ಲೋಕಸಭೆ ಚುನಾವಣೆ ಫಲಿತಾಂಶ : ಪಕ್ಷವಾರು ಗೆದ್ದ ಸ್ಥಾನಗಳ ವಿವರ….

ನವದೆಹಲಿ: ಭಾರತೀಯ ಚುನಾವಣಾ ಆಯೋಗ (ECI) ಎಲ್ಲಾ 543 ಲೋಕಸಭಾ ಕ್ಷೇತ್ರಗಳಿಗೆ ಫಲಿತಾಂಶವನ್ನು ಪ್ರಕಟಿಸಿದೆ. ಇದರಲ್ಲಿ ಬಿಜೆಪಿ 240 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿಯ ಸೂರತ್ ಅಭ್ಯರ್ಥಿ ಮುಖೇಶ ದಲಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರಿಂದ 542 ಸ್ಥಾನಗಳಿಗೆ ಮಾತ್ರ ಮತಗಳನ್ನು ಎಣಿಕೆ ಮಾಡಲಾಗಿದೆ.
ಕೆಲವು ಹಿಂದಿ ರಾಜ್ಯಗಳಲ್ಲಿ ಪಕ್ಷದ ಹೀನಾಯ ಪ್ರದರ್ಶನದ ಹೊರತಾಗಿಯೂಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ೨೯೩ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಲೋಕಸಭೆಯಲ್ಲಿ ಬಹುಮತ ಪಡೆಯುವ ಮೂಲಕ ಸತತ ಮೂರನೇ ಅವಧಿಗೆ ಪ್ರಧಾನಿಯಾಗಲು ನರೇಂದ್ರ ಮೋದಿ ಸಜ್ಜಾಗಿದ್ದಾರೆ.
ಬಿಜೆಪಿಯು 240 ಸ್ಥಾನಗಳಲ್ಲಿ ಜಯಗಳಿಸಿತು, ಇದು ಪಕ್ಷವು ಸರಳ ಬಹುಮತ ಪಡೆಯಲು ಬೇಕಾಗಿರುವ 272 ಸ್ಥಾನಗಳಿಗಿಂತ ಕಡಿಮೆಯಾಗಿದೆ.ಬಿಜೆಪಿ ಪಕ್ಷವು 2019 ಮತ್ತು 2014 ರಲ್ಲಿ ಕ್ರಮವಾಗಿ 303 ಮತ್ತು 282 ಸ್ಥಾನಗಳನ್ನು ಗೆದ್ದಿತ್ತು. ಆದರೆ ಎನ್‌ಡಿಎ ೨೯೩ ಸ್ಥಾನಗಳನ್ನು ಪಡೆಯುವ ಮೂಲಕ ಬಹುಮತ ಪಡೆದಿದೆ.
ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಎನ್ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಹಾಗೂ ನಿತೀಶಕುಮಾರ ನೇತೃತ್ವದ ಜೆಡಿಯು ಪಕ್ಷಗಳು ಕ್ರಮವಾಗಿ ಆಂಧ್ರಪ್ರದೇಶ ಮತ್ತು ಬಿಹಾರದಲ್ಲಿ 16 ಮತ್ತು 12 ಸ್ಥಾನಗಳನ್ನು ಗೆದ್ದಿದೆ. ಈಗ ಮೈತ್ರಿಕೂಟದ ಪಕ್ಷಗಳ ಬೆಂಬಲದೊಂದಿಗೆ ಎನ್‌ಡಿಎ ಸರ್ಕಾರ ರಚಿಸಲು ಸಿದ್ಧವಾಗಿದೆ.
ವಿರೋಧ ಪಕ್ಷಗಳ ಮೈತ್ರಿಕೂಟವಾದ ಇಂಡಿಯಾ (I.N.D.IA) ಬ್ಲಾಕ್‌ನ ಭಾಗವಾಗಿರುವ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದಿದೆ. ಇದು 2019 ರಲ್ಲಿ ಗೆದ್ದ 52 ಸ್ಥಾನಗಳಿಗೆ ಹೋಲಿಸಿದರೆ ಬಹುತೇಕ ಡಬಲ್‌ ಆಗಿದೆ. ಸಮಾಜವಾದಿ ಪಕ್ಷವು ಉತ್ತರ ಪ್ರದೇಶದಲ್ಲಿ 37 ಸ್ಥಾನಗಳನ್ನು ಗೆದ್ದಿದೆ. ತೃಣಮೂಲ ಕಾಂಗ್ರೆಸ್ (TMC), ಪಶ್ಚಿಮ ಬಂಗಾಳದಲ್ಲಿ 29 ಸ್ಥಾನಗಳನ್ನು ಗೆದ್ದುಕೊಂಡಿತು. ಇವೆರಡೂ ಪಕ್ಷಗಳು ಸಹ ಕಳೆದು ಚುನಾವಣೆಗೆ ಹೋಲಿಸಿದರೆ ತಮ್ಮ ಸ್ಥಾನಗಳನ್ನು ಹೆಚ್ಚಿಸಿಕೊಂಡಿವೆ.

ಪ್ರಮುಖ ಸುದ್ದಿ :-   ಸೇನಾಧಿಕಾರಿ ಸೋಫಿಯಾ ಕುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ : ಮಧ್ಯಪ್ರದೇಶ ಸಚಿವನ ವಿರುದ್ಧ ಎಫ್ಐಆರ್ ದಾಖಲಿಸಲು ಹೈಕೋರ್ಟ್ ಆದೇಶ

ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಕ್ಷಗಳು ಗೆದ್ದಿರುವ ಸ್ಥಾನಗಳ ಸಂಖ್ಯೆ ಈ ಕೆಳಗಿನಂತಿದೆ:
ಬಿಜೆಪಿ-240
ಕಾಂಗ್ರೆಸ್ -99
ಸಮಾಜವಾದಿ ಪಕ್ಷ- 37
ಟಿಎಂಸಿ -29
ಡಿಎಂಕೆ-22
ತೆಲುಗು ದೇಶಂ -16
ಜೆಡಿ(ಯು)- 12
ಶಿವಸೇನೆ (ಯುಬಿಟಿ) -9
ಎನ್‌ಸಿಪಿ (ಶರದ್‌ ಪವಾರ್)-8
ಶಿವಸೇನೆ (ಏಕನಾಥ್ ಶಿಂಧೆ)-7
ಲೋಕ ಜನಶಕ್ತಿ ಪಕ್ಷ (ರಾಮ ವಿಲಾಸ ಪಾಸ್ವಾನ್‌) -5
ವೈಎಸ್‌ಆರ್‌ಸಿಪಿ (YSRCP)- 4
ರಾಷ್ಟ್ರೀಯ ಜನತಾ ದಳ – 4
ಸಿಪಿಐ(ಎಂ)- -4
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ -3
ಆಮ್ ಆದ್ಮಿ ಪಕ್ಷ -3
ಜಾರ್ಖಂಡ್ ಮುಕ್ತಿ ಮೋರ್ಚಾ -3
ಜನಸೇನಾ ಪಕ್ಷ – 2
ಸಿಪಿಐ(ಎಂಎಲ್)(ಎಲ್)-2
ಜೆಡಿಎಸ್-2
ವಿದುತಲೈ ಚಿರುತೈಗಲ್ ಕಚ್ಚಿ(ವಿಸಿಕೆ)- 2
ಸಿಪಿಐ-2
ರಾಷ್ಟ್ರೀಯ ಲೋಕದಳ -2
ನ್ಯಾಶನಲ್‌ ಕಾನ್ಫರೆನ್ಸ್‌- 2
ಯುನೈಟೆಡ್ ಪೀಪಲ್ಸ್ ಪಾರ್ಟಿ, ಲಿಬರಲ್ -1
ಅಸೋಮ್ ಗಣ ಪರಿಷತ್ -1
ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) -1
ಕೇರಳ ಕಾಂಗ್ರೆಸ್ -1
ಆರ್‌ಎಸ್‌ಪಿ-1
ಎನ್‌ಸಿಪಿ (ಅಜಿತ ಪವಾರ್‌)-1
VOTPP- 1
ZPM -1
ಶಿರೋಮಣಿ ಅಕಾಲಿದಳ -1
ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ -1
ಭಾರತ್ ಆದಿವಾಸಿ ಪಕ್ಷ – 1
SKM-1
ಎಂಡಿಎಂಕೆ-1
ಆಜಾದ್ ಸಮಾಜ ಪಕ್ಷ (ಕಾನ್ಶಿ ರಾಮ್) – 1
ಅಪ್ನಾ ದಳ (ಸೋನಿಲಾಲ್) -1
AJSUP-1
ಎಐಎಂಐಎಂ (AIMIM)-1
ಸ್ವತಂತ್ರರು- 7

ಪ್ರಮುಖ ಸುದ್ದಿ :-   ಪಹಲ್ಗಾಮ್ ದಾಳಿ : ಭಯೋತ್ಪಾದಕ ಗುಂಪು ಲಷ್ಕರ್ ಅಂಗಸಂಸ್ಥೆ ಟಿಆರ್‌ಎಫ್ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪುರಾವೆ ಸಲ್ಲಿಸಲಿರುವ ಭಾರತ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement