ಉತ್ತರಾಖಂಡದಲ್ಲಿ ಕೆಟ್ಟ ಹವಾಮಾನದಿಂದಾಗಿ ಕರ್ನಾಟಕದವರು ಸೇರಿ 9 ಚಾರಣಿಗರು ಸಾವು

ಕರ್ನಾಟಕದ 18 ಚಾರಣಿಗರು ಸೇರಿದಂತೆ 22 ಸದಸ್ಯರ ಚಾರಣಿಗರ ತಂಡದಲ್ಲಿದ್ದ ಒಂಬತ್ತು ಚಾರಣಿಗರು ನಿನ್ನೆ ಉತ್ತರಾಖಂಡದ ಉತ್ತರಕಾಶಿಯ ಸಹಸ್ರ ತಾಲ್ (ಸರೋವರ) ಕ್ಕೆ ತೆರಳುತ್ತಿದ್ದಾಗ ಕೆಟ್ಟ ಹವಾಮಾನದಿಂದಾಗಿ ದಾರಿ ತಪ್ಪಿ ಸಿಕ್ಕಿಬಿದ್ದು ಸಾವಿಗೀಡಾಗಿದ್ದಾರೆ. ಮೃತರಲ್ಲಿ ಕರ್ನಾಟಕದ ಐವರು ಇದ್ದಾರೆ ಎಂದು ಹೇಳಲಾಗಿದೆ.
ವಾಯು-ನೆಲದ ಜಂಟಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಮತ್ತು ಇದುವರೆಗೆ ಹದಿಮೂರು ಚಾರಣಿಗರನ್ನು ರಕ್ಷಿಸಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ, ರಕ್ಷಣಾ ಭಾಗವಾಗಿ ಹೆಲಿಕಾಪ್ಟರ್‌ಗಳು ಕಾರ್ಯಾಚರಣೆ ನಡೆಸುವಾಗ ತೊಂದರೆಗಳನ್ನು ಎದುರಿಸಿದವು. ಎರಡು ಚೀತಾ ಹೆಲಿಕಾಪ್ಟರ್‌ಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡಗಳನ್ನು ರಕ್ಷಣಕ್ಕೆ ಕಾರ್ಯಕ್ಕೆ ನಿಯೋಜಿಸಲಾಗಿದೆ.

ಸಹಸ್ರ ತಾಲ್ ಟ್ರೆಕ್ ಉತ್ತರಾಖಂಡದ ಗರ್ವಾಲ್ ಪ್ರದೇಶದಲ್ಲಿ 15,000 ಅಡಿಗಳಷ್ಟು ಎತ್ತರದ ದುರ್ಗಮವಾದ ಹಾದಿಯಾಗಿದೆ. 24-ಕಿಲೋಮೀಟರ್ ದೂರ ಸಾಗಲು ಸರಿಸುಮಾರು 10 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಉತ್ತರಕಾಶಿಯ ಘನ್ಸಾಲಿಯಲ್ಲಿರುವ ಆಲ್ಪೈನ್ ಸರೋವರವನ್ನು ತಲುಪಲು ಚಾರಣಿಗರು ಕೆಲವು ಅತ್ಯಂತ ಅಪಾಯಕಾರಿ ಮಾರ್ಗಗಳಲ್ಲಿ ಹೋಗಬೇಕಾಗುತ್ತದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ಮೆಹರ್ಬಾನ್ ಸಿಂಗ್ ಬಿಶ್ತ್ ಅವರು ರಕ್ಷಣಾ ತಂಡಗಳಿಗೆ ಉಳಿದ ಚಾರಣಿಗರನ್ನು ರಕ್ಷಿಸಲು ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ.
ಉತ್ತರಕಾಶಿಯ ಪೊಲೀಸ್ ಅಧೀಕ್ಷಕ ಅರ್ಪಣ್ ಯದುವಂಶಿ, “ಜಿಲ್ಲೆಯ ಭಟ್ವಾರಿ ಬ್ಲಾಕ್‌ನಲ್ಲಿ ಜೂನ್ 4 ರಂದು ಎಸ್‌ಡಿಆರ್‌ಎಫ್ ತಂಡಕ್ಕೆ ಟ್ರೆಕ್ಕಿಂಗ್‌ಗಳು ನಾಪತ್ತೆಯಾದ ಬಗ್ಗೆ ಮಾಹಿತಿ ಸಿಕ್ಕಿತು. ತಂಡದ 22 ಟ್ರೆಕ್ಕಿಂಗ್ ಸದಸ್ಯರು ಪ್ರತಿಕೂಲ ಹವಾಮಾನದಿಂದಾಗಿ ನಾಪತ್ತೆಯಾಗಿದ್ದಾರೆ” ಎಂಬ ಮಾಹಿತಿ ಬಂದಿತ್ತು ಎಂದು ಹೇಳಿದ್ದಾರೆ.

“ಮಾಹಿತಿ ಪಡೆದ ನಂತರ, ಆಡಳಿತವು ತಕ್ಷಣ ಕಾರ್ಯಪ್ರವೃತ್ತವಾಗಿದೆ, ಎಸ್‌ಡಿಆರ್‌ಎಫ್ ಅಧಿಕಾರಿಗಳು, ಅರಣ್ಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ 10 ಸದಸ್ಯರ ರಕ್ಷಣಾ ತಂಡವು ತಕ್ಷಣ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿತು. 22 ಚಾರಣಿಗರ ತಂಡದಲ್ಲಿ 18 ಕರ್ನಾಟಕಕ್ಕೆ ಸೇರಿದವರು, ಮೂವರು ಮಹಾರಾಷ್ಟ್ರದಿಂದ ಬಂದವರು ಮತ್ತು ಅವರಲ್ಲಿ ಒಬ್ಬರು ಸ್ಥಳೀಯ ಮಾರ್ಗದರ್ಶಕರು, ಚಾರಣಿಗರನ್ನು ರಕ್ಷಿಸಲು ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ,” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌, ಏಕದಿನ ಸರಣಿಗೆ ಭಾರತದ ಕ್ರಿಕೆಟ್‌ ತಂಡ ಪ್ರಕಟ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement