ಎವರೆಸ್ಟ್‌ ಏರುವವರಿಂದಲೇ ಈಗ ಹಿಮನದಿಗೆ ಕಂಟಕ ; ದಿನಕ್ಕೆ 6000 ಲೀಟರ್ ಮೂತ್ರದಿಂದ ಕರಗುತ್ತಿದೆ ಹಿಮ….!

ಕಠ್ಮಂಡು: ವಿಶ್ವದ ಅತಿ ಎತ್ತರದ ಶಿಖರ ಎವರೆಸ್ಟ್‌ ಅನ್ನು ಸ್ಪರ್ಶಿಸುವ ಕನಸಿನೊಂದಿಗೆ ಸಾವಿರಾರು ಪರ್ವತಾರೋಹಿಗಳು ಪ್ರತಿವರ್ಷ ಎವರೆಸ್ಟ್‌ ಬೇಸ್‌ ಕ್ಯಾಂಪ್‌ಗೆ ಆಗಮಿಸುತ್ತಾರೆ. ಈ ಪರ್ವತಾರೋಹಿಗಳು ಬಿಟ್ಟುಹೋಗುತ್ತಿರುವ ತ್ಯಾಜ್ಯ ಹಾಗೂ ಮಾನವ ಚಟುವಟಿಕೆಗಳು ಈಗಾಗಲೇ ಜಾಗತಿಕ ತಾಪಮಾನದಿಂದ ತತ್ತರಿಸಿರುವ ಹಿಮನದಿಯ ಮೇಲೆ ಭಾರೀ ಪರಿಣಾಮಬೀರುತ್ತಿದೆ ಎಂದು ಹೊಸ ವೈಜ್ಞಾನಿಕ ಅಧ್ಯಯನವೊಂದು ಎಚ್ಚರಿಸಿದೆ. ಅವರು ಬಿಟ್ಟುಹೋಗುತ್ತಿರುವುದು ಕೇವಲ ಹೆಜ್ಜೆಗುರುತುಗಳಲ್ಲ … Continued

ವೀಡಿಯೊ..| ಮೌಂಟ್ ಎವರೆಸ್ಟ್‌ ಮೇಲೆ ಹಾರಾಡಿ ಅತ್ಯದ್ಭುತ ದೃಶ್ಯಗಳನ್ನು ಸೆರೆ ಹಿಡಿದ ಚೀನಾದ ಡ್ರೋನ್‌…ವೀಕ್ಷಿಸಿ

ಚೀನಾದ ಕಂಪನಿಯೊಂದು ಅಭಿವೃದ್ಧಿಪಡಿಸಿದ ಡ್ರೋನ್‌ ವಿಶ್ವದ ಅತ್ಯಂತ ಎತ್ತರದ ಮೌಂಟ್‌ ಎವರೆಸ್ಟ್‌ ಮೇಲೆ ಹಾರಾಟ ನಡೆಸಿದೆ. ಡ್ರೋನ್‌ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸೆರೆ ಹಿಡಿದ ದೃಶ್ಯಗಳು ಈಗ ವೈರಲ್‌ ಆಗಿದೆ. ಡ್ರೋನ್ ತಯಾರಕರಾದ ಡಿಜೆಐ ಹಾಗೂ 8KRAW ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಸಾಧನಕ್ಕೆ ಡಿಜೆಐ ಮೇವಿಕ್ 3 ಡ್ರೋನ್ ಎಂದು ಹೆಸರಿಡಲಾಗಿದೆ. ನಾಲ್ಕು ನಿಮಿಷಗಳ ಈ … Continued

ವೀಡಿಯೊಗಳು…| ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್‌ ನಲ್ಲಿ `ಟ್ರಾಫಿಕ್ ಜಾಮ್’…!

ವಿಶ್ವದ ಅತಿ ಎತ್ತರದ ಪರ್ವತವಾದವ ‘ಮೌಂಟ್ ಎವರೆಸ್ಟ್’ (Mount Everest). ಇದು ಸಮುದ್ರ ಮಟ್ಟದಿಂದ ಸುಮಾರು ಸುಮಾರು 29,000 ಅಡಿ ಎತ್ತರವಿದೆ. ಈ ಪರ್ವತವು ಇದೀಗ ಪರ್ವತಾರೋಹಿಗಳ ದಟ್ಟಣೆಯಿಂದ ಸುದ್ದಿಯಲ್ಲಿದೆ. ಮೌಂಟ್‌ ಎವರೆಸ್ಟ್‌ ಪರ್ವತ ಪ್ರದೇಶದ ಅತ್ಯಂತ ಕಡಿದಾದದ ಜಾಗದಲ್ಲಿಯೂ ಕಾಲಿಡಲು ಆಗದಷ್ಟು ‘ಟ್ರಾಫಿಕ್ ಜಾಮ್’ ಆಗಿದೆ. ಈ ಕುರಿತು ವೀಡಿಯೊ ಭಾರೀ ವೈರಲ್ ಆಗಿದ್ದು, … Continued

29ನೇ ಬಾರಿ ಮೌಂಟ್‌ ಎವರೆಸ್ಟ್‌ ಏರುವ ಮೂಲಕ ಹೊಸ ದಾಖಲೆ ನಿರ್ಮಿಸಿದ ಕಾಮಿ ರೀಟಾ ಶೆರ್ಪಾ

ಕಠ್ಮಂಡು: ‘ಎವರೆಸ್ಟ್ ಮ್ಯಾನ್’ ಎಂದು ಕರೆಯಲ್ಪಡುವ ನೇಪಾಳದ ಕಾಮಿ ರೀಟಾ ಶೆರ್ಪಾ ಅವರು ಭಾನುವಾರ ಬೆಳಿಗ್ಗೆ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು 29 ನೇ ಬಾರಿಗೆ ಏರುವ ಮೂಲಕ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಪ್ರಕಾರ, ದಾಖಲೆ ಸ್ಥಾಪಿಸಿದ ಆರೋಹಿ ಭಾನುವಾರ 7:25 AMಕ್ಕೆ ಎವರೆಸ್ಟ್ ಶಿಖರದ … Continued

ಮೌಂಟ್ ಎವರೆಸ್ಟ್‌ ಪರ್ವತ ಶಿಖರದ 360-ಡಿಗ್ರಿಯ ಲುಕ್‌ ತೋರಿಸುವ ವೀಡಿಯೊ ವೈರಲ್: ಬೆರಗಾದ ಇಂಟರ್ನೆಟ್ | ವೀಕ್ಷಿಸಿ

ಭೂಮಿಯ ಮೇಲೆ ಎಲ್ಲವೂ ಚಿಕ್ಕದಾಗಿದೆ ಎಂದು ತೋರುವಂತಹ ಸ್ಥಳ ಭೂಮಿಯ ಮೇಲಿದ್ದರೆ ಬಹುಶಃ ಅದು ವಿಶ್ವದ ಅತಿ ಎತ್ತರದ ಪರ್ವತ ಶಿಖರವಾದ ಮೌಂಟ್ ಎವರೆಸ್ಟ್ ಆಗಿರಬೇಕು. ಈಗ, ಪರ್ವತದ ಸೌಂದರ್ಯದ ಬಗ್ಗೆ ನಮಗೆ ಪರಿಚಯವಾಗುವಂತೆ, ಮೌಂಟ್ ಎವರೆಸ್ಟ್ ಶಿಖರದಿಂದ 360-ಡಿಗ್ರಿ ನೋಟವನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. @historyinmemes ಬಳಕೆದಾರರಿಂದ X ನಲ್ಲಿ … Continued

ಮೌಂಟ್ ಎವರೆಸ್ಟ್ ಬಳಿ ಹೆಲಿಕಾಪ್ಟರ್ ಪತನ : 6 ಮಂದಿ ಸಾವು

ಕಠ್ಮಂಡು :ಮಂಗಳವಾರ ನೇಪಾಳದ ಮೌಂಟ್ ಎವರೆಸ್ಟ್ ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ಐವರು ಮೆಕ್ಸಿಕನ್ನರು ಸೇರಿದಂತೆ ಆರು ಜನರು ಸಾವಿಗೀಡಾಗಿದ್ದಾರೆ. ಎಲ್ಲಾ ಆರು ದೇಹಗಳನ್ನು “ತುಂಡು ತುಂಡುಗಳಾಗಿ” ಪತ್ತೆಯಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಖಾಸಗಿ ವಾಣಿಜ್ಯ ಹೆಲಿಕಾಪ್ಟರ್ ಮೌಂಟ್ ಎವರೆಸ್ಟ್ ಮತ್ತು ಇತರ ಎತ್ತರದ ಪರ್ವತ ಶಿಖರಗಳ ನೆಲೆಯಾದ ಸೊಲುಖುಂವ್ಹು ಜಿಲ್ಲೆಯ ಸುರ್ಕೆಯಿಂದ ಬರುತ್ತಿದ್ದಾಗ ಈ … Continued