ವೀಡಿಯೊಗಳು…| ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್‌ ನಲ್ಲಿ `ಟ್ರಾಫಿಕ್ ಜಾಮ್’…!

ವಿಶ್ವದ ಅತಿ ಎತ್ತರದ ಪರ್ವತವಾದವ ‘ಮೌಂಟ್ ಎವರೆಸ್ಟ್’ (Mount Everest). ಇದು ಸಮುದ್ರ ಮಟ್ಟದಿಂದ ಸುಮಾರು ಸುಮಾರು 29,000 ಅಡಿ ಎತ್ತರವಿದೆ. ಈ ಪರ್ವತವು ಇದೀಗ ಪರ್ವತಾರೋಹಿಗಳ ದಟ್ಟಣೆಯಿಂದ ಸುದ್ದಿಯಲ್ಲಿದೆ. ಮೌಂಟ್‌ ಎವರೆಸ್ಟ್‌ ಪರ್ವತ ಪ್ರದೇಶದ ಅತ್ಯಂತ ಕಡಿದಾದದ ಜಾಗದಲ್ಲಿಯೂ ಕಾಲಿಡಲು ಆಗದಷ್ಟು ‘ಟ್ರಾಫಿಕ್ ಜಾಮ್’ ಆಗಿದೆ. ಈ ಕುರಿತು ವೀಡಿಯೊ ಭಾರೀ ವೈರಲ್ ಆಗಿದ್ದು, ಇದು ಪರ್ವತಾರೋಹಿಗಳು ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ.
ಮೌಂಟ್ ಎವರೆಸ್ಟ್‌ ಪರ್ವತ ಏರಲು ಹೋಗಿ ಕೆಲವು ಸಾವುಗಳಾದರೂ ಸಹಿತ ಈ ಪರ್ವತದ ಏರುವ ಕ್ರೇಜ್ ಕಡಿಮೆಯಾಗಿಲ್ಲ. ಇಲ್ಲಿ ಪರ್ವತಾರೋಹಿಗಳಿಂದ ‘ಟ್ರಾಫಿಕ್ ಜಾಮ್’ ಆಗಿರುವ ವಿಡಿಯೋ ವೈರಲ್ ಹರಿದಾಡುತ್ತಿದೆ. ಇಬ್ಬರು ಈ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಸಾವಿನ ಭಯ ಎದುರಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮೌಂಟ್ ಎವರೆಸ್ಟ್ ಶಿಖರದಲ್ಲಿ ಪರ್ವತಾರೋಹಿಗಳ ಉದ್ದನೆಯ ಸರತಿ ಸಾಲುಗಳನ್ನು ಕಾಣಬಹುದು. ಈ ಶಿಖರ ಏರುವಾಗ ಸಂಚಾರ ದಟ್ಟಣೆಯಾಗಿ ಪ್ರರ್ವತಾರೋಹಿಗಳು ಸಿಕ್ಕಿಹಾಕಿಕೊಂಡ ಘಟನೆಯೂ ವರದಿಯಾಗಿದೆ. ಇದರಲ್ಲಿ ಬ್ರಿಟಿಷ್ ಆರೋಹಿ ಡೇನಿಯಲ್ ಪ್ಯಾಟರ್ಸನ್ ಮತ್ತು ಅವರ ನೇಪಾಳಿ ಶೆರ್ಪಾ ಪಾಸ್ಟೆಂಜಿ ಎಂಬುವವರು ಪವರ್ತದಿಂದ ಇಳಿಯುವಾಗ ತೊಂದರೆಗೆ ಸಿಲುಕಿದ್ದಾರೆ. ಇಬ್ಬರು ಶಿಖರದಿಂದ ಕೆಳಗೆ ಇಳಿಯುವಾಗ ಮಂಜುಗಡ್ಡೆಯಲ್ಲಿ ಸಿಲುಕಿದ್ದಾರೆ. ಅವರ ಹಿಂದೆಯೇ ಹತ್ತಾರು ಮಂದಿ ಸಾಲುಗಟ್ಟಿ ನಿಂತಿರುವುದು ಕಾಣಿಸುತ್ತದೆ.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

ಎತ್ತರದ ಪರ್ವತದಲ್ಲಿ ‘ಟ್ರಾಫಿಕ್ ಜಾಮ್’
ಈ ವೀಡಿಯೋ ವೈರಲ್‌ ಆದ ನಂತರ ಸಾಮಾಜಿಕ ಜಾಲತಾಣ ಬಳಕೆದಾರರು, ವಿಶ್ವದ ಅತ್ಯಂತ ಎತ್ತರದ ಪರ್ವತದಲ್ಲಿ ಪರ್ವತಾರೋಹಿಗಳ ಸರಣಿ ಸಾಲನ್ನು ‘ಟ್ರಾಫಿಕ್ ಜಾಮ್’ ಎಂದು ಕರೆದಿದ್ದಾರೆ. ಅತೀ ಕಠಿಣ ಹಾದಿಯನ್ನು ಏರಲು ಇಷ್ಟೊಂದು ದಟ್ಟಣೆಗೆ ಹಲವಾರು ಪರ್ವತಾರೋಹಿಗಳು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಪರಿಸರವಾದಿಗಳು ಮೌಂಟ್ ಎವರೆಸ್ಟ್‌ನಲ್ಲಿ ಅತ್ಯಂತ ಕಡಿದಾದ ದುರ್ಘಮ ಹಾದಿಯಲ್ಲಿ ಪರ್ವತಾರೋಹಿಗಳಿಂದ ಜನದಟ್ಟಣೆ ಆಗಿದ್ದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಪರ್ವತದ ಮೇಲೆ ಇಂತಹ ಜನದಟ್ಟಣೆ ಅಪಾಯಕ್ಕೆ, ಜೀವಕ್ಕೆ ತೊಂದರೆ ಆಗುವ ಸಾಧ್ಯತೆಗಳಿಗೆ ಕಾರಣವಾಗಬಹುದು. ಹೆಚ್ಚು ಎಚ್ಚರಿಕೆಯಿಂದಿರಬೇಕು ಎಂದು ಹೇಳಿದ್ದಾರೆ.

ಆಮ್ಲಜನಕದ ಪ್ರಮಾಣ ಕಡಿಮೆ, ಹೆಚ್ಚು ಒತ್ತಡದ ಪ್ರದೇಶ
ಇಂತಹ ಸಾಹಸಮಯ ಪ್ರವಾಸ ಆಯೋಜಿಸುವ ಕಂಪನಿ ಹಾಗೂ ಏಜೆನ್ಸಿ ಯವರು ಪರ್ವತ ತುದಿಯ ಸಮೀಪವಿರುವ ಲಂಬವಾದ ಬಂಡೆಯ ಮುಖ ಹಿಲರಿ ಸ್ಟೆಪ್‌ನಲ್ಲಿ ಕುಸಿತ ಸಂಭವಿಸಿದೆ. ಕೆಲವರು ಕಡಿದಾದ ಪ್ರದೇಶದಲ್ಲಿ ಕೆಳಗೆ ಬಿದ್ದರು ಎಂದು ಮಾಹಿತಿ ನೀಡಿದೆ.
ಈ ಮೌಂಟ್ ಎವರೆಸ್ಟ್ ಅಪಾಯಕಾರಿ ಪ್ರರ್ವತವಾಗಿದ್ದು, ಮೇಲೆ ಏರುತ್ತಿದ್ದಂತೆ ಆಮ್ಲಜನಕದ ಮಟ್ಟದಲ್ಲಿ ಕುಸಿತವಾಗುತ್ತದೆ. ಇರುವ ಕಡಿಮೆ ಆಮ್ಲಜನಕದಲ್ಲಿ ಸಾಹಸಿಗಳು ಅಷ್ಟು ಎತ್ತರದಲ್ಲಿ ಗಾಳಿಯ ಒತ್ತಡವಿರುವ ಪ್ರದೇಶದಲ್ಲೇ ಹೆಚ್ಚು ಸಾಗುತ್ತ ಸಾಹಸ ಪ್ರದರ್ಶಿಸಬೇಕು.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement