ವೀಡಿಯೊ..| ಪ್ಲಾಸ್ಟಿಕ್ ನೀರಿನ ಬಾಟಲಿಯಿಂದ ಕಾರಿಗೆ ಬೆಂಕಿ ಹೊತ್ತಿಕೊಂಡ ವೀಡಿಯೊ ವೈರಲ್; ಇದಕ್ಕೆ ಕಾರಣ ತೋರಿಸಿದ ಇನ್ಸ್ಟಾಗ್ರಾಮರ್‌-ವೀಕ್ಷಿಸಿ

ರಸ್ತೆ ಬದಿಯಲ್ಲಿ ಕಾರೊಂದು ಹೊತ್ತಿ ಉರಿಯುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಾಹನದೊಳಗೆ ಬಿಟ್ಟಿದ್ದ ನೀರಿನ ಬಾಟಲಿಯಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಬಾಟಲಿಯು ಸೂರ್ಯನ ತೀವ್ರ ಶಾಖದ ಕಿರಣಕ್ಕೆ ಒಡ್ಡಿಕೊಂಡ ನಂತರ ನಂತರ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ.
ಘಟನೆಯ ಸ್ಥಳವು ಅಸ್ಪಷ್ಟವಾಗಿದ್ದರೂ, ಇದು ದೆಹಲಿ-ಎನ್‌ಸಿಆರ್ ಪ್ರದೇಶದ ಘಟನೆ ಎಂದು ನಂಬಲಾಗಿದೆ, ಈ ಪ್ರದೇಶವು ಈ ವರ್ಷದ ಆರಂಭದಲ್ಲಿ ಶಾಖದ ಅಲೆಗೆ ಸಾಕ್ಷಿಯಾಗಿದೆ.
ವೀಡಿಯೊ ಆರಂಭವಾಗುತ್ತಿದ್ದಂತೆಯೇ ಕಾರು ಬೆಂಕಿಯಲ್ಲಿ ಸುಟ್ಟು ಕಪ್ಪು ಬಣ್ಣಕ್ಕೆ ತಿರುಗುತ್ತಿರುವುದು ಕಂಡುಬಂದಿದೆ. ನಂತರ, ಬೇಸಿಗೆ ಕಾಲದಲ್ಲಿ ಮತ್ತು ಸುಡುವ ಶಾಖದಲ್ಲಿ ಚಾಲನೆ ಮಾಡುವಾಗ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜನರಿಗೆ ಮನವಿ ಮಾಡುವ ಇನ್ಸ್ಟಾಗ್ರಾಮರ್‌ (Instagrammer)ನನ್ನು ತೋರಿಸಿದೆ.

ಪ್ಲಾಸ್ಟಿಕ್‌ ಬಾಟಲಿ ಕಾರಿನಲ್ಲಿ ಇಟ್ಟರೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಬಗ್ಗೆ ಎಚ್ಚರಿಸುವ ವೀಡಿಯೊ…
ವೀಡಿಯೋದಲ್ಲಿ ವಾಹನದೊಳಗೆ ನೀರಿನ ಬಾಟಲಿಯನ್ನು ಇಟ್ಟಾಗ ಅದು ಸೂರ್ಯನ ಬೆಳಕಿಗೆ ಹೇಗೆ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗುತ್ತದೆ ಎಂದು ತೋರಿಸುತ್ತದೆ ಮತ್ತು ಇನ್ಸ್ಟಾಗ್ರಾಮರ್‌ (Instagrammer) ಬಿಸಿಲಿನ ವಾತಾವರಣದಲ್ಲಿ ಸೀಟುಗಳ ಮೇಲೆ ನೀರಿನ ಬಾಟಲಿಗಳನ್ನು ಇಡುವುದು ಹೇಗೆ ಅಪಾಯಕಾರಿ ಎಂದು ತೋರಿಸಿದ್ದಾರೆ. “ಈ ಬಾಟಲಿಗಳು ನನ್ನ ಕಾರ್ ಸೀಟ್‌ಗಳನ್ನು ಸುಡುತ್ತಿವೆ. ಈ ಪಾರದರ್ಶಕ ಪ್ಲಾಸ್ಟಿಕ್ ಕಂಟೈನರ್‌ಗಳು ಭೂತಗನ್ನಡಿಯಂತೆ ಕಾರ್ಯನಿರ್ವಹಿಸುತ್ತವೆ ಮತ್ತು ಸೀಟನ್ನು ಸುಡುವ ಸಾಮರ್ಥ್ಯವನ್ನು ಹೊಂದಿವೆ. ಮತ್ತು ಸೂರ್ಯನ ಬೆಳಕಿಗೆ ಭೂತಗನ್ನಡಿಯಂತೆ ಕಾರ್ಯನಿರ್ವಹಿಸುವ ಪ್ಲಾಸ್ಟಿಕ್‌ ನೀರಿನ ಬಾಟಲಿಗಳ ಮೇಲೆ ಸೂರ್ಯ ಕಿರಣಗಳು ಬಿದ್ದಾಗಕಾರಿನ ಸೀಟಿಗೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ; ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಆರ್‌ಜೆಡಿ

ತನ್ನ ವೀಡಿಯೋದಲ್ಲಿ, ತನ್ನ ಕಾರಿನ ಆಸನದ ಮೇಲೆ ಇಟ್ಟ ಪ್ಲಾಸ್ಟಿಕ್‌ ಬಾಟಲಿಯ ಮೇಲೆ ಸೂರ್ಯನ ಬೆಳಕು ಹೇಗೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದನ್ನು ಅವರು ತೋರಿಸಿದ್ದಾರೆ, ಅದು ನೀರಿನ ಬಾಟಲಿಯು ಭೂತ ಕನ್ನಡಿಯಂತೆ ಸೂರ್ಯ ಬೆಳಕಿನ ಕಿರಣಗಳನ್ನು ಒಂದೇ ಕಡೆ ಕೇಂದ್ರೀಕರಿಸಿವುದರಿಂದ ಅದು ಕಾರಿನಲ್ಲಿ ಹೊಗೆಯನ್ನು ಬಿಡುಗಡೆ ಮಾಡಿತು ಮತ್ತು ನಂತರ ಬೆಂಕಿ ಹೊತ್ತಿಕೊಂಡು ಕಾರಿನ ಸೀಟಿನ ಕುಶನ್ ಮೇಲೆ ರಂಧ್ರಗಳನ್ನು ಸೃಷ್ಟಿಸಿತು.
ಹೀಗಾಗಿ ಜನರು ತಮ್ಮ ಡ್ರೈವಿಂಗ್ ಸಮಯದಲ್ಲಿ ನೀರಿನ ಬಾಟಲಿಗಳನ್ನು ಗಮನಿಸದೆ ಕಾರಿನಲ್ಲಿ ಹಾಗೆಯೇ ಬಿಡದಂತೆ ಅವರು ಸಲಹೆ ನೀಡಿದ್ದಾರೆ. “ನೀರಿನ ಬಾಟಲ್ ನಿಮ್ಮ ಕಾರಿಗೆ ಬೆಂಕಿ ಹೊತ್ತಿಕೊಳ್ಳಬಹುದು. ಆದ್ದರಿಂದ, ನೀವು ಈ ಬಾಟಲಿಗಳನ್ನು ವಾಹನದಲ್ಲಿ ಇಡಬೇಕೆಂದಿದ್ದರೆ ಅವುಗಳನ್ನು ಸೀಟಿನ ಕೆಳಗೆ ಇರಿಸಿ (ಸೂರ್ಯನ ಬೆಳಕಿಗೆ ನೇರವಾಗಿ ಒಡ್ಡಿಕೊಳ್ಳುವುದರಿಂದ ದೂರ) ಎಂದು ಅವರು ಹೇಳಿದರು.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement