಚುನಾವಣೆಯ ಬಳಿಕ ಸಟ್ಟಾ ಬಜಾರ್‌ನಲ್ಲಿ ಬಿಜೆಪಿಯ ಈ ನಂಬರ್‌ಗಳು 270ಕ್ಕೆ ಕುಸಿದಿತ್ತು, ಕಾಂಗ್ರೆಸ್‌ನ ನಂಬರ್‌ಗಳು 70 ರಿಂ 80ಕ್ಕೆ ಏರಿದ್ದವು. ಆದರೆ, ಆರನೇ ಹಂತದ ಮತದಾನದ ಬಳಿಕ, ಬಿಜೆಪಿ 290 ಸೀಟ್‌ ಗೆಲ್ಲಬಹುದು ಎಂದು ಸಟ್ಟಾ ಬಜಾರ್‌ ಭವಿಷ್ಯ ನುಡಿದರೆ, ಎನ್‌ಡಿಎ 340 ರಿಂದ 350 ಸೀಟ್‌ ಗೆಲ್ಲಬಹುದು ಎನ್ನುವ ರೀತಿಯಲ್ಲಿ ಬೆಟ್ಟಿಂಗ್‌ ನಡೆದಿದೆ. ಕಾಂಗ್ರೆಸ್‌ 50 ರಿಂದ 51 ಸೀಟ್‌ ಗೆಲ್ಲಬಹುದು ಎಂದು ಅದು ತಿಳಿಸಿದೆ.

ಏಪ್ರಿಲ್ 19 ರಂದು ಪ್ರಾರಂಭವಾದ ಚುನಾವಣೆ ನಡೆಯುವುದಕ್ಕೆ ಮುಂಚಿತವಾಗಿ, ಫಲೋಡಿ ಸಟ್ಟಾ ಬಜಾರ್ ಬಿಜೆಪಿ 300 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿತ್ತು. ಮೊದಲ ಎರಡು ಹಂತದ ಚುನಾವಣೆಯ ನಂತರ ಬಿಜೆಪಿಯ ಅಂದಾಜು 290 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿತ್ತು. ಐದನೇ ಹಂತದ ಮತದಾನದ ನಂತರ ಸಟ್ಟಾ ಮಾರುಕಟ್ಟೆಯು ತನ್ನ ಅಂದಾಜನ್ನು ಮತ್ತೊಮ್ಮೆ ಪರಿಷ್ಕರಿಸಿ ಬಿಜೆಪಿ ಸುಮಾರು 300 ಸ್ಥಾನಗಳನ್ನು ಗೆಲ್ಲಬಹುದು ಭವಿಷ್ಯ ನುಡಿದಿತ್ತು.
ಈಗ ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನಕ್ಕಿಂತ ಮೊದಲು ಅದು ಪಕ್ಷಗಳು ಗೆಲ್ಲಬಹುದಾದ ಅಂದಾಜು ಸಂಖ್ಯೆಗಳನ್ನು ಮತ್ತೆ ಪರಿಷ್ಕರಿಸಿದ್ದು, ಫಲೋಡಿ ಸಟ್ಟಾ ಬಜಾರ್ ಬಿಜೆಪಿ 300 ಕ್ಕಿಂತ ಕಡಿಮೆ ಸ್ಥಾನ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ. ಇಂಡಿಯಾ ಮೈತ್ರಿಕೂಟವು 80-85 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ. ಗಮನಾರ್ಹವಾಗಿ, ಇದು ಈ ಬೆಟ್ಟಿಂಗ್ ಮಾರುಕಟ್ಟೆಯು ಇಂಡಿಯಾ ಮೈತ್ರಿಕೂಟಕ್ಕೆ ಇದುವರೆಗೆ ನೀಡಿದ ಅತ್ಯಧಿಕ ಸ್ಥಾನಗಳಾಗಿವೆ.

ಪ್ರಮುಖ ಸುದ್ದಿ :-   ಪಹಲ್ಗಾಮ್ ದಾಳಿ : ಭಯೋತ್ಪಾದಕ ಗುಂಪು ಲಷ್ಕರ್ ಅಂಗಸಂಸ್ಥೆ ಟಿಆರ್‌ಎಫ್ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪುರಾವೆ ಸಲ್ಲಿಸಲಿರುವ ಭಾರತ

ಮೇ 13 ರಂದು ಅದರ ಅಂದಾಜಿನಲ್ಲಿ, ಫಲೋಡಿ ಸಟ್ಟಾ ಬಜಾರ್ ಕಾಂಗ್ರೆಸ್‌ 40-42 ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿತ್ತು, ಇದು 2019 ರ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದ 52 ಸ್ಥಾನಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ ಮತ್ತು 2014 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಗೆದ್ದ 44 ಸ್ಥಾನಕ್ಕಿಂತ ಕಡಿಮೆಯಾಗಿದೆ.
ಫಲೋಡಿ ಸಟ್ಟಾ ಬಜಾರ್ ಅಂದಾಜಿನ ಪ್ರಕಾರ, ಉತ್ತರ ಪ್ರದೇಶದಲ್ಲಿ ಬಿಜೆಪಿ ರಾಜ್ಯದಲ್ಲಿ 55-65 ಸ್ಥಾನಗಳನ್ನು ಗೆಲ್ಲಬಹುದು – 2019 ರ ಚುನಾವಣೆಯಲ್ಲಿ ಅದರ 62 ಸ್ಥಾನಗಳನ್ನು ಮತ್ತು 2014 ರ ಚುನಾವಣೆಯಲ್ಲಿ 71 ಸ್ಥಾನಗಳನ್ನು ಗೆದ್ದಿತ್ತು.
ಮತ್ತೊಂದೆಡೆ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವು ರಾಜ್ಯದಲ್ಲಿ 15-25 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ, 2019 ರ ಚುನಾವಣೆಯಲ್ಲಿ ಯುಪಿ ಮಾಜಿ ಪ್ರತಿಸ್ಪರ್ಧಿಗಳಾದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ರಾಜ್ಯದಲ್ಲಿ ಬಿಜೆಪಿಯನ್ನು ಎದುರಿಸಲು ಕೈಜೋಡಿಸಿತ್ತು. ಆದರೆ ರಾಜ್ಯದಲ್ಲಿ 80 ಲೋಕಸಭಾ ಸ್ಥಾನಗಳ ಪೈಕಿ 15 ಸ್ಥಾನಗಳನ್ನು ಮಾತ್ರ ಗೆಲ್ಲಲು ಮೈತ್ರಿಕೂಟಕ್ಕೆ ಸಾಧ್ಯವಾಗಿತ್ತು.

ಮುಂಬೈ ಸಟ್ಟಾ ಬಜಾರ್ ಭವಿಷ್ಯ
ಫಲೋಡಿ ಸಟ್ಟಾ ಬಜಾರ್‌ನಂತೆ ಮುಂಬೈ ಸಟ್ಟಾ ಬಜಾರ್ ಕೂಡ ದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ಸಾಧಿಸುವ ಮುನ್ಸೂಚನೆ ನೀಡಿದೆ. ಮುಂಬೈ ಸಟ್ಟಾ ಬಜಾರ್ ಉತ್ತರ ಪ್ರದೇಶದಲ್ಲಿ ಬಿಜೆಪಿ 64-66 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ. ಒಟ್ಟಾರೆಯಾಗಿ, ಮುಂಬೈ ಸಟ್ಟಾ ಬಜಾರ್‌ ಬಿಜೆಪಿ 295-305 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಕಾಂಗ್ರೆಸ್ 55 ರಿಂದ 65 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಿದೆ.
ಮುಂಬೈ ಸಟ್ಟಾ ಬಜಾರ್ ಮಹಾರಾಷ್ಟ್ರದಲ್ಲಿ 48 ಲೋಕಸಭಾ ಸ್ಥಾನಗಳಲ್ಲಿ ಎನ್‌ಡಿಎ ಮೈತ್ರಿಕೂಟ 28 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಯಿದೆ ಎಂದು ನಿರೀಕ್ಷಿಸುತ್ತದೆ. ಗುಜರಾತ್ ನಲ್ಲಿ ಬಿಜೆಪಿ ಎಲ್ಲ 26 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ.
ಕಳೆದ ಬಾರಿ ರಾಜಸ್ಥಾನದ ಫಲೋಡಿ ಸಟ್ಟಾ ಬಜಾರ್‌, ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 137 ಸೀಟ್‌ ಗೆಲ್ಲಲಿದೆ ಎಂದು ಅಂದಾಜು ಮಾಡಿತ್ತು. ಕಾಂಗ್ರೆಸ್‌ ಪಕ್ಷ ಚುನಾವಣೆಯಲ್ಲಿ 136 ಸೀಟ್‌ಗಳಲ್ಲಿ ಗೆಲುವು ಕಂಡಿತ್ತು.

ಪ್ರಮುಖ ಸುದ್ದಿ :-   ವೀಡಿಯೊ...| ಬೀದಿ ನಾಯಿಯ ಮೇಲೆ ಚಿರತೆ ದಾಳಿ; ಸ್ನೇಹಿತನ ರಕ್ಷಣೆಗಾಗಿ ಚಿರತೆಯ ಮೇಲೆ ಪ್ರತಿದಾಳಿ ನಡೆಸಿ ಓಡಿಸಿದ ನಾಯಿಗಳ ಹಿಂಡು...!

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement