ಸಿಎಂ ಹಾಗೂ ನನ್ನ ವಿರುದ್ಧ ಕೇರಳದಲ್ಲಿ ಅಘೋರಿಗಳ ಮೂಲಕ ಶತ್ರು ಭೈರವಿ ಯಾಗ ಮಾಡಲಾಗ್ತಿದೆ : ಡಿಕೆ ಶಿವಕುಮಾರ ಹೊಸ ಬಾಂಬ್…!

ಬೆಂಗಳೂರು: ರಾಜ್ಯದ ರಾಜಕೀಯ ಮುಖಂಡರೊಬ್ಬರು ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗ ಮಾಡಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯಿಂದ ವಾಪಸ್​ ಆದ ಬಳಿಕ ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿ ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಮ್ಮ ಸರ್ಕಾರದ ವಿರುದ್ಧ ದೊಡ್ಡ ಪೂಜೆ ನಡೆಯುತ್ತಿದೆ. ಶತ್ರು ಭೈರವಿ ಯಾಗ ಮಾಡುವ ಮೂಲಕ ಪಂಚ ಬಲಿ ಕಡುತ್ತಿದ್ದಾರೆ. ಶತ್ರು ಸಂಹಾರಕ್ಕಾಗಿ ಮಾಡುತ್ತಿರುವ ಶತ್ರು ಭೈರವಿ ಯಾಗವಾಗಿದೆ. ಯಾಗದಲ್ಲಿ ಮೇಕೆ, ಹಂದಿ, ಕುರಿ ಬಲಿ ಕೊಟ್ಟಿದ್ದಾರೆ. ಇದನ್ನು ಯಾರು ಮಾಡಿಸಿದ್ದಾರೆ ಎಂಬ ಬಗ್ಗೆ ನಮಗೆ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.
ಈ ಯಾಗ ನಡೆಯುತ್ತಿದೆ. 21 ಮೇಕೆ, 3 ಎಮ್ಮೆ, 5 ಹಂದಿ, 21 ಕಪ್ಪು ಬಣ್ಣದ ಕುರಿ ಬಲಿ ಕೊಡುತ್ತಿದ್ದಾರೆ. ಅಘೋರಿಗಳ ಮೂಲಕ ಯಾಗ ಮಾಡುತ್ತಿದ್ದಾರೆ. ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಆಸು – ಪಾಸುಇದು ನಡೆಯುತ್ತಿದೆ. ನಮ್ಮ ಮೇಲೆ ಅವರು ಏನೇ ಪ್ರಯೋಗ ಮಾಡಿದರೂ, ನಮ್ಮ ನಂಬಿದ ಶಕ್ತಿ ನಮ್ಮನ್ನು ಕಾಪಾಡುತ್ತದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ವಿಜಯಪುರದಲ್ಲಿ ಪಾಕ್ ಪರ ಪೋಸ್ಟ್ ಮಾಡಿದ ವಿದ್ಯಾರ್ಥಿನಿ ; ದೂರಿನ ನಂತರ ಕ್ಷಮೆಯಾಚನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement