ಧಾರವಾಡ: ನೀಟ್‌, ಜೆಇಇ ಅಡ್ವಾನ್ಸ್‌ ಪರೀಕ್ಷೆಯಲ್ಲಿ ಅರ್ಜುನ ಕಾಲೇಜ್‌ ವಿದ್ಯಾರ್ಥಿಗಳ ಉತ್ತಮ ಸಾಧನೆ

ಧಾರವಾಡ : ಧಾರವಾಡದ ಅರ್ಜುನ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚಿಗೆ ನಡೆದ 2024ರ ನೀಟ್‌ ಹಾಗೂ ಜೆಇಇ ಅಡ್ವಾನ್ಸ್‌ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ನೀಟ್‌ ಪರೀಕ್ಷೆಯಲ್ಲಿ ಅರ್ಜುನ ವಿಜ್ಞಾನ ಪದವಿಪೂರ್ವ ಕಾಲೇಜ್‌ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಾದ ಪ್ರದ್ನ್ಯಾ ಈಶ್ವರಪ್ಪಗೋಳ ಅವರು ದೇಶಕ್ಕೆ 601 ಹಾಗೂ ಗೌತಮ ಪಟೇಲ್‌ ದೇಶಕ್ಕೆ 625ನೇ ರ್ಯಾಂಕ್‌ ಪಡೆದಿದ್ದಾರೆ.
ಅಲ್ಲದೆ 2024ರ ಜೆಇಇ ಅಡ್ವಾನ್ಸ್‌ (JEE Advance) ಪರೀಕ್ಷೆಯಲ್ಲಿ ಅರ್ಜುನ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿ ರಜತ್‌ ಹೆಗಡೆ ಅಖಿಲ ಭಾರತ ರ್ಯಾಂಕ್‌ನಲ್ಲಿ ದೇಶಕ್ಕೆ 1207ನೇ ರ್ಯಾಂಕ್‌ ಪಡೆದಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳಾದ ಪ್ರಣವ ನಾಗರಾಜ ಕಾಮತ್ ದೇಶಕ್ಕೆ 5986 ಹಾಗೂ ಅಹಮದ್ ನಬೀಲ್ ಕರಿಗಾರ್ ದೇಶಕ್ಕೆ 11011 ಹಾಗೂ ವಿ ಮನೋಜ ಕಶ್ಯಪ 12930ನೇ ರ್ಯಾಂಕ್‌ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಪ್ರಾಂಶುಪಾಲರು, ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement