ವೀಡಿಯೊ..| ಕುಸಿದು ಬಿದ್ದ ಹೊಸ ಸೇತುವೆ ; 12 ಕೋಟಿ ರೂ. ನೀರು ಪಾಲು

ಬಿಹಾರದ ಅರಾರಿಯಾದಲ್ಲಿ ನಿರ್ಮಾಣ ಹಂತದ ಸೇತುವೆಯ ಒಂದು ಭಾಗ ಮಂಗಳವಾರ ಕುಸಿದಿದೆ. ಕೋಟಿಗಟ್ಟಲೆ ಖರ್ಚು ಮಾಡಿ ಬಕ್ರಾ ನದಿಗೆ ನಿರ್ಮಿಸಿದ ಕಾಂಕ್ರೀಟ್ ಸೇತುವೆ ಕೆಲವೇ ಸೆಕೆಂಡ್ ಗಳಲ್ಲಿ ಕುಸಿದುಬಿದ್ದಿದೆ.
₹ 12 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆ ಉದ್ಘಾಟನೆಗೂ ಮುನ್ನವೇ ಕುಸಿದಿದ್ದು, ಯಾವುದೇ ಪ್ರಾಣಹಾನಿ ಬಗ್ಗೆ ವರದಿಯಾಗಿಲ್ಲ. ಈ ಸೇತುವೆಯ ಸಂಪರ್ಕ ರಸ್ತೆಗಳ ನಿರ್ಮಾಣ ಬಾಕಿ ಉಳಿದಿದ್ದುದರಿಂದ ಇನ್ನು ಸಾರ್ವಜನಿಕರ ಬಳಕೆಗೆ ಮುಕ್ತವಾಗಿರಲಿಲ್ಲ. ಅರಾರಿಯಾ ಜಿಲ್ಲೆಯಲ್ಲಿನ ಕುರ್ಸಾ ಕಾಂತಾ ಮತ್ತು ಸಿಕ್ಟಿ ನಡುವೆ ಸಂಪರ್ಕ ಕಲ್ಪಿಸುವುದು ಸೇತುವೆ ನಿರ್ಮಾಣದ ಉದ್ದೇಶವಾಗಿತ್ತು.

ವೀಡಿಯೊ ದೃಶ್ಯಗಳಲ್ಲಿ ಸೇತುವೆಯು ವೇಗವಾಗಿ ಹರಿಯುವ ನದಿಯ ಮೇಲೆ, ಒಂದು ಬದಿಗೆ ವಾಲಿರುವುದನ್ನು ತೋರಿಸುತ್ತದೆ. ಘಟನೆ ನಡೆದ ಕೆಲವೇ ಸೆಕೆಂಡುಗಳಲ್ಲಿ ಕುಸಿದ ಭಾಗವು ಕೊಚ್ಚಿಕೊಂಡುಹೋಗಿದೆ ಮತ್ತು ಜನರು ಸುರಕ್ಷತೆ ಸ್ಥಳಕ್ಕೆ ಓಡಿದ್ದಾರೆ. ಕುಸಿದ ಭಾಗದ ಹೆಚ್ಚಿನ ಭಾಗ ನದಿಯ ಮೇಲೆ ಇತ್ತು. ನದಿಯ ದಡದಲ್ಲಿ ನಿರ್ಮಿಸಲಾದ ಸೇತುವೆಯ ಭಾಗವು ಹಾಗೆಯೇ ಉಳಿದಿದೆ.

ಈ ಸೇತುವೆಯ ಮೂರು ಸ್ತಂಭಗಳು ಮೊದಲಿಗೆ ಕುಸಿದು ಬಿದ್ದವು. ನಂತರ ಸೇತುವೆ ಭಾಗ ಕುಸಿದು ಬಿದ್ದಿದೆ. ಕುಸಿತ ಕಂಡಿರುವ ಸೇತುವೆ ಬಿಹಾರ ರಾಜ್ಯ ಸರ್ಕಾರದ ಯೋಜನೆಯಾಗಿದೆ.
ಈ ವರ್ಷದ ಮಾರ್ಚ್‌ನಲ್ಲಿ ಕೋಸಿ ನದಿಗೆ ಅಡ್ಡಲಾಗಿ ಸುಪೌಲ್‌ ಜಿಲ್ಲೆಯಲ್ಲಿ ನಿರ್ಮಾಣ ಆಗುತ್ತಿದ್ದ ಸೇತುವೆಯು ಕುಸಿದಿತ್ತು. ಆಗ ಒಬ್ಬರು ಸಾವಿಗೀಡಾಗಿದ್ದರು ಹಾಗೂ 10 ಮಂದಿ ಗಾಯಗೊಂಡಿದ್ದರು.

ಪ್ರಮುಖ ಸುದ್ದಿ :-   ದಾಂಪತ್ಯ ಜಗಳದಲ್ಲಿ ಉದ್ಯೋಗದಾತರಿಗೆ ಹೆಂಡತಿ ದೂರು ನೀಡುವುದು ಏಕೆ..? ಈ ಪ್ರವೃತ್ತಿಗೆ ಸುಪ್ರೀಂ ಕೋರ್ಟ್ ಕಳವಳ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement