ಬಿಜೆಪಿಯ ‘ಮುಸ್ಲಿಂ ವೋಟ್ ಬ್ಯಾಂಕ್’: ಅಸಾಧಾರಣ ಅಂಕಿ-ಅಂಶ ಬಹಿರಂಗಪಡಿಸಿದ ನ್ಯೂಸ್ 18 ಚುನಾವಣೋತ್ತರ ಸರ್ವೆ

ಭಾರತದ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯವು ಹೇಗೆ ಮತ ಚಲಾಯಿಸಿದೆ ಎಂಬುದರ ಕುರಿತು ದೀರ್ಘಕಾಲದಿಂದ ಇದ್ದ ನಂಬಿಕೆಗಳನ್ನು 2024 ರ ಲೋಕಸಭಾ ಚುನಾವಣೆಯು  ಹೇಗೆ ಛಿದ್ರಗೊಳಿಸಿದೆ ಎಂಬುದು ತನ್ನ ಸರ್ವೆಯಲ್ಲಿ ಕಂಡುಬಂದಿದೆ ಎಂದು ನ್ಯೂಸ್ 18 ಪೋಸ್ಟ್-ಪೋಲ್ ಸರ್ವೆ ಹೇಳಿದೆ.
ಹಲವಾರು ಪಕ್ಷಗಳು ಪ್ರ ಮುಸ್ಲಿಂ ಸಮುದಾಯದ ಬೆಂಬಲವನ್ನು ಬ್ಯಾಂಕಿಂಗ್ ಮಾಡುತ್ತಿವೆ. ಈ ಸಂದರ್ಭದಲ್ಲಿ ನ್ಯೂಸ್‌ ಪೋಸ್ಟ್-ಪೋಲ್ ಸರ್ವೆಯು ಈ ಕುತೂಹಲಕಾರಿ ಅಂಶಗಳು ಸಮೀಕ್ಷೆಯಲ್ಲಿ ಕಂಡುಬಂದಿದ್ದನ್ನು ಬಹಿರಂಗಪಡಿಸಿದೆ.
ಅಂಕಿಅಂಶಗಳ ಪ್ರಕಾರ, ಕೇರಳ ಮತ್ತು ಬಿಹಾರ ಹೊರತುಪಡಿಸಿ, ಉಳಿದ ರಾಜ್ಯಗಳಲ್ಲಿ ಮುಸ್ಲಿಮರು ಮತಗಳು ಕಾಂಗ್ರೆಸ್‌ ನತ್ತ ಧ್ರುವೀಕರಣವನ್ನು ತೋರಿಸುವುದಿಲ್ಲ ಎಂದು ಸರ್ವೆ ಹೇಳಿದೆ. ಉತ್ತರ ಪ್ರದೇಶದಲ್ಲಿ, ಬಿಜೆಪಿ (20%)ಯು ಕಾಂಗ್ರೆಸ್ (17%) ಗಿಂತ ಹೆಚ್ಚಿನ ಮುಸ್ಲಿಂ ಬೆಂಬಲವನ್ನು ಹೊಂದಿದೆ ಎಂದು ಸರ್ವೆಯಲ್ಲಿ ಕಂಡುಬಂದಿದೆ, ಮತ್ತು ಒಡಿಶಾದಲ್ಲಿ (ಬಿಜೆಪಿಗೆ 35% ಮತ್ತು ಕಾಂಗ್ರೆಸ್‌ಗೆ 28%) ಅದೇ ರೀತಿಯಾಗಿದೆ.

ಛತ್ತೀಸ್‌ಗಢದಲ್ಲಿ ಮುಸ್ಲಿಮರು ಕಾಂಗ್ರೆಸ್ ಮತ್ತು ಬಿಜೆಪಿ (ತಲಾ 47%)ಗೆ ಸಮಾನವಾಗಿ ಮತ ಚಲಾಯಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ 18% ಮತ್ತು ಕಾಂಗ್ರೆಸ್‌ಗೆ 32%ರಷ್ಟು ಮುಸ್ಲಿಮ್‌ ಮತಗಳು ಹೋಗಿವೆ ಎಂಬುದಾಗಿ ಸರ್ವೆ ಅಂದಾಜಿಸಿದೆ.
ಸಮೀಕ್ಷೆಯ ಪ್ರಕಾರ, ಗುಜರಾತ್, ಛತ್ತೀಸ್‌ಗಢ, ಅಸ್ಸಾಂ, ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ, ಒಡಿಶಾ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಬಿಜೆಪಿಗೆ ಮುಸ್ಲಿಮ್‌ ಸಮುದಾಯದಲ್ಲಿ ಹೆಚ್ಚಿನ ಸ್ವೀಕಾರಾರ್ಹತೆ (25% ಕ್ಕಿಂತ ಹೆಚ್ಚು) ಇದೆ.
ಬಿಜೆಪಿಯನ್ನು ಬೆಂಬಲಿಸುವ ಮುಸ್ಲಿಮರು ಮತ್ತು ಕಾಂಗ್ರೆಸ್ ಅನ್ನು ಬೆಂಬಲಿಸುವವರ ನಡುವಿನ ಅಂತರವು ಕೇವಲ 10-15% ಮಾತ್ರ ಎಂಬುದು ಕುತೂಹಲಕಾರಿಯಾಗಿದೆ. ಕೆಲವೇ ಕೆಲವು ಜನಸಂಖ್ಯಾಶಾಸ್ತ್ರಗಳಲ್ಲಿ ಈ ಅಂತರ ಬಹಳ ವಿಸ್ತಾರವಾಗಿದೆ.
ಸಮೀಕ್ಷೆಯು ಅಖಿಲ ಭಾರತ ಮಾದರಿಯ 11,371 ಗಾತ್ರವನ್ನು ಹೊಂದಿದೆ. ಪ್ರತಿಕ್ರಿಯಿಸಿದವರಲ್ಲಿ ಒಟ್ಟು 6,472 ಪುರುಷರು ಮತ್ತು 4,899 ಮಹಿಳೆಯರು.

ಪ್ರಮುಖ ಸುದ್ದಿ :-   ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ : ಕ್ಷಮೆಯಾಚಿಸಿದ ಮಧ್ಯಪ್ರದೇಶದ ಸಚಿವ

ಪುರುಷರು ಹೇಗೆ ಮತ ಚಲಾಯಿಸಿದ್ದಾರೆ..?
ಬಿಜೆಪಿಗೆ ಆದ್ಯತೆ ನೀಡಿದ ಮುಸ್ಲಿಂ ಪುರುಷರಲ್ಲಿ, ಹೆಚ್ಚಿನ ಶೇಕಡಾವಾರು ಜನರು ವೈಟ್‌ ಕಾಲರ್ ಉದ್ಯೋಗಿಗಳಾಗಿದ್ದಾರೆ ಎಂಬುದು ಸರ್ವೆಯಲ್ಲಿ ಕಂಡುಬಂದಿದೆ ಎಂದು ನ್ಯೂಸ್ 18 ಪೋಸ್ಟ್-ಪೋಲ್ ಸರ್ವೆ ಹೇಳಿದೆ.ಪ್ರತಿಕ್ರಿಯಿಸಿದವರಲ್ಲಿ ಶಿಯಾಗಳು 21% ಮತ್ತು ಸುನ್ನಿಗಳು 15%ರಷ್ಟು ಬಿಜೆಪಿಯನ್ನು ಬೆಂಬಲಿಸಿದ್ದಾರೆ, ಕಾಂಗ್ರೆಸ್ಸಿಗೆ 31%ರಷ್ಟು ಶಿಯಾಗಳು ಮತ್ತು 33%ರಷ್ಟು ಸುನ್ನಿಗಳು ಬೆಂಬಲಿಸಿದ್ದಾರೆ.
ಮಹಿಳೆಯರು ಹೇಗೆ ಚಲಾಯಿಸಿದ್ದಾರೆ..?
ಕಡಿಮೆ ಅಕ್ಷರಸ್ಥ ಮುಸ್ಲಿಂ ಮಹಿಳೆಯರು ಬಿಜೆಪಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಮತ್ತು ಪದವೀಧರರಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಆದ್ಯತೆ ಇದೆ.
ಕೃಷಿಯೇತರ ಕಾರ್ಮಿಕರು ಎಂದು ಸೂಚಿಸಿದ ಮುಸ್ಲಿಂ ಮಹಿಳೆಯರಲ್ಲಿ ಬಿಜೆಪಿಗೆ ಹೆಚ್ಚಿನ ಆದ್ಯತೆ ಇದೆ. ಇದು ಕಾಂಗ್ರೆಸ್‌ನ ಆದ್ಯತೆಗಿಂತ ಹೆಚ್ಚು. ವ್ಯವಹಾರ ಮತ್ತು ವ್ಯಾಪಾರಿ ಸಮುದಾಯಗಳಲ್ಲಿಯೂ ಮುಸ್ಲಿಂ ಮಹಿಳೆಯರು ಬಿಜೆಪಿಗೆ ಹೆಚ್ಚಿನ ಆದ್ಯತೆ ಕಂಡುಬಂದಿದೆ.
ಸಮೀಕ್ಷೆ ನಡೆಸಿದ ಎಲ್ಲಾ ಮುಸ್ಲಿಂ ಮಹಿಳೆಯರಲ್ಲಿ, ಕಡಿಮೆ ಸಾಕ್ಷರರು ಮತ್ತು ಬಡವರು ಬಿಜೆಪಿಯತ್ತ ಹೆಚ್ಚು ಒಲವು ತೋರಿದ್ದಾರೆ, ಬಹುಶಃ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ “ಲಾಭದಾಯಕ ಯೋಜನೆಗಳಿಂದ” ಲಾಭ ಪಡೆಯುತ್ತಿದ್ದಾರೆ ಎಂದು ಸರ್ವೆ ಹೇಳಿದೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ | ಷೇರು ಮಾರುಕಟ್ಟೆಯಲ್ಲಿ ಭಾರತದ ರಕ್ಷಣಾ ಕಂಪನಿಗಳಿಗೆ ಹೆಚ್ಚಿದ ಬೇಡಿಕೆ, ಚೀನಾ-ಟರ್ಕಿ ಕಂಪನಿಗಳ ಬೇಡಿಕೆ ಕುಸಿತ...!

5 / 5. 6

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement