ಕಾಸರಗೋಡು: ಸಂಪೂರ್ಣ ದರ್ಶನ ನೀಡಿದ ಅನಂತಪುರ ದೇವಸ್ಥಾನದ ಮೊಸಳೆ ಮರಿ ಬಬಿಯಾ

ಕಾಸರಗೋಡು : ಸರೋವರ ಕ್ಷೇತ್ರವೆಂದೇ ಖ್ಯಾತಿ ಪಡೆದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ತಿಂಗಳ ಹಿಂದೆ ಪ್ರಥಮ ಬಾರಿಗೆ ಕಾಣಿಸಿಕೊಂಡ ಬಬಿಯಾ ಹೆಸರಿನ ಮೊಸಳೆ ಮರಿ ಜೂನ್ 14ರ ಸಂಜೆ ಪ್ರಾಂಗಣದ ಎತ್ತರದ ಜಾಗದಲ್ಲಿ ಭಕ್ತರಿಗೆ ಮೊದಲ ಸಲ ಸಂಪೂರ್ಣ ದರ್ಶನ ನೀಡಿದೆ ಎಂದು ವರದಿಯಾಗಿದೆ.
ಈ ದೇವಾಲಯದ ಕೊಳದಲ್ಲಿ ಸುಮಾರು 80 ವರ್ಷಗಳ ಕಾಲ ವಾಸಿಸುತ್ತಿದ್ದ ಮೂಲ ಬಬಿಯಾ-3 ಮೊಸಳೆ 2022ರ ಅಕ್ಟೋಬರ್ 9 ರಂದು ಮೃತಪಟ್ಟಿತ್ತು. ಬಬಿಯಾ ಮೃತಪಟ್ಟ ಸುಮಾರು ಒಂದು ವರ್ಷದ ನಂತರ, ದೇವಾಲಯದ ಕೊಳದಲ್ಲಿ ಈ ಮೊಸಳೆ ಮರಿ ಕಾಣಿಸಿಕೊಂಡಿತ್ತು. ಆದರೆ, ಯಾವುದೇ ಭಕ್ತರು ಈ ಮೊಸಳೆ ಮರಿಯ ಸಂಪೂರ್ಣ ದರ್ಶನ ಆಗಿರಲಿಲ್ಲ.

ಆದರೆ ಶುಕ್ರವಾರ ಬಬಿಯಾ-3 ಹೆಸರಿನ ಮೊಸಳೆ ಮರಿ ದೇವಸ್ಥಾನದ ಗರ್ಭಗುಡಿಯ ಮುಂಭಾಗದ ಪ್ರಾಂಗಣದ ಕಲ್ಲಿನ ಮೇಲೆ ವಿಶ್ರಮಿಸುತ್ತಿದ್ದ ದೃಶ್ಯ ಸೆರೆಯಾಗಿದೆ. ಅದು ಅಲ್ಲಿ ವಿಶ್ರಮಿಸುತ್ತಿದ್ದ ವೇಳೆ ದೇವಸ್ಥಾನ ಬಂದ್ ಆಗಿತ್ತು. ಸಂಜೆ ವೇಳೆಗೆ ದೇವಸ್ಥಾನಕ್ಕೆ ಆಗಮಿಸಿದ್ದ ಅರ್ಚಕರು ಿದನ್ನು ಕಂಡು ಅದರ ಫೋಟೋ ತೆಗೆದು ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾರೆ.
ಇಲ್ಲಿನ ಕೊಳದಲ್ಲಿರುವ ಮೊಸಳೆಯನ್ನು ದೇವರ ಮೊಸಳೆ ಎಂದೇ ಭಕ್ತರು ನಂಬುತ್ತಾರೆ. ಅಲ್ಲದೆ, ದೇವಸ್ಥಾನದ ಒಂದು ಮೊಸಳೆ ಮೃತಪಟ್ಟಾಗ ಮತ್ತೊಂದು ಮೊಸಳೆ ಆಗಮಿಸುತ್ತದೆ ಎನ್ನುವುದು ಇಲ್ಲಿನವರ ನಂಬಿಕೆಯಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು...| ಪಾಕಿಸ್ತಾನದ 4 ವಾಯುನೆಲೆಗಳ ಭಾರತದ ದಾಳಿ, ಡ್ರೋನ್ ಉಡಾವಣಾ ಪ್ಯಾಡ್‌ ನಾಶ, ಪಾಕ್‌ 2 ಫೈಟರ್ ಜೆಟ್ ಹೊಡೆದುರುಳಿಸಿದ ಸೇನೆ

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement