ಶಿರಸಿ ಟಿ ಎಸ್ ಎಸ್ : ಹೈಕೋರ್ಟ್‌ ತಡೆಯಾಜ್ಞೆ

ಶಿರಸಿ: ಇಲ್ಲಿಯ ಪ್ರಸಿದ್ಧ ಸಹಕಾರಿ ಸಂಸ್ಥೆ ಟಿಎಸ್ಎಸ್ ಆಡಳಿತ ಮಂಡಳಿಗೆ ಸಂಬಂಧಿಸಿದಂತೆ ಬೆಳಗಾವಿ ಸಹಕಾರ ಸಂಘಗಳ ಸಂಯುಕ್ತ ನಿಬಂಧಕರ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ರಾಜ್ಯ ಹೈಕೋರ್ಟಿನ ಧಾರವಾಡ ಪೀಠ ತಡೆಯಾಜ್ಞೆ ನೀಡಿದೆ.
ಗುರುವಾರ ಪೀಠದ ಮುಂದೆ ಈ ಪ್ರಕರಣ ವಿಚಾರಣೆಗೆ ಬಂದಾಗ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಈ ಮೊದಲು, ಟಿಎಸ್ಎಸ್ ಆಡಳಿತ ಮಂಡಳಿ ಚುನಾವಣೆ ನಿಯಮ ಬದ್ಧವಾಗಿ ನಡೆದಿಲ್ಲ ಎಂಬುದಾಗಿ ಸಂಸ್ಥೆಯ ಇಬ್ಬರು ಸದಸ್ಯರು. ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅದರ ವಿಚಾರಣೆ ನಡೆಸಿದ ಜಿಲ್ಲಾ ನಿಬಂಧಕರ ನ್ಯಾಯಾಲಯವು ಸಂಸ್ಥೆಯ ಆಡಳಿತ ಮಂಡಳಿಯನ್ನು ರದ್ದುಗೊಳಿಸಿತ್ತು. ಹಾಗೂ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಮಾಡಿತ್ತು. ಆದರೆ ಇದನ್ನು ಪ್ರಶ್ನಿಸಿ ಟಿಎಸ್‌ಎಸ್‌ ಆಡಳಿತ ಮಂಡಳಿಯವರು ಸಹಕಾರ ಸಂಘಗಳ ಬೆಳಗಾವಿ ವಿಭಾಗದ ಸಂಯುಕ್ತ ನಿಬಂಧಕರ ನ್ಯಾಯಾಲಯಕ್ಕೆ ತೆರಳಿತ್ತು. ವಿಚಾರಣೆ ನಡೆಸಿದ ಅದು ಜಿಲ್ಲಾ ಉಪನಿಬಂಧಕರ ನ್ಯಾಯಾಲಯ ನೀಡಿದ ಆದೇಶಕ್ಕೆ ತಡೆ ನೀಡಿತ್ತು. ಇದನ್ನು ಧಾರವಾಡ ಹೈಕೋರ್ಟ್‌ ಪೀಠದಲ್ಲಿ ಪ್ರಶ್ನಿಸಲಾಗಿತ್ತು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement