ಮತ್ತೆ ಬಂದ್‌ ಆಗಲಿದೆ ಶಿರಸಿ-ಕುಮಟಾ ಹೆದ್ದಾರಿ….

ಶಿರಸಿ: ಶಿರಸಿ- ಕುಮಟಾ ಹೆದ್ದಾರಿಯಲ್ಲಿ ಬಾಕಿ ಉಳಿದ ರಸ್ತೆ ಅಭಿವೃದ್ಧಿ, ಸೇತುವೆಗಳ ಪುನರ್ ನಿರ್ಮಾಣ ಕಾಮಗಾರಿ ನಡೆಸಲು ಜಿಲ್ಲಾಡಳಿತವು ಅಕ್ಟೋಬರ್‌ 15ರಿಂದ ವಾಹನಗಳಿಗೆ ಸಂಚಾರ ನಿರ್ಬಂಧಿಸಲು ಆದೇಶ ಹೊರಡಿಸಿದ್ದಾರೆ.
ಈ ಮಾರ್ಗದಲ್ಲಿ ಸೇತುವೆಗಳನ್ನು ನಿರ್ಮಾಣ ಮಾಡಬೇಕಿರುವುದರಿಂದ ನಿಮರ್ಮಾಣ ಕಾಮಗಾರಿ ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸುವ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಜಿಲ್ಲಾಧಿಕಾರಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಆಧರಿಸಿ ಜಿಲ್ಲಾಧಿಕಾರಿಗಳು ಮುಂಬರುವ ಅಕ್ಟೋಬರ್‌ 15ರಿಂದ 25-02-2025ರ ವರೆಗೆ ವಾಹನ ಸಂಚಾರ ನಿರ್ಬಂಧಿಸುವಂತೆ ಆದೇಶ ಹೊರಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಬದಲಿ ಮಾರ್ಗವನ್ನು ಬಳಸಿ ಕರಾವಳಿಯಿಂದ ಶಿರಸಿಗೆ ಪ್ರಯಾಣಿಸಲು ಸೂಚಿಸಿ ಆದೇಶ ಮಾಡಲಾಗಿದೆ.
ಪರ್ಯಾಯ ಮಾರ್ಗ
ಕುಮಟಾದಿಂದ ಸಿದ್ದಾಪುರ ಮೂಲಕ ಶಿರಸಿಗೆ ರಾಜ್ಯ ಹೆದ್ದಾರಿ-69 ಮಾರ್ಗವಾಗಿ ಸಂಚರಿಸಬಹುದು. ಅಂಕೋಲಾ ಕಡೆಯಿಂದ ಶಿರಸಿಗೆ ತೆರಳುವ ವಾಹನಗಳು ಯಲ್ಲಾಪುರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ- 63 ಹಾಗೂ ರಾಜ್ಯ ಹೆದ್ದಾರಿ- 93 ಬಳಸಿ ತಲುಪಬಹುದು. ಅಲ್ಲದೆ ಮಂಗಳೂರು, ಹೊನ್ನಾವರ ಕಡೆಯ ವಾಹನಗಳು ಮಾವಿನಗುಂಡಿ ಸಿದ್ದಾಪುರ ಮಾರ್ಗವಾಗಿ ಶಿರಸಿಗೆ ತೆರಳಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಬೆಚ್ಚಿ ಬೀಳಿಸುವ ವೀಡಿಯೊ..| ಬೆಂಗಳೂರು : ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಚರಂಡಿಗೆ ಉರುಳಿ ಬಿದ್ದ ಬಸ್‌ ; ಪೊಲೀಸ್‌ ಅಧಿಕಾರಿ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement