ಲೋಕಸಭೆ ಚುನಾವಣೆ 2024 : ಎನ್‌ಡಿಎ 400 ಸ್ಥಾನಗಳನ್ನು ದಾಟಬಹುದು ಎಂದ ಮೂರು ಎಕ್ಸಿಟ್‌ ಪೋಲ್‌ ಗಳು…

ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಎನ್‌ಡಿಎ ಲೋಕಸಭೆಯ 543 ಸ್ಥಾನಗಳಲ್ಲಿ 350 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂದು ಶನಿವಾರದಂದು ಹೆಚ್ಚಿನ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಕನಿಷ್ಠ 350 ಸ್ಥಾನಗಳನ್ನು ಗೆದ್ದರೂ, 400 ಸ್ಥಾನಗಳ ಮೈಲಿಗಲ್ಲು ದಾಟಲು ವಿಫಲವಾಗಲಿದೆ ಎಂದು 10 ಎಕ್ಸಿಟ್ ಪೋಲ್‌ಗಳು ಸೂಚಿಸಿವೆ. ಆದಾಗ್ಯೂ, ಮೂರು ಎಕ್ಸಿಟ್ ಪೋಲ್‌ಗಳು – ಇಂಡಿಯಾ ಟುಡೆ-ಮೈ ಆಕ್ಸಿಸ್ ಇಂಡಿಯಾ, ಇಂಡಿಯಾ ಟಿವಿ-ಸಿಎನ್‌ಎಕ್ಸ್, ಮತ್ತು ನ್ಯೂಸ್24-ಟುಡೇಸ್ ಚಾಣಕ್ಯ ಎಕ್ಸಿಟ್ ಪೋಲ್‌ಗಳು ಎನ್‌ಡಿಎಗೆ 400 ಪ್ಲಸ್ ಸೀಟುಗಳನ್ನು ಭವಿಷ್ಯ ನುಡಿದಿವೆ. ಇಂದು ವಿವಿಧ ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿರುವುದು ಇಲ್ಲಿದೆ?
ಇಂಡಿಯಾ ಟುಡೆ-ಮೈ ಆಕ್ಸಿಸ್ ಇಂಡಿಯಾ ಎಕ್ಸಿಟ್ ಪೋಲ್…
ಇಂಡಿಯಾ ಟುಡೆ-ಮೈ ಆಕ್ಸಿಸ್ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ, ಎನ್‌ಡಿಎ 361 ರಿಂದ 401 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ, ಇದು 2019 ರ ಗೆದ್ದ ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿದೆ.
40 ವಿರೋಧ ಪಕ್ಷಗಳ ಒಕ್ಕೂಟವಾದ ಇಂಡಿಯಾ ಮೈತ್ರಿಕೂಟ 131 ರಿಂದ 166 ಸ್ಥಾನಗಳನ್ನು ಗಳಿಸಲಿದೆ ಎಂದು ಇಂಡಿಯಾ ಟುಡೆ-ಮೈ ಆಕ್ಸಿಸ್ ಇಂಡಿಯಾ ಎಕ್ಸಿಟ್ ಪೋಲ್ ಮುನ್ಸೂಚಿಸಿದೆ. ಪ್ರಾದೇಶಿಕ ಪಕ್ಷಗಳು ಮತ್ತು ಸ್ವತಂತ್ರರು 8 ರಿಂದ 20 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
ಬಿಜೆಪಿಯೊಂದೇ ಸ್ವಂತವಾಗಿ 322-340 ಸ್ಥಾನಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ ಮತ್ತು ಕಾಂಗ್ರೆಸ್ 60 ರಿಂದ 76 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ. ಎರಡೂ ಪಕ್ಷಗಳು ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸುವುದಲ್ಲದೆ, ತಮ್ಮ ಮತಗಳ ಪಾಲನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಎಲ್ಲಾ 543 ಲೋಕಸಭಾ ಕ್ಷೇತ್ರಗಳಲ್ಲಿ ನಡೆಸಿದ 5.8 ಲಕ್ಷ ಸಂದರ್ಶನಗಳನ್ನು ಆಧರಿಸಿದೆ.

ಪ್ರಮುಖ ಸುದ್ದಿ :-   ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾರ್ಖಂಡ ಮಾಜಿ ಸಿಎಂ ಹೇಮಂತ ಸೊರೇನ್‌ ಗೆ ಜಾಮೀನು

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಎನ್‌ಡಿಎ 400 ಅಂಕಗಳನ್ನು ದಾಟಬಹುದು ಎಂದು ಟುಡೆ ಚಾಣಕ್ಯ ಎಕ್ಸಿಟ್‌ ಪೋಲ್‌ ಭವಿಷ್ಯ ನುಡಿದಿದೆ.
ಟುಡೇಸ್ ಚಾಣಕ್ಯ ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿರುವ ಸೀಟ್ ಪ್ರೊಜೆಕ್ಷನ್ ಹೀಗಿದೆ:
NDA: 400 ± 15 ಸ್ಥಾನಗಳು
ಬಿಜೆಪಿ: 335 ± 15 ಸ್ಥಾನಗಳು
ಇಂಡಿಯಾ ಮೈತ್ರಿಕೂಟ : 107 ± 11 ಸ್ಥಾನಗಳು
ಕಾಂಗ್ರೆಸ್: 50 ± 11 ಸ್ಥಾನಗಳು
ಇತರೆ: 36 ± 9 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಹೇಳಿದೆ.
ಬಿಜೆಪಿ ಅಲೆಯು ದೇಶದಾದ್ಯಂತ ಇದೆ, ಒಟ್ಟು 543 ಲೋಕಸಭಾ ಸ್ಥಾನಗಳಲ್ಲಿ 371 ರಿಂದ 401 ಸ್ಥಾನಗಳನ್ನು ಗೆಲ್ಲಬಹುದು ಎಂದು ಅದು ಹೇಳಿದೆ. ಇಂಡಿಯಾ ಇಂಡಿಯಾ ಟಿವಿ-ಸಿಎನ್‌ಎಕ್ಸ್ ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ ಏಕಾಂಗಿಯಾಗಿ 319-338 ಸೀಟುಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

 

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement