ವೀಡಿಯೊ…| ಅಂತ್ಯಕ್ರಿಯೆಗೆ ಒಯ್ಯುವಾಗ ರಾಮೋಜಿ ರಾವ್ ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು

ಹೈದರಾಬಾದ್: ಮಾಧ್ಯಮ ಬ್ಯಾರೋನ್‌ ಚೆರುಕುರಿ ಹಾಗೂ ರಾಮೋಜಿ ರಾವ್‌ ಫಿಲಮ್‌ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ಅವರ ಅಂತ್ಯಕ್ರಿಯೆ ಭಾನುವಾರ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ತೆಲಂಗಾಣ ಪೊಲೀಸರ ತುಕಡಿ ರಾಮೋಜಿ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷರಿಗೆ ಗೌರವ ಸೂಚಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿತು.
ಅಂತ್ಯಕ್ರಿಯೆಯಲ್ಲಿ ರಾಮೋಜಿ ರಾವ್ ಅವರ ಪುತ್ರ ಮತ್ತು ಈನಾಡು ವ್ಯವಸ್ಥಾಪಕ ನಿರ್ದೇಶಕ ಚೆರುಕುರಿ ಕಿರಣ ಅವರು ವೈದಿಕ ಸ್ತೋತ್ರಗಳ ನಡುವೆ ಚಿತೆಗೆ ಅಗ್ನಿಸ್ಪರ್ಷ ಮಾಡಿ, ಧಾರ್ಮಿಕ ವಿಧಿಗಳನ್ನು ನಡೆಸಿದರು. ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಚಿತ್ರರಂಗದ ಗಣ್ಯರು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದರು.
ತಮ್ಮ ನಿವಾಸದಿಂದ ರಾಮೋಜಿ ರಾವ್ ಅವರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆಗಾಗಿ ಫಿಲ್ಮ್ ಸಿಟಿಯೊಳಗಿನ ಸ್ಥಳವಾದ ಸ್ಮೃತಿ ವನಮ್‌ಗೆ ತಂದಾಗ ತೆಲುಗು ದೇಶಂ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ಪಾರ್ಥಿವ ಶರೀರಕ್ಕೆ ಹೆಗಲು ನೀಡಿದರು.

ಪ್ರಮುಖ ಸುದ್ದಿ :-   ಕ್ರಿಕೆಟ್‌ | ಚಾಂಪಿಯನ್ಸ್ ಟ್ರೋಫಿಗೆ ಭಾರತದ ತಂಡ ಪ್ರಕಟ

ತಮ್ಮ 88 ನೇ ವಯಸ್ಸಿನಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾದ ರಾಮೋಜಿ ರಾವ್ ಅವರಿಗೆ ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು ಮತ್ತು ಫಿಲ್ಮ್ ಸಿಟಿ ಮತ್ತು ರಾಮೋಜಿ ಗ್ರೂಪ್‌ನ ವಿವಿಧ ಕಂಪನಿಗಳ ಉದ್ಯೋಗಿಗಳು ಕಣ್ಣೀರಿನ ವಿದಾಯ ಹೇಳಿದರು.ಉಸಿರಾಟದ ತೊಂದರೆಯಿಂದ ಜೂನ್ 5 ರಂದು ದಾಖಲಾಗಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ತೆಲಂಗಾಣ ಸಚಿವರಾದ ತುಮ್ಮಲ ನಾಗೇಶ್ವರ ರಾವ್, ಸೀತಕ್ಕ ಮತ್ತು ಜೂಪಲ್ಲಿ ಕೃಷ್ಣರಾವ್, ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ, ರಘುರಾಮ ಕೃಷ್ಣರಾಜು, ಬಿಆರ್‌ಎಸ್ ಮುಖಂಡರಾದ ಇ.ದಯಾಕರ್ ರಾವ್, ನಾಮ ನಾಗೇಶ್ವರ ರಾವ್, ಕೆ.ಆರ್.ಸುರೇಶ್ ರೆಡ್ಡಿ, ರವಿಚಂದ್ರ, ಕಾಂಗ್ರೆಸ್ ಮುಖಂಡ ವಿ. .ಹನುಮಂತ ರಾವ್, ಬಿಜೆಪಿ ಮುಖಂಡರಾದ ಜಿ.ಕಿಶನ್ ರೆಡ್ಡಿ, ಬಂಡಿ ಸಂಜಯ, ಸುಜನಾ ಚೌಧರಿ ಮೊದಲಾದವರು ಇದ್ದರು.

https://twitter.com/i/status/1799676907631558841

ಆಂಧ್ರಪ್ರದೇಶ ಸರ್ಕಾರದ ಮೂವರು ಹಿರಿಯ ಐಎಎಸ್ ಅಧಿಕಾರಿಗಳು ಕೂಡ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಹಿರಿಯ ನಟ ಮುರಳಿ ಮೋಹನ್, ಚಿತ್ರ ನಿರ್ಮಾಪಕರಾದ ಬೋಯಪತಿ ಶ್ರೀನು, ಸುರೇಶಬಾಬು ಸೇರಿದಂತೆ ಮನರಂಜನಾ ಕ್ಷೇತ್ರದ ಹಲವರು ಉಪಸ್ಥಿತರಿದ್ದರು.
ನವೆಂಬರ್ 16, 1936 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಜನಿಸಿದ ರಾಮೋಜಿ ರಾವ್‌, ಆಗಸ್ಟ್ 10, 1974 ರಂದು ವಿಶಾಖಪಟ್ಟಣದಿಂದ ತೆಲುಗು ದಿನಪತ್ರಿಕೆ ‘ಈನಾಡು’ ಅನ್ನು ಪ್ರಾರಂಭಿಸಿದರು. ಕಡಿಮೆ ಅವಧಿಯಲ್ಲಿ ಅದು ಅವಿಭಜಿತ ಆಂಧ್ರಪ್ರದೇಶದ ಪ್ರಮುಖ ದಿನಪತ್ರಿಕೆಯಾಯಿತು. ಮೊದಲ ತಲೆಮಾರಿನ ಉದ್ಯಮಿ, ರಾಮೋಜಿ ರಾವ್ ಅವರು ತೆಲುಗು ಮತ್ತು ಇತರ ಭಾಷೆಗಳಲ್ಲಿ 24 ಗಂಟೆಗಳ ಸುದ್ದಿ ವಾಹಿನಿಯನ್ನು ಪ್ರಾರಂಭಿಸಿದರು. ರಾಮೋಜಿ ರಾವ್ ಅವರು ಅತಿದೊಡ್ಡ ಪ್ರಸಾರವಾದ ತೆಲುಗು ದಿನಪತ್ರಿಕೆ ‘ಈನಾಡು’, ‘ETV’ ವಾಹಿನಿಗಳ ಸಮೂಹ ಕಟ್ಟಿದ್ದರು. ಮತ್ತು ಅವರು ಸ್ಥಾಪಿಸಿದ ರಾಮೋಜಿ ಫಿಲ್ಮ್ ಸಿಟಿಯನ್ನು ವಿಶ್ವದ ಅತಿದೊಡ್ಡ ಚಲನಚಿತ್ರ ನಿರ್ಮಾಣ ಕೇಂದ್ರವೆಂದು ಹೇಳಲಾಗುತ್ತದೆ.
ಮಾಧ್ಯಮ, ಚಲನಚಿತ್ರಗಳು, ಆಹಾರ ಉದ್ಯಮ ಮತ್ತು ತೆಲುಗು ರಾಜಕೀಯದಂತಹ ವಿವಿಧ ಕ್ಷೇತ್ರಗಳಲ್ಲಿ ಅವರು ಅಳಿಸಲಾಗದ ಛಾಪು ಮೂಡಿಸಿದರು.

ಪ್ರಮುಖ ಸುದ್ದಿ :-   ಸೈಫ್ ಅಲಿ ಖಾನಗೆ ಚಾಕು ಇರಿತ : ಮಧ್ಯಪ್ರದೇಶದಲ್ಲಿ ಶಂಕಿತನೊಬ್ಬನ ಬಂಧನ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement